ಮುಂದಿನ ವರ್ಷ ಮೋದಿ ದುಬೈ ಪ್ರವಾಸ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.30- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದುಬೈ ಎಕ್ಸಪೋ 2022ರಲ್ಲಿ ಭಾಗವಹಿಸಲು ಮುಂದಿನ ವರ್ಷ ವಿದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಕಳೆದೆರಡು ವರ್ಷಗಳಲ್ಲಿ ಕೋವಿಡ್-19ರಿಂದಾಗಿ ಪ್ರಧಾನಿ ತಮ್ಮ ವಿದೇಶಿ ಪ್ರವಾಸಕ್ಕೆ ಕಡಿವಾಣ ಹಾಕಿದ್ದರು. ಬಾಂಗ್ಲಾದೇಶ, ಅಮೆರಿಕಾ ಹೊರತು ಪಡಿಸಿ ಉಳಿದ ದೇಶಗಳಿಗೆ ಭೇಟಿ ನೀಡಿಲ್ಲ.

ಆದರೆ ಜನವರಿಯಲ್ಲಿ ದುಬೈನಲ್ಲಿ ನಡೆಯುವ ಜಾಗತಿಕ ಸಮಾವೇಶದಲ್ಲಿ ಭಾಗವಹಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಕೊರೊನಾದ ಮೂರನೇ ಅಲೆ ಅಥವಾ ಓಮಿಕ್ರಾನ್ ಸೋಂಕು ವ್ಯಾಪಿಸದೆ ಇದ್ದರೆ ಪ್ರಧಾನಿ ಪ್ರವಾಸ ಖಚಿತವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಭೂ ಖಂಡದ ಸುಸ್ಥಿರ ಭವಿಷ್ಯಕ್ಕಾಗಿ ದುಬೈ ಎಕ್ಸಪೋ ಎಂಬ ಸಮಾವೇಶ ಆಯೋಜಿಸಲಾಗಿದೆ. ಅಲ್ಲಿ ಭಾರತ ನಾಲ್ಕು ಮಹಡಿಗಳ ಪ್ರದರ್ಶನ ಮಳಿಗೆ ಸ್ಥಾಪಿಸಿದೆ. ಆರ್ಯವೇದ, ಯೋಗ, ಭಾಹ್ಯಾಕಾಶ ಕಾಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ದೇಶ 2.5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಭಾಗವಾಗುತ್ತಿದ್ದು, ಮತ್ತಷ್ಟು ಅಭಿವೃದ್ಧಿಗೆ ಅಂತರರಾಷ್ಟ್ರೀಯ ಸಮುದಾಯದ ಸಹಭಾಗಿತ್ವಕ್ಕೆ ಮೋದಿ ಪಾಲ್ಗೋಳ್ಳುವಿಕೆ ಉತ್ತೇಜನ ನೀಡಲಿದೆ ಎಂದು ಹೇಳಲಾಗಿದೆ.

ದುಬೈ ಸಮಾವೇಶದಲ್ಲಿ ಮೋದಿ ಅವರು ಭಾಗವಹಿಸುವಿಕೆಯಿಂದ ಯುನೈಟೆಡ್ ಅರಬ್ ಎಮಿರೆಟ್ಸ್ ಮತ್ತು ಭಾರತದ ನಡುವಿನ ವ್ಯವಹಾರಿಕ ಸಂಬಂಧವನ್ನು ಮತ್ತಷ್ಟು ದೃಢಗೊಳಿಸಲು ಸಹಾಯ ಮಾಡಲಿದೆ. ಭಾರತದಲ್ಲಿ ಕೃತಿಕ ಬುದ್ಧಿಮತ್ತೆ, ವೈಮಾನಿಕ, ಸರಕು ಮತ್ತು ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಳ್ಳಲು ಪ್ರಯತ್ನಿಸಲಿದ್ದಾರೆ ಎಂದು ಹೇಳಲಾಗಿದೆ.

Facebook Comments