LOC ಯಿಂದ LAC ವರೆಗೂ ನಮ್ಮನ್ನು ಎದುರಿಸಲು ಯಾರಿಗೂ ಸಾಧ್ಯವಿಲ್ಲ : ಮೋದಿ ಭಾಷಣದ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.15-ಗಡಿ ನಿಯಂತ್ರಣ ರೇಖೆಯಿಂದ(ಎಲ್‍ಒಸಿ) ವಾಸ್ತವ ಹತೋಟಿ ರೇಖೆವರೆಗೂ(ಎಲ್‍ಎಸಿ) ನಮ್ಮನ್ನು ಎದುರಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಪಾಕಿಸ್ತಾನ ಮತ್ತು ಚೀನಾಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪರೋಕ್ಷವಾಗಿ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಬೌಮತ್ವಕ್ಕೆ ತೊಂದರೆ ನೀಡಲು ಹೊರಟವರಿಗೆ ನಮ್ಮ ಯೋಧರು ದಿಟ್ಟ ಉತ್ತರ ನೀಡಿದ್ದಾರೆ. ದೇಶದ ರಕ್ಷಣೆಗಾಗಿ ಭಾರತೀಯರು ಎಂದು ತ್ಯಾಗಕ್ಕೂ ಸಿದ್ಧ ಎಂದು ಅವರು ಹೆಮ್ಮೆಯಿಂದ ಹೇಳಿದರು.

ಲಡಾಖ್‍ನ ಗಾಲ್ವಾನ್ ಪ್ರಾಂತ್ಯದಲ್ಲಿ ನಮ್ಮ ವೀರ ಯೋಧರು ಶೌರ್ಯವು ಭಾರತವು ವೈರಿಗಳಿಗೆ ಯಾವ ರೀತಿ ದಿಟ್ಟ ಪ್ರತ್ಯುತ್ತರ ನೀಡುತ್ತದೆ ಎಂದು ಇಡೀ ವಿಶ್ವಕ್ಕೆ ಮನವರಿಕೆಯಾಗಿದೆ ಎಂದು ಪ್ರಧಾನಿ ತಿಳಿಸಿದರು.

74ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಇಂದು ಬೆಳಗ್ಗೆ ರಾಷ್ಟ್ರೀಯ ತ್ರಿವರ್ಣ ದ್ವಜÁರೋಹಣ ನೆರವೇರಿಸಿ ಪ್ರಧಾನಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ತನ್ನ ಭಾಷಣದ ಆರಂಭದಲ್ಲೇ ಹುತಾತ್ಮ ಯೋಧರು ಮತ್ತು ಭದ್ರತಾಪಡೆಗಳ ಸೌರ್ಯ, ಸಾಹಸ ಮತ್ತು ತ್ಯಾಗವನ್ನು ಮೋದಿ ಗುಣಗಾನ ಮಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ತ್ಯಾಗ-ಬಲಿದಾನ ಮಾಡಿದ ಪ್ರತಿಯೊಬ್ಬ ಹುತಾತ್ಮರನ್ನೂ ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ಸಂದರ್ಭವಿದು ಎಂದು ನರೇಂದ್ರ ಮೋದಿ ಭಾವುಕರಾಗಿ ನುಡಿದರು.

ಉಗ್ರವಾದವಿರಲಿ, ಆತಂಕವಾದವಿರಲಿ ಅಥವಾ ವಿಸ್ತಾರವಾದವಿರಲಿ ಈ ಎಲ್ಲಾ ಪಿಡುಗುಗಳ ವಿರುದ್ದ ನಾವು ಕೆಚ್ಚೆದೆಯ ಹೋರಾಟ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆ ಹಿಂದೆಂದಿಗಿಂತಲೂ ಬಿರುಸಾಗಿ ಮುಂದುವರಿದಿದೆ.

ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿ ಸಂಘಟನೆಗಳು, ಉಗ್ರರು ಮತ್ತು ಅವರ ಬೆಂಬಲಿಗರನ್ನು ಸಂಪೂರ್ಣ ಮಟ್ಟ ಹಾಕಲು ನಾವು ಬದ್ಧವಾಗಿದ್ದೇನೆ ಎಂದು ಅವರು ತಿಳಿಸಿದರು. ದೇಶದ ಗಡಿಯಲ್ಲಿ 1 ಲಕ್ಷ ಎನ್‍ಸಿಸಿ ಕೆಡೆಟ್‍ಗಳನ್ನು ನಿಯೋಜನೆ ಮಾಡಲಾಗುತ್ತದೆ. ಇದರಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಅವರು ಪ್ರಕಟಿಸಿದರು.

ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯದಲ್ಲಿ ಚುನಾವಣೆಗಳು ನಡೆಯುತ್ತವೆ. ಅಲ್ಲಿ ಜನಪ್ರತಿನಿಗಳು ಆಯ್ಕೆಯಾಗುತ್ತದೆ. ಕಣಿವೆಯಲ್ಲಿ ಜನತಂತ್ರ ವ್ಯವಸ್ಥೆ ಪರಿಪೂರ್ಣವಾಗಿ ಜಾರಿಗೆ ಬರುತ್ತದೆ ಎಂದು ಅವರು ನುಡಿದರು.

ಈ ವರ್ಷವು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ದಿ ಪ್ರಯಾಣದ ಹೊಸ ವರ್ಷವಾಗಿದೆ. ಈ ಅವಯಲ್ಲಿ ಕಾಶ್ಮೀರ ಜನತೆ ತಮ್ಮ ಹಕ್ಕುಗಳನ್ನು ಪಡೆದ ವರ್ಷವಾಗಿದೆ. ಇದು ಕಾಶ್ಮೀರದ ನಿರಾಶ್ರಿತರು ಮತ್ತು ದುರ್ಬಲ ವರ್ಗದವರು ಶಾಂತಿ-ನೆಮ್ಮದಿಯಿಂದ ಜೀವನ ನಡೆಸಿದ ವರ್ಷವಾಗಿದೆ ಎಂದು ಮೋದಿ ಬಣ್ಣಿಸಿದರು.

ಲಡಾಖ್ ಪ್ರಾಂತ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನು ಮಾಡಲಾಗಿದ್ದು, ಈ ಮೂಲಕ ಲಡಾಖ್ ನಗರ ಬಹು ದಿನಗಳ ಕನಸನ್ನು ನನಸು ಮಾಡಲಾಗಿದೆ. ಅಲ್ಲಿ ಅಭಿವೃದ್ದಿಯ ಹೊಸ ಪರ್ವ ಆರಂಭವಾಗಿದೆ ಎಂದು ಮೋದಿ ತಿಳಿಸಿದರು.

ನಮ್ಮೊಂದಿಗೆ ಗಡಿ ಹಂಚಿಕೊಂಡವರೂ ಮಾತ್ರ ನೆರೆಹೊರೆಯವರಲ್ಲ. ನಮ್ಮ ಜೊತೆ ಸಹೃದಯ ಬಾಂಧವ್ಯ ಹೊಂದಿದವರೂ ಕೂಡ ನಮಗೆ ನೆರೆಹೊರೆಯವರು. ಕೆಲವು ವರ್ಷಗಳಿಂದ ಭಾರತವು ವಿಶ್ವದ ಎಲ್ಲ ದೇಶಗಳ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿದೆ ಎಂದು ಅವರು ತಿಳಿಸಿದರು.

ಸದೃಢ ಸ್ವಾವಲಂಭಿ ನವಭಾರತ ನಿರ್ಮಾಣದ ದೃಷ್ಟಿಕೋನವನ್ನು ತನ್ನ ಭಾಷಣದಲ್ಲಿ ವಿವರಿಸಿದ ಅವರು, ಭಾರತವು ಪರಿಪೂರ್ಣ ಸ್ವಾವಲಂಬಿ ರಾಷ್ಟ್ರವಾಗಬೇಕು. ನಮ್ಮಲ್ಲಿರುವ ಸಮೃದ್ಧ ಸಂಪನ್ಮೂಲಗಳನ್ನು ಸ್ಥಳೀಯ, ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಸಲು ಬಳಬೇಕೆಂದು ಕರೆ ನೀಡಿದರು.

