ನಾಳೆ ಪ್ರಧಾನಿ ಗುಜರಾತ್ ಭೇಟಿ, ಕೆವಾಡಿಯಾದ ಸರಣಿ ಕಾರ್ಯಕ್ರಮಗಳಲ್ಲಿ ಭಾಗಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.29- ರಾಷ್ಟ್ರೀಯ ಏಕತೆ ದಿನಾಚರಣೆಯ(ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ) ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‍ನ ಕೆವಾಡಿಯಾದಲ್ಲಿ ನಡೆಯುವ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಅಕ್ಟೋಬರ್ 31ರಂದು ಪಟೇಲ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು, ಪಟೇಲ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಿದ್ದು, ಏಕ್ತಾ ಪ್ರತಿಜ್ಞಾ ಮತ್ತು ಏಕ್ತಾ ದಿವಾಸ್ ಪೆರೇಡ್‍ಗೆ ಸಾಕ್ಷಿಯಾಗಲಿದ್ದಾರೆ ಎಂದು ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೆವಾಡಿಯಾದ ಸಮಗ್ರ ಅಭಿವೃದ್ಧಿಯ ಭಾಗವಾಗಿ ಪ್ರಧಾನಿ ಮೋದಿ ನಾಳೆ ಮತ್ತು ಅ.31ರಂದು ವಿವಿಧ ಯೋಜನೆಗಳಿಗೆ ಚಾಲನೆ ನಿಡಲಿದ್ದಾರೆ. ಇವುಗಳಲ್ಲಿ ಏಕ್ತಾ ಕ್ರೂಸ್ ಸೇವೆಯ ಪ್ರತಿಮೆ ಟು ಯೂನಿಟಿ, ಅಲ್ಲಿನ ಏಕ್ತಾ ಮಾಲ್ ಮತ್ತು ಮಕ್ಕಳ ನ್ಯೂಟ್ರಿಷನ್ ಪಾರ್ಕ್ ಉದ್ಘಾಟನೆಯೂ ಸೇರಿವೆ.

ಬಳಿಕ ಪ್ರಧಾನಿ ಮೋದಿ ಯುಎನ್‍ನ ಎಲ್ಲಾ ಅಧಿಕೃತ ಭಾಷೆಗಳಲ್ಲಿ ಸ್ಟ್ಯಾಚ್ಯೂ ಆಫ್ ಯೂನಿಟಿಯ ವೆಬ್‍ಸೈಟ್ ನ್ನು ಅನಾವರಣಗೊಳಿಸಲಿದ್ದು, ಕೆವಾಡಿಯಾ ಆ್ಯಪ್‍ಅನ್ನು ಯೂನಿಟಿ ಗ್ಲೋ ಗಾರ್ಡನ್‍ನಲ್ಲಿ ಬಿಡುಗಡೆ ಮಾಡಲಿದ್ದಾರೆ. ನಂತರ ಕೆವಾಡಿಯಾದ ವೀಡಿಯೊ ಕಾನ್ಫರೆನ್ಸ್ ಮೂಲಕ ಮುಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (ಎಲ್ಬಿಎಸ್‍ಎನ್‍ಎಎ) ಯಲ್ಲಿ ಭಾರತೀಯ ನಾಗರಿಕ ಸೇವೆಗಳ ಪ್ರೊಬೇಷನರ್‍ಗಳ ಬಗ್ಗೆ ಪ್ರಧಾನಿ ಮಾತನಾಡಲಿದ್ದಾರೆ.

Facebook Comments