ಯಡಿಯೂರಪ್ಪನವರ ಗುಣಗಾನ ಮಾಡಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.28- ಕರ್ನಾಟಕ ರಾಜ್ಯದ ಅಭಿವೃದ್ಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೊಡುಗೆ ಅಪಾರ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಟ್ವಿಟ್ ಮಾಡಿದ್ದಾರೆ.

ಬಿಜೆಪಿ ಪಕ್ಷ ಕಟ್ಟುವಲ್ಲಿ ಯಡಿಯೂರಪ್ಪ ದಶಕಗಳ ರಾಜ್ಯವೆಲ್ಲ ಸುತ್ತಾಡಿ ಶ್ರಮಿಸಿದ್ದಾರೆ. ಪಕ್ಷ ಸಂಘಟನೆಗೆ ಜನರನ್ನು ಸೇರಿಸುತ್ತಿದ್ದರು. ಬಿಎಸ್‍ವೈ ಅವರು ಬಿಜೆಪಿ ಪಕ್ಷಕ್ಕಾಗಿ ಶ್ರಮಿಸಿರುವುದನ್ನು ಬಣ್ಣಿಸಲು ಶಬ್ಧಗಳಿಲ್ಲ. ಅವರ ಅಪಾರ ಕೊಡುಗೆ ಸ್ಮರಣೀಯ ಎಂದು ಮೋದಿ ಅವರು ಟ್ವಿಟ್ ಮಾಡುವ ಮೂಲಕ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದಾರೆ.

Facebook Comments