ತೆಲಂಗಾಣ, ರಾಜಸ್ತಾನ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ

ಈ ಸುದ್ದಿಯನ್ನು ಶೇರ್ ಮಾಡಿ

Telangana--01414

ಹೈದರಾಬಾದ್/ಜೈಪುರ್, ಡಿ.6 (ಪಿಟಿಐ)- ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿತವಾಗಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ನಾಳೆ ತೆಲಂಗಾಣ ಮತ್ತು ರಾಜಸ್ತಾನದಲ್ಲಿ ಮತದಾನಕ್ಕೆ ವೇದಿಕೆ ಸಜ್ಜಾಗಿದೆ. ಪ್ರಮುಖ ರಾಜಕೀಯ ಪಕ್ಷಗಳ ಸಮರಕ್ಕೆ ಕಾರಣವಾಗಲಿರುವ ಈ ಎರಡೂ ರಾಜ್ಯಗಳ ಚುನಾವಣೆಗಳು ಸುಗಮ, ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಸಕಲ ಸಿದ್ದತೆ ನಡೆದಿದೆ. ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆ.

ತೆಲಂಗಾಣದ 119 ಕ್ಷೇತ್ರದಲ್ಲಿ ಶುಕ್ರವಾರ ಮತದಾನ ನಡೆಯಲಿದೆ. ಉಸ್ತುವಾರಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‍ಎಸ್)ಗೆ ಕಾಂಗ್ರೆಸ್ ನೇತೃತ್ವದ ಐದು ಮಿತ್ರಪಕ್ಷಗಳ ಪ್ರಜಾಕೂಟ ಪ್ರಬಲ ಸವಾಲೊಡ್ಡಿದೆ. ರಾಜಸ್ತಾನದ 200 ವಿಧಾನಸಭಾ ಕ್ಷೇತ್ರಗಳ ಪೈಕಿ ನಾಳೆ 199 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರವನ್ನು ಕೆಳಗಿಳಿಸಲು ರಣ ಕಹಳೆ ಮೊಳಗಿಸಿರುವ ಕಾಂಗ್ರೆಸ್ ಭಾರೀ ಪೈಪೋಟಿ ನೀಡಿದ್ದು ಇದು ಹೈವೋಲ್ಟೆಜ್ ಸ್ಫರ್ಧಾ ಕಣವಾಗಿ ಪರಿಣಮಿಸಿದೆ.

ನವೆಂಬರ್ 12 ಮತ್ತು 20ರಂದು 91 ಸ್ಥಾನಗಳ ಛತ್ತೀಸ್‍ಗಢ ವಿಧಾನಸಭೆಗೆ ಚುನಾವಣೆ ನಡೆದಿತ್ತು. ನವೆಂಬರ್ 28ರಂದು ಮಧ್ಯಪ್ರದೇಶ(231) ಹಾಗೂ ಮಿಜೋರಾಂ(40) ರಾಜ್ಯಗಳಲ್ಲಿ ಮತದಾನವಾಗಿತ್ತು. ಡಿಸೆಂಬರ್ 11 ರಂದು ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Facebook Comments

Sri Raghav

Admin