ಬಹರೈನ್ ರಾಜಕುಮಾರನ ಜೊತೆ ಮೋದಿ ಮಹತ್ವದ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಮನಾಮ, ಆ.25-ಬಹರೈನ್ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಆ ದೇಶದ ರಾಜಕುಮಾರ ಸಲ್ಮಾನ್ ಬಿನ್ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರನ್ನು ಭೇಟಿ ಮಾಡಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸಿದರು.

ಭಾರತ ಮತ್ತು ಬಹರೈನ್ ನಡುವೆ ವಾಣಿಜ್ಯ ಸಂಬಂಧಗಳು ಮತ್ತು ಸಾಂಸ್ಕøತಿಕ ವಿನಿಮಯಗಳ ಮೇಲೆ ಬೆಳಕು ಚೆಲ್ಲುವ ಜೊತೆಗೆ ಎರಡೂ ರಾಷ್ಟ್ರಗಳ ನಡುವಣ ಬಾಂಧವ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಬಗ್ಗೆ ಮೋದಿ ಮತ್ತು ಸಲ್ಮಾನ್ ಚರ್ಚಿಸಿದರು.

ನಿನ್ನೆಯಿಂದ ಬಹರೈನ್ ಪ್ರವಾಸದಲ್ಲಿರುವ ಮೋದಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜೊತೆಗೆ ಆ ದೇಶದ ಉನ್ನತ ನಾಯಕರನ್ನು ಭೇಟಿ ಮಾಡಿ ಸಂಬಂಧ ವೃದ್ದಿಗೆ ಭದ್ರ ಬುನಾದಿ ಹಾಕಿದ್ದಾರೆ. ಈ ಸಂಸ್ಥಾನಕ್ಕೆ ಭೇಟಿ ನೀಡುತ್ತಿರುವ ಭಾರತದ ಪ್ರಥಮ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಅವರ ಕೊಲ್ಲಿ ರಾಷ್ಟ್ರ ಭೇಟಿ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.

ಬಳಿಕ ಅವರು ಇಂದು ಮತ್ತು ನಾಳೆ ಜಿ=7 ಶೃಂಗಸಭೆಯಲ್ಲಿ ಭಾಗವಹಿಸುವರು. ಈ ಸಭೆಯಲ್ಲಿ ಪರಿಸರ, ಹವಾಮಾನ, ವಾತಾವರಣ, ಸಾಗರ ಮತ್ತು ಡಿಜಿಟಲ್ ಪರಿವರ್ತನೆ ವಿಷಯಗ¼ ಕುರಿತು ಮುಖ್ಯವಾಗಿ ಚರ್ಚೆಯಾಗಲಿದೆ.

Facebook Comments