ಆಕ್ಸಿಜನ್ ಮತ್ತು ಲಸಿಕೆಯೊಂದಿಗೆ ಪ್ರಧಾನಿ ನಾಪತ್ತೆ : ರಾಹುಲ್ ವ್ಯಂಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.13-ಕೊರೊನಾ ಸೋಂಕು ಉಲ್ಬಣಗೊಂಡಿರುವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಕ್ಸಿಜನ್, ಲಸಿಕೆ ಹಾಗೂ ಔಷಧಿಯೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಚಿತ್ತವನ್ನು ಸೆಂಟ್ರಲ್ ವಿಸ್ಟಾ ಯೋಜನೆ ಪೂರ್ಣಗೊಳಿಸಲು ಹಾಗೂ ಔಷಧಿಗಳಿಗೆ ಜಿಎಸ್‍ಟಿ ವಿಧಿಸುವತ್ತ ಹರಿಸಿರುವ ಮೋದಿಯವರು ಸೋಂಕು ನಿವಾರಣೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರಾಹುಲ್ ಹಿಂದಿಯಲ್ಲಿ ಟ್ವಿಟ್ ಮಾಡಿ ಲೇವಡಿಯಾಡಿದ್ದಾರೆ.

ದೇಶದಲ್ಲಿ ಎರಡನೆ ಅಲೆ ಕೊರೊನಾ ಸೋಂಕು ಕಾಣಿಸಿಕೊಂಡು ಆಕ್ಸಿಜನ್, ಔಷಧಿ ಮತ್ತು ಲಸಿಕೆ ಆಭಾವ ಹೆಚ್ಚಾಗುತ್ತಿದ್ದರೂ ಕೇಂದ್ರ ಸರ್ಕಾರ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗುತ್ತಿರುವುದರ ಬಗ್ಗೆ ಪದೆ ಪದೆ ರಾಹುಲ್ ವಾಗ್ದಾಳಿ ನಡೆಸುತ್ತಲೆ ಇದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,37 ಕೋಟಿ ಗಡಿ ದಾಟಿ, ನಿನ್ನೆ ಒಂದೇ ದಿನ 4120 ಮಂದಿ ಸೋಂಕಿಗೆ ಬಲಿಯಾಗಿರುವ ಬೆನ್ನಲ್ಲೆ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಅವರು ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.

Facebook Comments

Sri Raghav

Admin