ದೇಶದ 80 ಕೋಟಿ ಜನತೆಗೆ ನವೆಂಬರ್ ವರೆಗೂ ಉಚಿತ ರೇಷನ್ : ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ, ಅದರ ವಿರುದ್ಧ ಹೋರಾಟ ಇನ್ನೂ ಮುಂದುವರಿಸುವ ನಿಟ್ಟಿನಲ್ಲಿ ನವೆಂಬರ್ ತಿಂಗಳ ಅಂತ್ಯದವರೆಗೆ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ವಿಸ್ತರಿಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಘೋಷಿಸಿದ್ದಾರೆ.

ಈ ಮೂಲಕ ಇನ್ನು ಐದು ತಿಂಗಳು ಸುಮಾರು 80 ಕೋಟಿ ದೇಶದ ಜನತೆ ಉಚಿತವಾಗಿ ಆಹಾರ ಧಾನ್ಯಗಳನ್ನು ಪಡೆಯಬಹುದು.ಲಾಕ್‌ಡೌನ್ ಸಡಿಲಿಕೆಯ ಎರಡನೇ ಹಂತದ ಹೊಸ್ತಿಲಲ್ಲಿ ಮಂಗಳವಾರ ಟಿವಿ ಭಾಷಣ ಮಾಡಿದ ಮೋದಿ ಅವರು ,ರಾಷ್ಟ್ರವ್ಯಾಪಿ ಒಂದೇ ರೇಶನ್ ಕಾರ್ಡ್‌ ,( ಒಂದು ರಾಷ್ಟ್ರ , ಒಂದೇ ಪಡಿತರ) ವ್ಯವಸ್ಥೆಯನ್ನು ಅತಿ ಶೀಘ್ರದಲ್ಲಿ ಬಾರಿಗೆ
ತರುವ ಬಗ್ಗೆಯೂ ಉಲ್ಲೇಖ ಮಾಡಿದರು.

ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ತಿಂಗಳಿಗೆ ಉಚಿತ ಪಡಿತರ ನೀಡಲಾಗುವುದು. 5 ಕೆ.ಜಿ ಗೋಧಿ ಅಥವಾ ಅಕ್ಕಿ, ಒಂದು ಕೆ.ಜಿ. ಕಾಳು ಉಚಿತವಾಗಿ ನೀಡಲಾಗಿದೆ. ದೇಶದ 80 ಕೋಟಿ ಜನರಿಗೆ ಇದರ ಲಾಭವಾಗಲಿದೆ ಎಂದು ತಿಳಿಸಿದ್ದಾರೆ.

ಅನ್ನ ಯೋಜನೆ ವಿಸ್ತರಣೆಯಿಂದ ಸರ್ಕಾರ ಮೇಲೆ 90 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದರು.ಒಂದು ದೇಶ, ಒಂದು ರೇಷನ್ ಕಾರ್ಡ್ ದೇಶದ ಎಲ್ಲರಿಗೂ ಒಂದೇ ರೇಷನ್‌ ಕಾರ್ಡ್ ಕೊಡುವ ‘ಒಂದು ದೇಶ, ಒಂದು ರೇಷನ್ ಕಾರ್ಡ್’ ಯೋಜನೆಯನ್ನೂ ಶೀಘ್ರ ಜಾರಿ ಮಾಡ್ತೀವಿ. ಈ ಕಾರ್ಯಕ್ಕಾಗಿ ಕೇಂದ್ರ ಸರ್ಕಾರ 2 ಲಕ್ಷ ಕೋಟಿ ರೂಪಾಯಿ ವ್ಯಯಿಸುತ್ತಿದೆ ಎಂದು ತಿಳಿಸಿದರು.

