ಪೊಲೀಸ್ ಮತ್ತು ರಕ್ಷಣಾ ಪಡೆಗಳಲ್ಲಿ ಮಹಿಳೆಯರ ನೇಮಕಾತಿ ದುಪ್ಪಟ್ಟು : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.24- ಪೊಲೀಸ್ ಹಾಗೂ ರಕ್ಷಣಾ ಸೇವೆಯಲ್ಲಿ ಮಹಿಳೆಯರ ಸೇರ್ಪಡೆ ಹೆಚ್ಚುತ್ತಿದ್ದು, ದೇಶದ ಮಗಳು ಕಠಿಣ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾಳೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಕೊಂಡಾಡಿದ್ದಾರೆ.ರೇಡಿಯೋ ಜನಪ್ರಿಯ ಸರಣಿ ಮನ್‍ಕಿ ಬಾತ್‍ನ 82ನೇ ಆವೃತ್ತಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, 2014ರಲ್ಲಿ 1.05 ಲಕ್ಷ ಮಹಿಳೆಯರು ಪೊಲೀಸ್ ಸೇವೆಯಲ್ಲಿದ್ದರು. ಕಳೆದ ಏಳು ವರ್ಷಗಳಲ್ಲಿ ಇದು ದ್ವಿಗುಣಗೊಂಡಿದ್ದು, 2.15 ಲಕ್ಷದಷ್ಟಾಗಿದೆ.

ಕೇಂದ್ರ ಸರ್ಕಾರದ ಸಶಸ್ತ್ರ ಪಡೆಗಳಲ್ಲೂ ಕೂಡ ಮಹಿಳೆಯರ ಸೇರ್ಪಡೆ ದುಪಟ್ಟಾಗಿದೆ. ನಾವು ಸಂಖ್ಯೆಗಳ ಮೇಲಷ್ಟೇ ಮಾತನಾಡುತ್ತಿಲ್ಲ. ಭಾರತೀಯ ಪುತ್ರಿಯರು ಸಮರ್ಪಣಾ ಮನೋಭಾವದಿಂದ ಕಠಿಣ ಕೆಲಸಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. ಅತ್ಯಂತ ಸಂಕೀರ್ಣ ತರಬೇತಿಯಾಗಿರುವ ಅರಣ್ಯ ಯುದ್ಧ ಪರಿಣಿತಿ ಕಮಾಂಡೋ ಪಡೆಗಳಲ್ಲೂ ಭಾಗಿಯಾಗುತ್ತಿದ್ದಾರೆ.

ಕೋಬ್ರ ಬೆಟಾಲಿಯನ್‍ನಲ್ಲಿ ಸೇರ್ಪಡೆಯಾಗಿದ್ದಾರೆ. ವಿಮಾನ ನಿಲ್ದಾಣ, ಮೆಟ್ರೋ, ಸರ್ಕಾರಿ ಕಚೇರಿಗಳು, ಎಲ್ಲೆಡೆ ಸಿಐಎಸ್‍ಎಫ್ ಪಡೆಗಳಲ್ಲಿ ಮಹಿಳಾ ಸೈನಿಕರು ಕಾಣುತ್ತಿದ್ದಾರೆ. ರಕ್ಷಣೆಯಂತಹ ಸೂಕ್ಷ್ಮ ಕೆಲಸಗಳಲ್ಲೂ ಸಹ ಅವರ ನಿಯುಕ್ತಿಯಾಗಿದೆ. ಇದು ಸಮಾಜ ಹಾಗೂ ಪೆÇಲೀಸ್ ಬಲದಲ್ಲಿ ಸಕಾರಾತ್ಮಕ ಮತ್ತು ನೈತಿಕ ಬೆಂಬಲದ ಬದಲಾವಣೆ ಎಂದು ಹೇಳಿದರು.

ಭದ್ರತೆಗೆ ಮಹಿಳೆಯರನ್ನು ನಿಯೋಜಿಸುವುದರಿಂದ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಸಹಜವಾಗಿ ಜನ ಮಹಿಳೆಯರನ್ನು ನಂಬುತ್ತಾರೆ. ಈ ಸೂಕ್ಷ್ಮ ಮನೋಭಾವ ರಕ್ಷಣೆಯ ವಿಶ್ವಾಸವನ್ನು ಹೆಚ್ಚಿಸುತ್ತದೆ.

ಮುಂದಿನ ದಿನಗಳಲ್ಲೂ ಕೂಡ ಮಹಿಳೆಯರು ಪೊಲೀಸ್ ಪಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಗಳು ತಮ್ಮ ಸಮೀಪದ ಶಾಲಾಕಾಲೇಜುಗಳಿಗೆ ತೆರಳಿ ಮಕ್ಕಳೊಂದಿಗೆ ಸಂವಾದ ನಡೆಸಿ ಪ್ರೇರೇಪಣೆ ಮಾಡಬೇಕು. ಹೊಸ ತಲೆಮಾರಿನ ಪೊಲೀಸಿಂಗ್‍ನ್ನು ನಮ್ಮ ದೇಶ ನೋಡಬೇಕು ಎಂದರು.

ಇತ್ತೀಚೆಗಷ್ಟೇ ಪೊಲೀಸರ ಹುತಾತ್ಮರ ದಿನಾಚರಣೆ ನಡೆದಿದೆ. ಕೆಲಸ ಮಾಡುವಾಗ ಪ್ರಾಣಾರ್ಪಣೆ ಮಾಡಿದ ಪೊಲೀಸರಿಗೆ ನಮ್ಮ ನಮನಗಳು. ಪೊಲೀಸರ ಸಮರ್ಪಣಾ ಮನೋಭಾವದಿಂದ ಸಮಾಜ ನೆಮ್ಮದಿಯಾಗಿದೆ. ಪೊಲೀಸರ ಉತ್ತಮವಾಗಿ ಕೆಲಸ ಮಾಡಲು ಕುಟುಂಬದ ಬೆಂಬಲ ಮತ್ತು ತ್ಯಾಗ ಸ್ಮರಣೀಯ ಎಂದರು.