ಸ್ವಾವಲಂಬಿ ಭಾರತಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆತ್ಮನಿರ್ಭರ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದೇ ಉದ್ದೇಶಕ್ಕಾಗಿ 100ಕ್ಕೂ ಹೆಚ್ಚು ರಕ್ಷಣಾ ಉತ್ಪನ್ನಗಳ ಆಮದಿಗೆ ನಿಷೇಧ ಹೇರಲಾಗಿದ್ದು, ಅವುಗಳನ್ನು ದೇಶದಲ್ಲೇ ಉತ್ಪಾದಿಸಲಾಗುತ್ತದೆ ಎಂದು ಪ್ರಧಾನಿ ತಿಳಿಸಿದರು.

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ಹತ್ತುದಿನಗಳ ಹಿಂದೆ ಚಾಲನೆ ದೊರೆತಿದೆ. ಶತಮಾನಗಳಿಂದ ಬಗೆಹರಿಯದಿದ್ದ ರಾಮಜನ್ಮ ಭೂಮಿ ವಿವಾದವನ್ನು ಶಾಂತಿಯುತವಾಗಿ ಇತ್ಯರ್ಥಗೊಳಿಸಲಾಗಿದೆ. ಇದಕ್ಕೆ ದೇಶದ ಜನರ ಪ್ರತಿಕ್ರಿಯೆ ಅಭೂತಪೂರ್ವವಾಗಿದ್ದು, ಉಜ್ವಲ ಭವಿಷ್ಯಕ್ಕೆ ಸ್ಪೂರ್ತಿಯಾಗಿದೆ ಎಂದು ಮೋದಿ ವಿಶ್ಲೇಷಿದರು.

ತಮ್ಮ ಸರ್ಕಾರದ ಪ್ರಮುಖ ಸಾಧನೆಗಳನ್ನು ಪಟ್ಟಿ ಮಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಕೃಷಿ ಮೂಲಸೌಕರ್ಯಕ್ಕಾಗಿ 1 ಲಕ್ಷ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.ಮನೆಗೆ ಶುದ್ಧ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಇದರಿಂದ 2 ಕೋಟಿ ಮನೆಗಳಿಗೆ ಸುರಕ್ಷಿತ ನೀರು ಪೂರೈಕೆಯಾಗಿದೆ ಎಂದು ಅವರು ಹೇಳಿದರು.

ಮಧ್ಯಮವರ್ಗದವರು, ಗ್ರಾಹಕರು ಮತ್ತು ಠೇವಣಿದಾರರ ಹಣವನ್ನು ಸುರಕ್ಷಿತವಾಗಿರಿಸಿ ಅವರ ಹಿತರಕ್ಷಿಸಲು ಕೋ-ಆಪರೇಟಿವ್ ಬ್ಯಾಂಕ್‍ಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಕಳೆದ ವರ್ಷ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‍ಡಿಐ) ಶೇ.18ರಷ್ಟು ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ. ಭಾರತದ ಮೇಲೆ ಇಡೀ ವಿಶ್ವದ ವಿಶ್ವಾಸ ಮತ್ತು ನಂಬಿಕೆ ಮತ್ತಷ್ಟು ವೃದ್ದಿಯಾಗುತ್ತಿದೆ. ನಮ್ಮ ಆರ್ಥಿಕ ತಳಹದಿಯನ್ನು ಮತ್ತಷ್ಟು ಸೃದೃಢಗೊಳಿಸಲು ನಾವು ಮಹತ್ವದ ಯೋಜನೆಗಳನ್ನು ರೂಪಿಸಿದ್ದೇವೆ ಎಂದು ಪ್ರಧಾನಿ ಹೇಳಿದರು.

