ಕೇಸರಿ ರುಮಾಲಿನಲ್ಲಿ ಕಂಗೊಳಿಸಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.26- ರಾಷ್ಟ್ರೀಯ ಹಬ್ಬಗಳಲ್ಲಿ ಭಾರತದ ಭವ್ಯ ಸಂಸ್ಕøತಿ ಮತ್ತು ಪರಂಪರೆಯನ್ನು ಅನುಸರಿಸುವ ಪದ್ಧತಿಯನ್ನು ಮೋದಿ 71ನೆ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲೂ ಮುಂದುವರಿಸಿದರು.ರಾಜಧಾನಿ ದೆಹಲಿಯ ರಾಜ್‍ಪಥ್‍ನಲ್ಲಿಂದು ನಡೆದ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಮೋದಿ ಶ್ವೇತ ಜುಬ್ಬ-ಪೈಜಾಮ ಮತ್ತು ವೇಸ್ಟ್‍ಕೋಟ್‍ನೊಂದಿಗೆ ಕೇಸರಿ ರುಮಾಲು (ಬಂದೇಜ್) ಧರಿಸಿ ಎಂದಿನಂತೆ ಗಮನ ಸೆಳೆದರು.

ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭಗಳಲ್ಲಿ ಮೋದಿ ಶ್ವೇತವಸ್ತ್ರಧಾರಿಯಾಗಿ ಜೋಧ್‍ಪುರಿ ರುಮಾಲು ಧರಿಸುವುದು ವಾಡಿಕೆ. ಅವರು ಪ್ರಧಾನಮಂತ್ರಿಯಾದ ನಂತರ ಪ್ರತಿ ಬಾರಿ ರಾಷ್ಟ್ರೀಯ ಹಬ್ಬಗಳಲ್ಲಿ ಬಣ್ಣ ಬಣ್ಣದ ಜೋಧ್‍ಪುರಿ ರುಮಾಲುಗಳನ್ನು ಧರಿಸಿ ವಿಶೇಷ ಗಮನ ಸೆಳೆಯುತ್ತಾರೆ. ಗಣರಾಜ್ಯೋತ್ಸವದಲ್ಲೂ ಇದು ಹೊರತಾಗಿರಲಿಲ್ಲ.

ಗಾಢ ಕೇಸರಿ ಬಣ್ಣದ ರುಮಾಲು ಮತ್ತು ಶ್ವೇತವಸ್ತ್ರದೊಂದಿಗೆ ಶಿಸ್ತುಬದ್ಧವಾಗಿ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ಎಂದಿನಂತೆ ಎಲ್ಲರತ್ತ ಶುಭ ಕೋರುವಂತೆ ಕೈ ಬೀಸಿದರು. ಕಳೆದ ಬಾರಿ ಸ್ವಾತಂತ್ರ್ಯ ದಿನೋತ್ಸವದ ಸಂದರ್ಭದಲ್ಲಿ ಹಳದಿ-ಹಸಿರು ಮತ್ತು ಕೆಂಪು ಬಣ್ಣಗಳಿದ್ದ ಜೋಧ್‍ಪುರಿ ರುಮಾಲು ಧರಿಸಿ ಮೋದಿ ಎಲ್ಲರನ್ನೂ ಆಕರ್ಷಿಸಿದ್ದರು.

Facebook Comments