ಪ್ರಧಾನಿ ಮೋದಿ ‘ಮನ್ ಕಿ ಬಾತ್‍’ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.27- ಕೊರೊನಾ ಸಂಕಷ್ಟ ದಲ್ಲೂ ಪರಿಶ್ರಮವನ್ನು ರೈತರ ಪರಿಶ್ರಮವನ್ನು ಗುಣಗಾನ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಸ್ವಯಂ ಸ್ವಾವ ಲಂಬನೆ ನಿರ್ಮಾಣದಲ್ಲಿ ಕೃಷಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಶ್ಲಾಘಿಸಿದ್ದಾರೆ.

ಪ್ರತಿ ತಿಂಗಳ ಕೊನೆ ಭಾನುವಾರ ದೇಶ ವನ್ನು ಉದ್ದೇಶಿಸಿ ಪ್ರಧಾನಿ ಬಾನುಲಿ ಭಾಷಣ ಮಾಡುವ ಮನ್ ಕಿ ಬಾತ್ (ಮನದ ಮಾತು) ಕಾರ್ಯಕ್ರಮದಲ್ಲಿ 69ನೆ ಆವೃತ್ತಿಯಲ್ಲಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದರು.

ಕೋವಿಡ್-19 ವೈರಸ್ ಹಾವಳಿಯಿಂದ ದೇಶವು ಸಂಕಷ್ಟಕ್ಕೀಡಾದ ಸಂದರ್ಭದಲ್ಲಿ ನಮ್ಮ ಅನ್ನದಾತರು ಅತ್ಯಂತ ಸಹಿಷ್ಣುತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಭಾರತದ ಆತ್ಮ ನಿರ್ಭರ ಯೋಜನೆ ಸಾಕಾರವಾಗುವಂತೆ ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ನಮ್ಮ ದೇಶದ ಸ್ವಯಂ ಸ್ವಾವಲಂಬನೆಗೆ ಕೃಷಿ ಕ್ಷೇತ್ರವು ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುತ್ತದೆ. ಈ ನಿಟ್ಟಿನಲ್ಲಿ ನಮ್ಮ ರೈತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಕೊರೊನಾ ಪಿಡುಗಿನ ವೇಳೆಯೂ ದೇಶದ ಕೆಲವು ಭಾಗಗಳಲ್ಲಿ ದಾಖಲೆ ಪ್ರಮಾಣದ ಕೃಷಿ ಉತ್ಪನ್ನಗಳು ಉತ್ಪಾದನೆಯಾಗಿವೆ. ಈ ಮೂಲಕ ದೇಶದ ಉತ್ಪಾ ದಕತೆಯೂ ಹೆಚ್ಚಳ ವಾಗಿದೆ. ಇದಕ್ಕಾಗಿ ನಾನು ನಮ್ಮ ಕೃಷಿಕರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳನ್ನು ಸಮರ್ಥಿಸಿಕೊಂಡ ಅವರು ರೈತರ ಸಬಲೀಕರಣ ಮತ್ತು ಅವರ ಆರ್ಥಿಕ ಸ್ಥಿತಿ ಸುಧಾರಣೆಯಾಗಲು ಇದು ದಿಟ್ಟ ಮತ್ತು ಕ್ರಾಂತಿಕಾರಿ ಹೆಜ್ಜೆಯಾಗಿದೆ. ರೈತರು ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಇದ ರಿಂದ ಉತ್ಪಾದಕತೆ ಹೆಚ್ಚಾಗುತ್ತದೆ ಎಂದು ಸಲಹೆ ಮಾಡಿದರು.

ಗಾಂೀಜಿ ಆರ್ಥಿಕ ಸಿದ್ಧಾಂತ ಪಾಲಿಸಿದ್ದರೆ ಇಂದಿನ ಆತ್ಮನಿರ್ಭರ ಆಂದೋಲನದ ಅಗತ್ಯ ಇರುತ್ತಿರಲಿಲ್ಲ : ರಾಷ್ಟ್ರಪಿತ ಮಹಾತ್ಮ ಗಾಂೀಜಿ ಅವರ ಆರ್ಥಿಕ ತತ್ತ್ವಸಿದ್ಧಾಂತಗಳನ್ನು ನಾವು ಪಾಲಿಸಿದ್ದರೆ, ಇಂದಿನ ಆತ್ಮನಿರ್ಭರ ಆಂದೋಲನದ ಅಗತ್ಯವೇ ಇರುತ್ತಿರಲಿಲ್ಲ ಎಂದು ಮೋದಿ ವಿಶ್ಲೇಷಿಸಿದ್ದಾರೆ.

ಮನ್ ಕಿ ಬಾತ್ (ಮನದ ಮಾತು) ಬಾನುಲಿ ಭಾಷಣದಲ್ಲಿ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಗಾಂೀಜಿ ಅವರು ಸಾತಂತ್ರ್ಯ ಪೂರ್ವದಲ್ಲೇ ದೇಶದ ಭವಿಷ್ಯದ ಪ್ರಗತಿಗಾಗಿ ಕೆಲವು ಸರಳ ಆರ್ಥಿಕ ಸಿದ್ಧಾಂತದ ಚಿಂತನೆಗಳನ್ನು ತಿಳಿಸಿದ್ದಾರೆ. ಕೃಷಿ ಉತ್ಪನ್ನಗಳೂ ಸೇರಿದಂತೆ ಇತರ ವಸ್ತುಗಳನ್ನು ದೇಶೀಯವಾಗಿಯೇ ಉತ್ಪಾದಿಸಬೇಕು. ಇವುಗಳಿಗಾಗಿ ಯಾರ ಮೇಲೂ ಅವಲಂಬಿತರಾಗದೆ ಸ್ವಯಂ ಸ್ವಾವಲಂಬನೆ ಸಾಸಬೇಕೆಂದು ಬಾಪೂಜಿ ಸಲಹೆ ಮಾಡಿದ್ದರು ಎಂದು ತಿಳಿಸಿದರು.

ಗಾಂ ಅವರ ಆರ್ಥಿಕ ತತ್ವಗಳು ಮತ್ತು ಸ್ವಯಂ ಸ್ವಾವಲಂಬನೆಯ ಮೂಲಮಂತ್ರವನ್ನು ನಾವು ಆಗಿನಿಂದಲೇ ಪಾಲಿಸುತ್ತಾ ಬಂದಿದ್ದರೆ ಇಂದಿನ ಆತ್ಮನಿರ್ಭರ ಯೋಜನೆಯನ್ನು ಜಾರಿಗೊಳಿಸುವ ಅಗತ್ಯವೇ ಕಂಡುಬರುತ್ತಿರಲಿಲ್ಲ ಎಂದು ಹೇಳಿದರು.

Facebook Comments

Sri Raghav

Admin