ಎಲ್ಲ ಅಸಂಘಟಿತ ವಲಯದ ಕಾರ್ಮಿಕರಿಗೂ ಕನಿಷ್ಠ ವೇತನ ವಿಸ್ತರಣೆ : ಪ್ರಧಾನಿ 

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.25- ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ಕೃಷಿ ಮತ್ತು ಕಾರ್ಮಿಕ ಮಸೂದೆಗಳನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ಮಸೂದೆಗಳನ್ನು ಟೀಕಿಸುತ್ತಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಯತ್ನಿಸುತ್ತಿರುವ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಮಸೂದೆಗಳಿಂದ ದೇಶದ ಸಂಘಟಿತ ಮತ್ತು ಅಸಂಘಟಿತ ವಲಯದ ಸುಮಾರು 50 ಕೋಟಿ ಕಾರ್ಮಿಕರಿಗೆ ಸಕಾಲದಲ್ಲಿ ವೇತನ ಲಭಿಸಲಿದೆ ಎಂದರು.

ದೇಶದ ಅಸಂಘಟಿತ ವಲಯದ ಶೇ.30ರಷ್ಟು ಕಾರ್ಮಿಕರಿಗೆ ಈಗ ಕನಿಷ್ಟ ವೇತನ ಸೌಲಭ್ಯ ಲಭಿಸುತ್ತಿದೆ. ಇದನ್ನು ಈ ವಲಯದ ಎಲ್ಲ ಕಾರ್ಮಿಕರಿಗೂ ವಿಸ್ತರಣೆ ಮಾಡಲಾಗುವುದು ಎಂದು ಮೋದಿ ಘೋಷಿಸಿದರು.

ಭಾರತೀಯ ಜನತಾಪಕ್ಸದ ಚಿಂತಕ ದೀನ್‍ದಯಾಳ್ ಉಪಾಧ್ಯಾಯ ಅವರ ಜನ್ಮಜಯಂತಿ ಅಂಗವಾಗಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.

ಹೊಸ ಮಸೂದೆಗಳು ಕೃಷಿ ಮತ್ತು ಕಾರ್ಮಿಕ ಕ್ಷೇತ್ರಗಳಲ್ಲಿ ಐತಿಹಾಸಿಕ ಮತ್ತು ಕಾಂತ್ರಿಕಾರಿ ವಿದೇಯಕಗಳಾಗಿವೆ. ಕೃಷಿ ಮಸೂದೆಗಳಿಂದ ಸಣ್ಣ , ಅತಿ ಸಣ್ಣ ಮತ್ತು ಆರ್ಥಿಕ ದುರ್ಬಲ ರೈತರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಅದೇ ರೀತಿ ಕಾರ್ಮಿಕ ಮಸೂದೆಗಳೂ ಸಹ ಅಸಂಘಟಿತ ವಲಯದ ಕಾರ್ಮಿಕರನ್ನು ರಕ್ಷಿಸುತ್ತವೆ ಎಂದು ಸಮರ್ಥಿಸಿಕೊಂಡರು.

ವಿರೋಧ ಪಕ್ಷಗಳು ವಿನಾಕಾರಣ ವಿಧೇಯಕಗಳಿಗೆ ವಿರೋಧ ವ್ಯಕ್ತಪಡಿಸಿ ರೈತರು ಮತ್ತು ಕಾರ್ಮಿಕರ ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ ಎಂಧು ಅವರು ತರಾಟೆಗೆ ತೆಗೆದುಕೊಂಡರು.

 

Facebook Comments

Sri Raghav

Admin