ಚಂಡಮಾರುತದಿಂದ ತತ್ತರಿಸಿದ ಜಪಾನ್‍ಗೆ ಮೋದಿ ಸಹಾಯಹಸ್ತ

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ, ಅ.14- ಚಂಡಮಾರುತ ಹಿಗಿಬಿಸ್ ಪೀಡಿತ ಜಪಾನ್‍ಗೆ ಪ್ರಧಾನಿ ನರೇಂದ್ರ ಮೋದಿ ನೆರವು ನೀಡಲು ಮುಂದಾಗಿದ್ದಾರೆ.

ಭಾರತೀಯ ನೌಕಾಪಡೆ ಜಪಾನ್‍ಗೆ ತೆರಳುತ್ತಿದ್ದು, ನೆರವಿನ ಹಸ್ತ ನೀಡಲು ಸಜ್ಜುಗೊಂಡಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ವಿನಾಶಕಾರಿ ಚಂಡಮಾರುತ ಈ ವರೆಗೂ 35ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಅಪಾರ ಪ್ರಮಾಣದ ಹಾನಿಯುಂಟಾಗಿದೆ.

ಭೀಕರ ಪ್ರಕೃತಿ ವಿಕೋಪ ಎದುರಿಸಲು ಜಪಾನ್‍ನ ಜನತೆ ಹಾಗೂ ನನ್ನ ಆಪ್ತಸ್ನೇಹಿತ ಜಪಾನ್ ಪ್ರಧಾನಿ ಶಿಂಜೋ ಅಬೆ ನೇತೃತ್ವದ ನಾಯಕತ್ವ ಸಜ್ಜುಗೊಂಡಿದ್ದು, ಉಂಟಾಗಿರುವ ಪರಿಣಾಮಗಳನ್ನು ತ್ವರಿತಗತಿಯಲ್ಲಿ ನಿರ್ವಹಣೆ ಮಾಡಲಿವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಜಪಾನ್ ನಲ್ಲಿ ಚಂಡಮಾರುತಕ್ಕೆ ಜೀವ ಕಳೆದುಕೊಂಡಿರುವವರಿಗೆ ಭಾರತೀಯರ ಪರವಾಗಿ ಸಂತಾಪ ಸೂಚಿಸುತ್ತೇನೆ, ವಿಪತ್ತಿನಿಂದ ಜಪಾನ್ ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಆಶಿಸುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.

Facebook Comments

Sri Raghav

Admin