ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಪ್ರಧಾನಿ ಮೋದಿ ಭಾಷಣ

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ,ಜೂ.11-ಮುಂದಿನ ವಾರ ನಡೆಯಲಿರುವ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭೂನಾಶ, ಮರಳುಗಾರಿಕೆ ಹಾಗೂ ಬರಗಾಲದ ಬಗ್ಗೆ ಮಾತನಾಡಲಿದ್ದಾರೆ.

ಭೂನಾಶ ವಿರುದ್ಧದ ವಿಶ್ವಸಂಸ್ಥೆ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೋದಿ ಅವರು ಜೂ.14 ರಂದು ನಡೆಯಲಿರುವ ಮಹಾಧಿವೇಶನ ಸಂದರ್ಭಲ್ಲಿ ವರ್ಚುಯಲ್ ಮೀಟಿಂಗ್ ಮೂಲಕ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೋದಿ ಅವರಲ್ಲದೆ ವಿಶ್ವಸಂಸ್ಥೆಯ ಉಪ ಮಹಾ ಪ್ರಧಾನ ಕಾರ್ಯದರ್ಶಿ ಅಮೀನಾ ಮಹಮ್ಮದ್ ಇನ್ನಿತರ ಮುಖಂಡರು ಮಹಾಧಿವೇಶನದಲ್ಲಿ ಮಾತನಾಡಲಿದ್ದಾರೆ.

ಭೂ ಸವಕಳಿ ತಪ್ಪಿಸಿ ಆರೋಗ್ಯವಂತ ಭೂಮಿಯನ್ನಾಗಿ ಮಾರ್ಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರು ವರದಿ ಮಂಡಿಸಲಿರುವ ಸಭೆಯಲ್ಲಿ ಕೃಷಿ ಕೈಗಾರಿಕೆಗಳ ಮುಖಂಡರು, ಪ್ರತಿನಿಧಿಗಳು, ಅಂತಾರಾಷ್ಟ್ರೀಯ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲ್ಲಿದ್ದಾರೆ.

Facebook Comments

Sri Raghav

Admin