ಸರ್ವರಿಗೂ ಅತ್ಯುತ್ತಮ ಶಿಕ್ಷಣ, 462 ಏಕಲವ್ಯ ಮಾದರಿ ಶಾಲೆಗಳ ಸ್ಥಾಪನೆ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ರಾಂಚಿ, ಸೆ.12-ಸರ್ವರಿಗೂ ಅತ್ಯುತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ದೇಶಾದ್ಯಂತ 462 ಏಕಲವ್ಯ ಮಾದರಿ ಶಾಲೆಗಳ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಜಾರ್ಖಂಡನ ರಾಜಧಾನಿ ರಾಂಚಿಯಲ್ಲಿ ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಮಹತ್ವದ ಯೋಜನೆಗೆ ಪ್ರಧಾನಿಯವರು ಚಾಲನೆ ನೀಡಲಾಗಿದೆ.

ಏಕಲವ್ಯ ಮಾದರಿ ಶಾಲೆಗಳ ಸ್ಪಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಸರ್ವರಿಗೂ ಅತ್ಯುತ್ತಮ ಶಿಕ್ಷಣ ಲಭಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಬುಡಕಟ್ಟು ಜನರ ಮಕ್ಕಳ ಶಿಕ್ಷಣಕ್ಕಾಗಿ ಕೈಗೊಂಡಿರುವ ಯೋಜನೆ ಮಾದರಿಯಾಗಿದೆ ಎಂದು ಬಣ್ಣಿಸಿದರು.

ಜಾರ್ಖಂಡ ಮುಖ್ಯಮಂತ್ರಿ ರಘುಬೀರ್‍ದಾಸ್ ಸೇರಿದಂತೆ ಅನೇಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯೋಜನೆಯ ವೈಶಿಷ್ಟ್ಯತೆಗಳು: ಪ್ರತಿ ವಿದ್ಯಾರ್ಥಿಯ ವಾರ್ಷಿಕ ಅನುದಾನವನ್ನು 61,500ರಿಂದ ರೂ. 1,09,000ಕ್ಕೆ ಹೆಚ್ಚಿಸಲಾಗಿದೆ. ಪ್ರತಿ ಶಾಲೆಯ ನಿರ್ಮಾಣ ವೆಚ್ಚವನ್ನು 12 ಕೋಟಿಯಿಂದ 20 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ಈಶಾನ್ಯ, ಪವರ್ತನ ಪ್ರದೇಶಗಳು ಮತ್ತು ವಾಮಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಿಗೆ ಶೇ. 20ರಷ್ಟು ಹೆಚ್ಚುವರಿ ನಿರ್ಮಾಣ ವೆಚ್ಚ ಮಂಜೂರು.ಪಠ್ಯೇತರ ಚಟುವಟಿಕೆಗಳಿಗೆ ವಿಶೇಷ ಗಮನ ನೀಡಲಾಗಿದೆ. ಏಕಲವ್ಯ ಮಾಡೆಲ್ ಡೇ ಬೋರ್ಡಿಂಗ್ ಶಾಲೆಗಳನ್ನು ರೂಪಿಸುವುದು.

ಶಾಲೆಯ ಸಾಧನೆಗಳು:
ಪ.ಪಂ ಕುಟುಂಬಗಳ ಮಕ್ಕಳಿಗೆ ಅವರ ಪರಿಸರದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಲಾಗಿದೆ. ಶೇಕಡಾ 90ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತೀರ್ಣ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಕ್ರೀಡಾ ಸಾಧನೆ. ರಾಷ್ಟ್ರೀಯ ಮಟ್ಟದ ಸಾಂಸ್ಕøತಿಕ ಮತ್ತು ಕ್ರೀಡಾ ಹಬ್ಬಗಳ ಆಯೋಜನೆ.

Facebook Comments