ಲಾಕ್‍ಡೌನ್ ಸಮಯದಲ್ಲಿ ಸರ್ಕಾರ ಎಲ್ಲರಿಗೂ ಆಹಾರ ಒದಗಿಸುವ ಕೆಲಸವನ್ನ ಮಾಡಿದೆ. ಯಾರು ಖಾಲಿ ಹೊಟ್ಟೆಯಿಂದ ಮಲಗಿಲ್ಲ. ಸರ್ಕಾರ ಪಡಿತರ ವ್ಯವಸ್ಥೆಯ ಮೂಲಕ ಮೂರು ತಿಂಗಳ ಅವಧಿಯ ಮುಂಗಡ ಆಹಾರ ಧಾನ್ಯಗಳ ವಿತರಣೆ ಮಾಡಲಾಗಿದೆ. 80 ಕೋಟಿಗೂ ಹೆಚ್ಚು ಜನರಿಗೆ ಆಹಾರದ ವ್ಯವಸ್ಥೆ ನೀಡಲಾಗಿದೆ. ಬಡವರ ಜನ್‍ಧನ್ ಖಾತೆಗೆ ಹಣ ಹಾಕಲಾಗಿದೆ.

ಇಂತಹ ಕಷ್ಟದ ಸಮಯದಲ್ಲಿ ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ನಿಮ್ಮ ತೆರಿಗೆಯಿಂದ ನಾವು ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಇದರ ಜೊತೆಗೆ ಆತ್ಮನಿರ್ಭರ ಭಾರತದತ್ತ ದೊಡ್ಡ ಹೆಜ್ಜೆ ಇಡುತ್ತಿದ್ದೇವೆ.

ಇದೀಗ ದೇಶದಲ್ಲಿ ಮಳೆಗಾಲ ಶುರುವಾಗಿದೆ. ಕೃಷಿ ಕ್ಷೇತ್ರದಲ್ಲಿ ಈಗ ಚುರುಕಿನ ಚಟುವಟಿಕೆ ಕಂಡು ಬರುತ್ತಿದೆ. ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚು ಜನರಿಗೆ ನಮ್ಮ ಸರ್ಕಾರಗಳು ಪಡಿತರ ವಿತರಿಸಿವೆ ಎಂದರು.

ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡಿ ಇಂದು ಅನ್‍ಲಾಕ್ ಸ್ಥಿತಿಗೆ ಬಂದಿವೆ. ವಿಶ್ವದ ಇತರೆ ರಾಷ್ಟ್ರಗಳನ್ನು ಗಮನಿಸಿದ್ರೆ ಭಾರತ ಸುಸ್ಥಿತಿಯಲ್ಲಿದ್ದೇವೆ. ಸೂಕ್ತ ಸಮಯದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳಿಂದು ಇಂದು ಲಕ್ಷ ಲಕ್ಷ ಜನರ ಜೀವ ಉಳಿದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶೀತಗಾಲಕ್ಕೆ ಪ್ರವೇಸಿಸಿದ್ದೇವೆ. ಕೊಂಚ ಹೆಚ್ಚು ಜಾಗ್ರೆತೆ ಅಗತ್ಯಿತರ ದೇಶಗಳಿಗೆ ಹೋಲಿಸಿದರೆ ಕೋವಿಡ್ ವಿಚಾರದಲ್ಲಿ ನಾವು ಹೆಚ್ಚು ಸುಭದ್ರವಾಗಿದ್ದೇವೆ. ಲಾಕ್ಡೌನ್ ಸಡಿಲಿಕೆ ನಂತರ ಎಚ್ಚರಿಕೆಯನ್ನೂ ಗಾಳಿಗೆ ತೂರಲಾಗಿದೆ.

ಸಾಮಾಜಿಕ ನಿಯಮ ಮೀರಿ ಯಾರಾದರೂ ನಡೆದುಕೊಂಡರೇ ಅವರಿಗೆ ಬುದ್ಧಿವಾದ ಹೇಳಿ ಎಂದು ಮನವಿ ಮಾಡಿದರು. ಜಾಗತಿಕವಾಗಿ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಹೆಚ್ಚು ಸ್ಥಿರವಾಗಿದೆ.

