ಇಲ್ಲಿದೆ ಪ್ರಧಾನಿ ಮೋದಿ ‘ಮನ್ ಕಿ ಬಾತ್‍’ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 31- ಸಾವು-ನೋವು ಮತ್ತು ಭಾರೀ ಸಂಕಷ್ಟಕ್ಕೆ ದೂಡಿರುವ ಕಿಲ್ಲರ್ ಕೊರೊನಾ ವಿರುದ್ಧ ಇಡೀ ದೇಶವೇ ಒಗ್ಗೂಡಿ ಹೋರಟ ಮುಂದುವರೆಸುತ್ತಿದೆ ಎಂದು ಪುನರುಚ್ಚರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ಸಂದರ್ಭದಲ್ಲಿ ದೇಶದ ಜನರು ತೋರಿರುವ ಸೇವಾ ಮತ್ತು ಸಮರ್ಪಣಾ ಮನೋಭಾವವನ್ನು ಕೊಂಡಾಡಿದ್ದಾರೆ.

ಉಸಿರಾಟದ ಮೇಲೆ ದುಷ್ಪರಿಣಾಮ ಬೀರುವ ಕೋವಿಡ್-19 ವೈರಸ್‍ನನ್ನು ನಿಗ್ರಹಿಸಲು ಯೋಗ ಪ್ರಮುಖ ಅಸ್ತ್ರವಾಗಿದೆ. ಆಯುರ್ವೇದ ಮತ್ತು ಯೋಗಾಸನದಿಂದ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಾಚೀನ ವೈದ್ಯಕೀಯ ಪದ್ಧತಿಯನ್ನು ಸಾರಿದ್ದಾರೆ.

ಪ್ರತಿ ತಿಂಗಳ ಕೊನೆ ಭಾನುವಾರ ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಬಾನುಲಿಯಲ್ಲಿ ಮಾತನಾಡುವ ಮನ್ ಕಿ ಬಾತ್‍ನ ಬಹು ಸಮಯವನ್ನು ಕೊರೊನಾಗೆ ಸಂಬಂತ ವಿಷಯಕ್ಕೆ ಪ್ರಧಾನಿ ಮೀಸಲಿಟ್ಟರು.
ಕೊರೊನಾದಿಂದ ದೇಶಾದ್ಯಂತ ಬಡವರು ಬಸವಳಿದಿದ್ದಾರೆ.

ವಲಸೆ ಕಾರ್ಮಿಕರು ಸೇರಿ ಅನೇಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಮಮ್ಮಲ ಮರುಗಿದ ಮೋದಿ, ಬಡವರು ಮತ್ತು ಸಂಕಷ್ಟಕ್ಕೀಡಾದವರ ನೆರವಿಗೆ ಸರ್ಕಾರ ಆದ್ಯತಾ ಕ್ರಮಗಳನ್ನು ಕೈಗೊಂಡಿದೆ.

ಅವರಿಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಮೋದಿ ಮತ್ತೊಂದು ಬೃಹತ್ ಆರ್ಥಿಕ ಪ್ಯಾಕೇಜ್ ಘೋಷಣೆ ಬಗ್ಗೆ ಮುನ್ಸೂಚನೆ ನೀಡಿದರು.

ದೇಶದ ಆರ್ಥಿಕ ಪ್ರಗತಿಗಾಗಿ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇದ್ಕಕಾಗಿ ಅನೇಕ ವಿನಾಯ್ತಿಗಳನ್ನು ನೀಡಿ ಅವಕಾಶಗಳನ್ನು ತೆರೆಯಲಾಗಿದೆ ಎಂದು ಮೋದಿ ಹೇಳಿದ್ದರು.

ಕೊರೊನಾ ವಿರುದ್ಧ ನಮ್ಮ ದೇಶವಾಸಿಗಳು ಒಗ್ಗೂಡಿ ಹೋರಾಟ ನಡೆಸುತ್ತಿದ್ದಾರೆ. ಜನರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಅವರ ಸೇವಾ ಮತ್ತು ಸಹಕಾರ ಮನೋಭಾವನೆ ಪ್ರಶಂಸನೀಯ.

ಸೇವಾ ಭಕ್ತಿ ದೇಶದ ಶಕ್ತಿ ಎಂಬುದನ್ನು ನಮ್ಮ ಜನರು ಸಾಬೀತು ಮಾಡಿದ್ದಾರೆ. ನಿಮ್ಮ ಸೇವಾ ಮನೋಭಾವನೆಯೇ ನಮಗೆ ಆದರ್ಶ ಎಂದು ಮೋದಿ ವ್ಯಾಖ್ಯಾನಿಸಿದರು.

ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾ ಸೋಂಕಿನ ತೀವ್ರತೆ ವೇಗ ಕಡಿಮೆ ಹಾಗೂ ಸಾವು-ನೋವಿನ ಸಂಖ್ಯೆಯಲ್ಲೂ ಕೂಡ ಇದು ಅಲ್ಪಮಟ್ಟದಲ್ಲಿದೆ ಎಂದು ಮೋದಿ ತಿಳಿಸಿದರು.

