ಕೊರೋನಾ ಅಂಧಕಾರವನ್ನು ಓಡಿಸಲು ದೇಶಾದ್ಯಂತ ಬೆಳಗಿದ ದೀಪಗಳು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ: ಮಹಾಮಾರಿ ಕರೊನಾ ವಿರುದ್ಧದ ಹೋರಾಟದಲ್ಲಿ ಯಾರು ಏಕಾಂಗಿಯಲ್ಲ. ನಾವೆಲ್ಲರೂ ಒಂದೇ ಎಂದು ಸಾರಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದ ದೀಪ ಬೆಳಗುವ ಸಂಕಲ್ಪಕ್ಕೆ ಇಡೀ ರಾಷ್ಟ್ರದ ಜನತೆ ಒಕ್ಕೊರಲ ಬೆಂಬಲ ನೀಡಿದರು.

ದೇಶಾದ್ಯಂತ ಜನರು ರಾತ್ರಿ 9 ಗಂಟೆಗೆ ವಿದ್ಯುತ್ ದೀಪಗಳನ್ನು ಆರಿಸಿ, ದೀಪ, ಕ್ಯಾಂಡಲ್ ಗಳನ್ನು ಬೆಳಗಿಸಿ ಕೊರೋನ ವಿರುದ್ಧದ ಹೋರಾಟದಲ್ಲಿ ಏಕತೆಯನ್ನು ಪ್ರದರ್ಶಿಸಿದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ತಮ್ಮ ಮನೆಗಳ ಮುಂಭಾಗ ದೀಪ ಹಚ್ಚಿದರು.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮನೆಯ ಎಲ್ಲಾ ದೀಪಗಳನ್ನು ಆರಿಸಿ ದೀಪವನ್ನು ಹಚ್ಚಿ ಬೆಳಗುವ ಮೂಲಕ ಪ್ರಧಾನಿ ಅವರ ಕರೆಗೆ ಸಾಥ್ ನೀಡಿದ್ದಾರೆ. ದೆಹಲಿ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಕೂಡಾ ಮನೆಯ ಲೈಟ್ ಆರಿಸಿ ದೀಪ ಬೆಳಗುವ ಮೂಲಕ ಬೆಂಬಲ ನೀಡಿದರು.

ಪಶ್ಚಿಮಬಂಗಾಳ ರಾಜ್ಯಪಾಲ ಜಗ್ ದೀಪ್, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹೀಗೆ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಮೇರೆಗೆ 9ಗಂಟೆ 9 ನಿಮಿಷಕ್ಕೆ ಮನೆಯ ದೀಪಗಳನ್ನು ಆರಿಸಿ, ಮೊಂಬತ್ತಿ, ದೀಪ ಬೆಳಗುವ ಮೂಲಕ ತಮ್ಮ ಬೆಂಬಲ ಸೂಚಿಸಿದ್ದಾರೆ.

ರಾಜ್ಯದಲ್ಲಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ದೀಪ ಬೆಳಗಿಸಿ ಪ್ರಧಾನಿ ಕರೆಗೆ ಬೆಂಬಲ ಸೂಚಿಸಿದರು.

ದೇಶದಾದ್ಯಂತ ಮೊಬೈಲ್​ ಫ್ಲ್ಯಾಶ್​ ಲೈಟ್​, ಮೇಣದ ಬತ್ತಿ ಹಾಗೂ ಎಣ್ಣೆ ದೀಪಗಳನ್ನು ಹಿಡಿದು ಮನೆಯಿಂದ ಆಚೆ ಬಂದು ಬೆಳಕು ಉಕ್ಕಿಸಿ, ಏಕತೆಯ ಮಂತ್ರ ಸಾರಿದರು. ಮನೆಯ ಮಹಡಿಗಳ ಮೇಲೆ ಜನರು ದೀಪ ಕ್ರಾಂತಿ ಮಾಡಿದರು.

Facebook Comments

Sri Raghav

Admin