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರಿಂದ ದೇಶ ಭಕ್ತಿ ಮತ್ತು ಐಕ್ಯತೆಯ ಪಾಠ ಕಲಿಯಬೇಕಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.ಅಕ್ಟೋಬರ್ 31ನ್ನು ಸರ್ದಾರ್ ವಲ್ಲಭಬಾಯ್ ಪಟೇಲ್ ಅವg ಜನ್ಮದಿನ. ಅದನ್ನು ರಾಷ್ಟ್ರೀಯ ಐಕ್ಯತಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಐಕ್ಯತೆಯನ್ನು ಬೆಂಬಲಿಸಲು ಅಂದು ಕನಿಷ್ಠ ಒಂದು ಚಟುವಟಿಕೆಯನ್ನಾದರೂ ಮಾಡಬೇಕು ಎಂದು ಮೋದಿ ಜನರಲ್ಲಿ ಮನವಿ ಮಾಡಿದರು.

ಐಕ್ಯತೆ ಮತ್ತು ಒಗ್ಗಟ್ಟನ್ನು ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರಿಂದ ಕಲಿತುಕೊಳ್ಳಬೇಕು. ನಾವು ಒಟ್ಟಾಗದೆ ಇದ್ದರೆ ತೊಂದರೆಗೆ ಸಿಲುಕುವುದಲ್ಲದೆ ಹೊಸ ಹೊಸ ಸವಾಲುಗಳಿಗೂ ಎದುರುಗೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಇತ್ತೀಚೆಗೆ ವಾರ್ತಾ ಮತ್ತು ಪ್ರಸಾರಂಗ ಇಲಾಖೆ ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರ ಜೀವನಚರಿತ್ರೆಯ ಪುಸ್ತಕವನ್ನು ಪ್ರಕಟಿಸಿದೆ. ಪ್ರತಿಯೊಬ್ಬರು ಅದನ್ನು ಓದಬೇಕು. ಅದರಿಂದ ಪಾಠ ಕಲಿಯಬೇಕು ಎಂದರು. ಗುಜರಾತ್ ಮತ್ತು ತ್ರಿಪುರ ಪೆÇಲೀಸರು ಇತ್ತೀಚೆಗೆ ಗುಜರಾತ್‍ನಲ್ಲಿರುವ ಸರ್ದಾರ್ ಪಟೇಲ್‍ರ ಐಕ್ಯತಾ ಪ್ರತಿಮೆಯವರೆಗೆ ಬೈಕ್ ರ್ಯಾಲಿ ನಡೆಸಿದರು.

ಜಮ್ಮುಕಾಶ್ಮೀರದ ಕುಪ್ವಾರ್ ಜಿಲ್ಲೆಯಲ್ಲಿ ಮಹಿಳೆಯರು ಸರ್ಕಾ ಕಚೇರಿಗಳಿಗಾಗಿ ರಾಷ್ಟ್ರಧ್ವಜ ನೇಯ್ದಿದ್ದರು. ಈ ಚಟುವಟಿಕೆಗಳು ಅವರ ರಾಷ್ಟ್ರ ಭಕ್ತಿಯನ್ನು ತೋರಿಸುತ್ತದೆ ಎಂದರು.ಮನ್ ಕಿ ಬಾತ್‍ನಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಬಗ್ಗೆ ಪ್ರಸ್ತಾಪಿಸಿದ ಮೋದಿ ಅವರು, ಪ್ರಕೃತಿ, ಅರಣ್ಯ ಮತ್ತು ಭೂಮಿ ರಕ್ಷಣೆಗೆ ಅವರ ಕೊಡುಗೆ ಅಪಾರ ಎಂದು ಹೇಳಿದರು.

ನ.15ರಂದು ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯಿದೆ. ಅವರನ್ನು ದರ್ತಿ ಅಬ್ಬ ಎಂದೇ ಕರೆಯುತ್ತಾರೆ. ಇದರ ಅರ್ಥ ಭೂಮಿಯ ತಂದೆ ಎಂದು. ಬಿರ್ಸಾ ಭೂಮಿ, ಅರಣ್ಯ, ಪ್ರಕೃತಿಯ ರಕ್ಷಣೆಗಾಗಿ ಹೋರಾಟ ಮಾಡಿದರು. ಅವರಿಗೆ ನಾನು ತಲೆ ಬಾಗಿಸಿ ನಮಿಸುತ್ತೇನೆ. ಅವರ ಮೌಲ್ಯಯುತ ಕೊಡುಗೆಗಳು ನನಗೂ ಪ್ರಕೃತಿ ಮತ್ತು ಪರಿಸರದ ಮೇಲೆ ಪ್ರೀತಿ ಉಂಟಾಗುವಂತೆ ಮಾಡಿತ್ತು. ನನ್ನಂಥ ಹಲವಾರು ಮಂದಿಗೆ ಬಿರ್ಸಾ ಪ್ರೇರಣೆಯಾಗಿದ್ದಾರೆ ಎಂದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಸಮುದಾಯಗಳ ಕೊಡುಗೆ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕೆಂದು ಕರೆ ನೀಡಿದರು.

Facebook Comments

Sri Raghav

Admin