ತಮ್ಮ ಸುದೀರ್ಘ ಭಾಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ, ಭಾರತ್ ಆತ್ಮ ನಿರ್ಭರ್ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದ ಮೋದಿ ನವ ಭಾರತ ನಿರ್ಮಾಣಕ್ಕೆ ದೃಢಸಂಕಲ್ಪ ಮಾಡೋಣ ಎಂದು ದೇಶವಾಸಿಗಳಿಗೆ ಕರೆ ನೀಡಿ, ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಮತ್ತು ಜೈಹಿಂದೆ ಎಂದು ಘೋಷಣೆ ಮೊಳಗಿಸಿ ತಮ್ಮ ಏಳನೇ ಸ್ವಾತಂತ್ರ್ಯೋತ್ಸವ ಭಾಷಣವನ್ನು ಮುಗಿಸಿದರು.

# ಕೊರೊನಾ ನಿಗ್ರಹಕ್ಕೆ 3 ಲಸಿಕೆಗಳು ಶೀಘ್ರ ಲಭ್ಯ : 
ನವದೆಹಲಿ,ಆ.15- ಡೆಡ್ಲಿ ಕೊರೊನಾ ವೈರಸ್ ಸೋಂಕು ನಿಗ್ರಹಕ್ಕಾಗಿ ಮೂರು ಪ್ರಮುಖ ಲಸಿಕೆಗಳು ವಿವಿಧ ಪ್ರಾಯೋಗಿಕ ಹಂತಗಳಲ್ಲಿದ್ದು, ಅತಿ ಶೀಘ್ರದಲ್ಲೇ ದೇಶದ ಜನತೆಗೆ ಲಭ್ಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಘೋಷಿಸಿದ್ದಾರೆ.

74ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಇಂದು ಬೆಳಗ್ಗೆ ರಾಷ್ಟ್ರೀಯ ತ್ರಿವರ್ಣ ದ್ವಜಾರೋಹಣ ನೆರವೇರಿಸಿ ಪ್ರಧಾನಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು.

ಕೊರೊನಾ ವಿರುದ್ಧ ಹೋರಾಡುತ್ತಾ ಜನರ ಜೀವಗಳನ್ನು ರಕ್ಷಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕೋವಿಡ್ ವಾರಿಯರ್ಸ್‍ಗಳ ಸಮರ್ಪಣಾ ಮತ್ತು ತ್ಯಾಗ ಮನೋಭಾವದ ಸೇನೆಗಳನ್ನು ಪ್ರಶಂಸಿಸಿದರು.

ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಲಸಿಕೆ ಮತ್ತು ಔಷ-ಮಾತ್ರೆಗಳು ಯಾವಾಗ ಸಿದ್ದವಾಗಿ ನಮಗೆ ಲಭಿಸುತ್ತದೆ ಎಂದು ರಾಷ್ಟ್ರದ ಜನತೆ ಕೇಳುತ್ತಿದ್ದಾರೆ ಮತ್ತು ಅದರ ಲಭ್ಯತೆ ಬಗ್ಗೆ ಕಾತುರದಿಂದ ಕಾಯುತ್ತಿದ್ದಾರೆ.

ನಮ್ಮ ವಿಜ್ಞಾನಿಗಳು ಮತ್ತು ಸಂಶೋಧಕರು ಈ ನಿಟ್ಟಿನಲ್ಲಿ ಅಹರ್ನಿಶಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಗತಿ ಕಂಡುಬಂದಿದೆ ಎಂದು ಮೋದಿ ಹೇಳಿದರು.

ಭಾರತದಲ್ಲಿ ಮೂರು ಲಸಿಕೆಗಳು ವಿವಿಧ ಪ್ರಾಯೋಗಿಕ ಹಂತಗಳಲ್ಲಿವೆ. ಅವುಗಳ ಅಂತಿಮ ಉತ್ಪಾದನೆ ಮತ್ತು ಪೂರೈಕೆಗೆ ನೀಲನಕ್ಷೆ ಸಿದ್ಧವಾಗುತ್ತಿದೆ ಎಂದು ಅವರು ತಿಳಿಸಿದರು.

