ಭಗತ್‍ಸಿಂಗ್ ಶೌರ್ಯ ಎಲ್ಲಾ ವಯಸ್ಸಿನವರಿಗೂ ಸೂರ್ತಿ : ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.28- ಕ್ರಾಂತಿಕಾರಿ ಸ್ವಾತಂತ್ರ್ಯ ಸೇನಾನಿ ಭಗತ್‍ಸಿಂಗ್ ಅವರ ಶೌರ್ಯ ಎಲ್ಲಾ ವಯಸ್ಸಿನವರಿಗೂ ಸೂರ್ತಿ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನವಾದ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಿರುವ ಪ್ರಧಾನಿಯವರು, ಚಿಕ್ಕ ವಯಸ್ಸಿನಿಂದಲೇ ಬ್ರಿಟಿಷ್ ಆಡಳಿತವನ್ನು ಕ್ಕರಿಸಿದ್ದ ಭಗತ್‍ಸಿಂಗ್ ಅವರು ಕ್ರಾಂತಿಕಾರಿ ಹೋರಾಟದಿಂದಲೇ ಎಲ್ಲರನ್ನು ಹುರಿದುಂಬಿಸಿ ಆಂಗ್ಲರ ವಿರುದ್ಧ ಹೋರಾಡಿದ್ದರು ಎಂದು ಸ್ಮರಿಸಿದ್ದಾರೆ.

ಕೇವಲ 23 ವರ್ಷದವರಾಗಿದ್ದಾಗ ಅವರನ್ನು ಗಲ್ಲಿಗೇರಿಸಲಾಯಿತು. ಭಗತ್ ಸಿಂಗ್ ಸ್ವಾತಂತ್ರ್ಯ ಚಳುವಳಿಯ ಅತ್ಯಂತ ಗಮನಾರ್ಹ ವೀರರಾಗಿದ್ದಾರೆ. ಅವರ ತ್ಯಾಗ, ಬಲಿದಾನ ಪ್ರತಿಯೊಬ್ಬ ಭಾರತೀಯನಿಗೂ ಸ್ಪೂರ್ತಿ ಎಂದು ಗುಣಗಾನ ಮಾಡಿದ್ದಾರೆ.

ಅಮರ ಹುತಾತ್ಮ ಭಗತ್ ಸಿಂಗ್ ಅವರ ಜನ್ಮ ವಾರ್ಷಿಕೋತ್ಸವದಂದು ಗೌರವ. ಅವರ ಧೈರ್ಯ ಮತ್ತು ಶೌರ್ಯ ದೇಶವಾಸಿಗಳಿಗೆ ಯುಗಯುಗದಲ್ಲಿ ಸೂರ್ತಿ ನೀಡುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಮನ್ ಕಿ ಬಾತ್ ಪ್ರಸಾರದ ಕ್ಲಿಪ್‍ನ್ನೂ ಲಗತ್ತಿಸಿ, ಭಗತ್ ಸಿಂಗ್ ಅವರಿಗೆ ತುಂಬು ಹೃದಯದಿಂದ ಮೋದಿ ಗೌರವ ಸಲ್ಲಿಸಿದ್ದಾರೆ.

Facebook Comments

Sri Raghav

Admin