ನವಿಲುಗಳಿಗೆ ಆಹಾರ ತಿನಿಸಿದ ಪ್ರಧಾನಿ ಮೋದಿ, ವಿಡಿಯೋ ವೈರಲ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.23- ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿರುವ ರಾಷ್ಟ್ರಪಕ್ಷಿ ನವಿಲುಗಳಿಗೆ ಆಹಾರ ತಿನ್ನಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು ಸಾಕಷ್ಟು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ಈ ವಿಡಿಯೋವನ್ನು ಸ್ವತಃ ಮೋದಿ ಅವರೇ ತಮ್ಮ ಇನ್‍ಸ್ಟ್ರಾಗ್ರಾಂನಲ್ಲಿ ಪೆÇೀಸ್ಟ್ ಮಾಡಿದ್ದಾರೆ. ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಬೆಳಗಿನ ವಾಯು ವಿಹಾರದ ಕೆಲವು ದೃಶ್ಯಗಳುಳ್ಳ 1.47 ನಿಮಿಷಗಳ ಈ ವಿಡಿಯೋದಲ್ಲಿ ನವಿಲುಗಳಿಗೆ ಮೋದಿ ಅವರು ಕಾಳು ಹಾಕುತ್ತಿರುವ ದೃಶ್ಯಗಳಿವೆ.

ಅಲ್ಲದೆ ತಮ್ಮ ನಿವಾಸದಿಂದ ಕಚೇರಿವರೆಗೆ ಬೆಳಗಿನ ವಾಯುವಿಹಾರದ ದೃಶ್ಯ ತುಣುಕುಗಳಿವೆ. ಮೋದಿ ಅವರು ತಮ್ಮ ನಿವಾಸದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿರುವಂತೆ ಪಕ್ಷಿಗಳು ಗೂಡು ಕಟ್ಟಲು ಅನುಕೂಲವಾಗುವಂತಹ ರಚನೆಯನ್ನು ನಿರ್ಮಿಸಿದ್ದು,

ಇಲ್ಲಿ ಅನೇಕ ಹಕ್ಕಿಗಳು ಗೂಡು ಕಟ್ಟಿವೆ. ಈ ವಿಡಿಯೋದಲ್ಲಿ ಪ್ರಧಾನಿ ಹಿಂದಿ ಕವನವೊಂದನ್ನು ವಾಚಿಸಿರುವುದು ಸಹ ಕಾಣಬಹುದು.

Facebook Comments

Sri Raghav

Admin