ಕೊರೊನಾದಿಂದ ನಾವು ಭವಿಷ್ಯದಲ್ಲಿ ದೊಡ್ಡ ಪಾಠವನ್ನು ಕಲಿಯಬೇಕಿದೆ. ಈ ಪಿಡುಗು ತಂದೊಡ್ಡಿರುವ ಸಂಕಷ್ಟದಿಂದ ಹೊಸ ಹೊಸ ಪದ್ಧತಿಗಳನ್ನು ಅನುಸರಿಸಿಕೊಂಡು ಜೀವನ ಶೈಲಿ ಬದಲಾಯಿಸಿಕೊಳ್ಳುವಂತಾಗಿದೆ ಎಂದು ಮೋದಿ ಹೇಳಿದರು.

ಕೊರೊನಾದಿಂದ ಉಂಟಾಗಿರುವ ಸಂಕಷ್ಟದ ಸಮಯವನ್ನು ನಾವು ಸದ್ಬಳಕೆ ಮಾಡಿಕೊಂಡು ಭಾರತದ ಅದರಲ್ಲೂ ಪಶ್ಚಿಮ ಭಾಗದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಕೈಗೊಂಡು ಅನುಷ್ಠಾನಗೊಳಿಸಿದ್ದೇವೆ ಎಂದು ಮೋದಿ ಹೇಳಿದರು.

ವೈದ್ಯರು, ನರ್ಸ್‍ಗಳು, ಆರೋಗ್ಯ ರಕ್ಷಕರು, ಪೊಲೀಸರು, ಪೌರಕಾರ್ಮಿಕರು ಮೊದಲಾದ ಕೊರೊನಾ ವಾರಿಯರ್ಸ್‍ನ ಸೇವೆ ಅತ್ಯಮೂಲ್ಯವಾದದ್ದು, ಇವರೆಲ್ಲರೂ ಕೊರೊನಾ ವಿರುದ್ಧ ನಿಶ್ವಾರ್ಥ ಸೇವೆ ಮಾಡುತ್ತಿದ್ದಾರೆ ಎಂದು ಮೋದಿ ಶ್ಲಾಘಿಷಿದರು.

ಕೊರೊನಾ ವಿರುದ್ಧ ಹೋರಾಟಕ್ಕಾಗಿ ಅನೇಕ ಸಾಧನಾ-ಸಲಕರಣೆಗಳನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಔಷ ಮತ್ತು ಲಸಿಕೆಗಳ ಸಂಶೋಧನೆ ಮುಂದುವರೆದಿದೆ. ಟ್ರ್ಯಾಕ್ಟರ್ ಮೊದಲಾದ ಯಂತ್ರೋಪಕರಣಗಳನ್ನು ಸ್ಯಾನಿಟೈಸರ್ ಮಿಷಿನ್‍ಗಳಾಗಿ ಪರಿವರ್ತಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಕೊರೊನಾ ನಿಯಂತ್ರಿಸುವಲ್ಲಿ ನಮ್ಮ ಪ್ರಾಚೀನ ವೈದ್ಯ ಪದ್ಧತಿಯಾದ ಯೋಗ ಮತ್ತು ಆಯುರ್ವೇದ ಅತ್ಯಂತ ಸಹಕಾರಿ. ಪ್ರಾಣಯಾಮದಿಂದ ಉಸಿರಾಟದ ಸಮಸ್ಯೆಯನ್ನು ನಿವಾರಿಸಬಹುದು.

ಕಪಾಲಬಾತಿ, ಅನುಲೋಮ-ವಿಲೋಮ ವಿಧಾನಗಳಿಂದ ದೆಹದ ಉಸಿರಾಟದ ಕ್ರಿಯೆ ಸಾರಾಗವಾಗುತ್ತದೆ. ನಾವೆಲ್ಲರೂ ಯೋಗಾಸನ, ಪ್ರಾಣಾಯಮ ಮಾಡಿದರೆ ಯೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಮೋದಿ ವಿಶ್ಲೇಷಿಸಿದರು.

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲಿ ಜನರು ಬಡವರಿಗಾಗಿ ಸೇವೆ ಸಲ್ಲಿಸುತ್ತಿರುವುದು ಅತ್ಯಂತ ಪ್ರಶಂಸನೀಯ. ಇವರ ಸೇವೆ ಮತ್ತು ಸಹಕಾರ ಸದಾ ಅನುಕರಣೀಯ ಎಂದು ಮೋದಿ ಉಲ್ಲೇಖಿಸಿದರು.

ದೇಶದ ಬಡವರ ರಕ್ಷಣೆಗಾಗಿ ಜಾರಿಯಲ್ಲಿರುವ ಆಯುಷ್ಮಾನ್ ಭಾರತ್ ಯೋಜನೆಯಡಿ ಒಂದು ಕೋಟಿಗೂ ಹೆಚ್ಚು ಮಂದಿ ಅನುಕೂಲ ಪಡೆದಿದ್ದಾರೆ. ಇದು ನಾರ್ವೆ ಮತ್ತು ಸಿಂಗಾಪುರ್ ಜನಸಂಖ್ಯೆಗಿಂತ ಎರಡರಷ್ಟು ಆಗಿದೆ ಎಂದು ಮೋದಿ ಹೇಳಿದರು.

ಸಾಮಾಜಿಕ ಅಂತರದ ಮಂತ್ರ ಪಠಿಸಿದ ಮೋದಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅನಗತ್ಯವಾಗಿ ಮನೆಯಿಂದ ಯಾರೂ ಹೊರ ಬರಬಾರದು ಎಂದು ಸಲಹೆ ನೀಡಿದರು.

Facebook Comments

Sri Raghav

Admin