ಈ ನಿಟ್ಟಿನಲ್ಲಿ ಪ್ರಯೋಗ ನಿರಂತರವಾಗಿ ನಡೆಯುತ್ತಿದೆ. ವಿಜ್ಞಾನಿಗಳು ಅಂತಿಮ ಪ್ರಯೋಗ ನಡೆಸಿದ ನಂತರ ಶೀಘ್ರದಲ್ಲೇ ಇದರ ಉತ್ಪಾದನೆ ಮತ್ತು ವಿತರಣೆ ನಡೆಯುತ್ತದೆ. ಸದ್ಯದಲ್ಲೇ ಇದು ಲಭ್ಯವಾಗುತ್ತದೆ ಎಂದು ಅವರು ಹೇಳಿದರು.

ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಕೇವಲ ಒಂದು ಪರೀಕ್ಷಾ ಪ್ರಯೋಗಾಲಯ ಮಾತ್ರ ಇದು. ಈಗ ಅದು 1,400 ಲ್ಯಾಬ್‍ಗಳಿಗೂ ಹೆಚ್ಚಾಗಿದೆ. ಅದೇ ರೀತಿ ದಿನಕ್ಕೆ ಸರಾಸರಿ 7 ಲಕ್ಷಕ್ಕೂ ಅಕ ಸ್ಯಾಂಪಲ್‍ಗಳನ್ನು ಪರೀಕ್ಷಿಸುವ ಸಾಮಥ್ರ್ಯ ವೃದ್ದಿಯಾಗಿದೆ ಎಂದು ಮೋದಿ ವಿವರಿಸಿದರು.

ಕೊರೊನಾ ಪಿಡುಗಿನ ವಿರುದ್ಧ ನಾವೆಲ್ಲರೂ ಧೈರ್ಯವಾಗಿ ಹೋರಾಡುತ್ತಿದ್ದೇವೆ. ಈ ಯುದ್ಧದಲ್ಲಿ ಜಯ ನಮಗೆ ಖಚಿತ ಎಂದು ಅವರು ಪುನರುಚ್ಚರಿಸಿದರು.

ಕೊರೊನಾ, ಪ್ರವಾಹ, ಭೂಕಂಪ ಏನೇ ಬರಲಿ ದೇಶದ ಜನರು ಆತ್ಮವಿಶ್ವಾಸ ಮತ್ತು ಧೈರ್ಯ ಕಳೆದುಕೊಂಡಿಲ್ಲ. ಸದೃಢ ಮನಸ್ಸಿನಿಂದ ಮುನ್ನುಗ್ಗುತ್ತಿದ್ದಾರೆ. ದೇಶದ 130 ಕೋಟಿ ಜನರು ಕೊರೊನಾ ಮಹಾಮಾರಿಯ ವಿರುದ್ಧ ಹೋರಾಟುತ್ತಿದ್ದಾರೆ ಎಂಬ ಹೆಮ್ಮೆ ನನಗಿದೆ ಎಂದು ಪ್ರಧಾನಿ ತಿಳಿಸಿದರು.

ಕೊರೊನಾ ಹೆಮ್ಮಾರಿಯಿಂದ ದೇಶದ ಉಜ್ವಲ ಭಿವಿಷ್ಯಕ್ಕೆ ಅಡ್ಡಿಯಾಗಿದೆ. ನಾವು ಅನೇಕ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಈ ಸಂದರ್ಭದಲ್ಲಿ ವೈದ್ಯರು, ನರ್ಸ್‍ಗಳು ಮತ್ತು ಆಶಾ ಕಾರ್ಯಕರ್ತೆಯರೂ ಸೇರಿದಂತೆ ಕೊರೊನಾ ವಾರಿಯರ್ಸ್‍ಗಳ ಸೇವೆಯನ್ನು ನಾವೆಲ್ಲರೂ ಸ್ಮರಿಸಬೇಕು.