ಸರಿಯಾದ ಸಮಯಕ್ಕೆ ತೆಗೆದುಕೊಂಡ ಕ್ರಮಗಳು ಇಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಪ್ರಧಾನಿ ಹೇಳಿದರು. ಆದರೆ, ಜೂನ್​ 1ರಿಂದ ಅನ್​ಲಾಕ್​ 1ರಲ್ಲಿ ಹಂತಹಂತವಾಗಿ ಲಾಕ್​ಡೌನ್​ ಸಡಿಲಿಕೆ ಮಾಡಿಕೊಂಡು ಬರಲಾಯಿತು. ಆದರೆ, ಈ ವೇಳೆ ಜನರು ಹೆಚ್ಚು ನಿರ್ಲಕ್ಷತನ ತೋರಿದರು.

ಸಾಮಾಜಿಕ ಅಂತರ ಮರೆತರು. ಇದಕ್ಕೂ ಮುನ್ನ ನಾವು ಜನರಿಗೆ ಮಾಸ್ಕ್​ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುಂತೆ ಹಾಗೂ ದಿನದಲ್ಲಿ ಹಲವು ಬಾರಿ 20 ಸೆಕೆಂಡ್ ಕೈ ತೊಳೆದುಕೊಳ್ಳುವಂತೆ ಮುನ್ನೆಚ್ಚರಿಕೆ ನೀಡಿದ್ದೆವು. ಆದರೆ, ಜನರು ಇವುಗಳನ್ನು ಸರಿಯಾಗಿ ಪಾಲನೆ ಮಾಡಲೇ ಇಲ್ಲ ಎಂದು ಪ್ರಧಾನಿ ಮೋದಿ ಅವರು ಅಸಮಾಧಾನ ಹೊರಹಾಕಿದರು.

ಈಗ ನಾವು ಅನ್​ಲಾಕ್​ 2 ಹಂತ ಪ್ರವೇಶಿಸಿದ್ದೇವೆ. ಮತ್ತು ಕೆಮ್ಮು, ಜ್ವರ ಮತ್ತು ಶೀತವೂ ಆರಂಭವಾಗಲಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ತಾವೇ ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ ಎಂದು ಪ್ರಧಾನಿ ಮೋದಿ ಮನವಿ ಮಾಡಿಕೊಂಡರು.

ಸಾರ್ವಜನಿಕ ಸ್ಥಳ ಮತ್ತು ವ್ಯಾಪಾರದ ವೇಳೆ ಕೊರೊನಾ ನಿಯಮಗಳನ್ನು ಪಾಲಿಸುತ್ತಿ ಲ್ಲ ಇರೋದು ಬೇಸರದ ಸಂಗತಿಯಾಗಿದೆ. ನಿಮ್ಮ ಆಸುಪಾಸಿನ ಜನ ನಿಯಮ ಪಾಲನೆ ಮಾಡದಿದ್ದರೆ ನೀವು ತಿಳಿ ಹೇಳಬೇಕು.

ಕಂಟೈನ್‍ಮೆಂಟ್ ಝೋನ್ ಗಳ ಮೇಲೆ ಹೆಚ್ಚಿನ ನಿಗಾ ಇಡಬೇಕು. ಗ್ರಾಮದ ವ್ಯಕ್ತಿಯಿಂದ ಹಿಡಿದು ಪ್ರಧಾನ ಮಂತ್ರಿಯವರೆಗೆ ಎಲ್ಲರಿಗೂ ಕಾನೂನು ಒಂದೇಯಾಗಿವೆ. ಮಾಸ್ಕ್ ಧರಿಸದ ಬೇರೆ ದೇಶದ ಪ್ರಧಾನಿಗೆ ದಂಡ ಹಾಕಿದ್ದಾರೆ.

ಹಾಗಾಗಿ ನಿಯಮಗಳಿಗಿಂತ ಯಾರು ದೊಡ್ಡವರಲ್ಲ ಎಂಬ ಎಚ್ಚರಿಕೆಯನ್ನು ನೀಡಿದರು ‌ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಕೊರೋನಾ ವಿರುದ್ಧ ಕಂಡುಹಿಡಯಲಾಗಿರುವ ಲಸಿಕೆ ಸಂಬಂಧ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

Facebook Comments

Sri Raghav

Admin