ದೇಶವನ್ನು ಮತ್ತು ರಾಷ್ಟ್ರದ ಜನರನ್ನು ಆರೋಗ್ಯವಾಗಿಡಲು ಅನೇಕ ಜನರು ಪ್ರಾಣ ತೆತ್ತಿದ್ದಾರೆ ಅವರನ್ನು ನಾವು ಸ್ಮರಿಸಬೇಕೆಂದು ಮೋದಿ ಹೇಳಿದರು.

# ಎಲ್ಲರಿಗೂ ಹೆಲ್ತ್ ಐಡಿ ಕಾರ್ಡ್ :
ನವದೆಹಲಿ, ಆ.15-ಸ್ವಾತಂತ್ರ್ಯೂ ದಿನೋತ್ಸವದ ಅಂಗವಾಗಿ ದೇಶದ ಆರೋಗ್ಯವಲಯದಲ್ಲಿ ಮತ್ತೊಂದು ಹೊಸ ಕ್ರಾಂತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮುನ್ನುಡಿ ಬರೆದಿದ್ದಾರೆ.  ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಅಭಿಯಾನ ಜಾರಿ ಮತ್ತು ದೇಶದ ಪ್ರತಿಯೊಬ್ಬರಿಗೂ ಹೆಲ್ತ್ ಐಡಿ ಕಾರ್ಡ್(ಆರೋಗ್ಯ ಗುರುತು ಚೀಟಿ) ಲಭ್ಯವಾಗಲಿದೆ ಎಂದು ಘೋಷಿಸಿರುವ ಪ್ರದಾನಿ ಮೋದಿ. ಇದು ದೇಶದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ ಎಂದರು.

74ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಇಂದು ಬೆಳಗ್ಗೆ ರಾಷ್ಟ್ರೀಯ ತ್ರಿವರ್ಣ ದ್ವಜಾರೋಹಣ ನೆರವೇರಿಸಿ ಪ್ರಧಾನಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ದೇಶದಲ್ಲಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಅಭಿಯಾನ ಇಂದಿನಿಂದ ಜಾರಿಗೆ ಬರಲಿದೆ.

ಇದರಿಂದ ಆರೋಗ್ಯ ಕ್ಷೇತ್ರವು ಡಿಜಿಟಲ್ ವ್ಯವಸ್ಥೆಗೆ ಒಳಪಡಲಿದೆ. ಆಥುನಿಕತೆಯೊಂದಿಗೆ ನವೀನತೆ ಸ್ಪರ್ಶ ಈ ವಲಯಕ್ಕೆ ಲಭಿಸಲಿದೆ ಎಂದರು. ದೇಶದ ಪ್ರತಿಯೊಬ್ಬರಿಗೂ ಆರೋಗ್ಯ ಐಡಿ ಕಾರ್ಡುಗಳನ್ನು ನೀಡಲಾಗುವುದು.

ಜನರು ಪ್ರತಿ ಬಾರಿ ಕ್ಲಿನಿಕ್‍ಗಳು, ಆಸ್ಪತ್ರೆಗಳು ಅಥವಾ ಔಷ ಅಂಗಡಿಗಳಿಗೆ ಹೋದಾಗ ಹೆಲ್ತ್ ಐಡಿ ಕಾಡ್ ಲಾಗ್ ಆಗುತ್ತದೆ. ಈ ವೇಳೆ ವೈದ್ಯರೂ ನೀಡುವ ಆರೋಗ್ಯ ಸಲಹೆಗಳು ಮತ್ತು ಔಷಗಳ ಪ್ರತಿಯೊಂದು ವಿವರಗಳು ಆರೋಗ್ಯ ಕಾರ್ಡ್‍ನಲ್ಲಿ ದಾಖಲಾಗುತ್ತದೆ ಎಂದು ಮೋದಿ ತಿಳಿಸಿದರು.

Facebook Comments

Sri Raghav

Admin