ಕೊರೋನಾ ಲಸಿಕೆ ಹಾಕಿಸಿಕೊಂಡ ಪ್ರಧಾನಿ ಮೋದಿ
ನವದೆಹಲಿ, ಮಾ.1 (ಪಿಟಿಐ)- ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣದ ಮೂರನೇ ಹಂತದ ಲಸಿಕೆ ಅಭಿಯಾದ ಪ್ರಥಮ ಡೋಸ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿ ಏಮ್ಸ್ ಆಸ್ಪತ್ರೆಯಲ್ಲಿ ಹಾಕಿಸಿಕೊಳ್ಳುವ ಮೂಲಕ ಸೋಮವಾರ ಚಾಲನೆ ನೀಡಿದರು. ಚುಚ್ಚುಮದ್ದನ್ನು ಪಡೆಯಲು ಅರ್ಹರಾದ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.
ಪುದುಚೇರಿ ದಾದಿ ನಿವೇದ ಅವರು ಭಾರತ್ ಬಯೋಟೆಕ್ನ ಕೋವಾಕ್ಸಿನ್ ಅನ್ನು ಪ್ರಧಾನಿಯವರಿಗೆ ನೀಡಿದರು. ಲಸಿಕೆ ಶಾಟ್ ತೆಗೆದುಕೊಂಡ ನಂತರ ಮೋದಿ ಅವರು, ಏಮ್ಸ್ನಲ್ಲಿ ನಾನು ಮೊದಲ ಡೋಸ್ ಕೋವಿಡ್-19 ಲಸಿಕೆ ತೆಗೆದುಕೊಂಡಿದ್ದೇನೆ.
ಕೊರೊನಾ ವಿರುದ್ಧ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ತ್ವರಿತ ಗತಿಯಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ, ಅರ್ಹರು ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ಹೇಳಿ, ತಾವು ಸ್ವತಃ ಲಸಿಕೆ ಡೋಸ್ ಹಾಕಿಸಿಕೊಳ್ಳುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರ. ಇದರಲ್ಲಿ ಅವರು ಅಸ್ಸಾಮೀಸ್ ಗ್ಯಾಮೊಚಾ ಅನ್ನು ಆಡುತ್ತಿದ್ದಾರೆ ಮತ್ತು ಅವರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಜತೆಯಲ್ಲಿ ಸಿಸ್ಟರ್ ನಿವೇದ ಮತ್ತು ಮತ್ತೊಬ್ಬ ಕೇರಳ ದಾದಿ ಕಂಡುಬಂದಿದ್ದಾರೆ.
ಪ್ರಧಾನ ಮಂತ್ರಿ ಮೋದಿ ಅವರು ನಾಗರಿಕರಿಗೆ ಅನಾನುಕೂಲವಾಗುವುದ್ದನ್ನ ತಪ್ಪಿಸಲು ಬೆಳ್ಳಂಬೆಳಗ್ಗೆ ಯಾವುದೇ ಭದ್ರತಾ ವ್ಯವಸ್ಥೆಯನ್ನು ತೆಗೆದುಕೊಳ್ಳದೆ, ನೇರವಾಗಿ ರಸ್ತೆ ಮೂಲಕ ಏಮ್ಸ್ ಆಸ್ಪತ್ರೆಗೆ ತೆರಳಿರುವುದು ವಿಶೇಷವಾಗಿತ್ತು ಎಂದು ಮೂಲಗಳು ತಿಳಿಸಿವೆ.
ನಾಗರಿಕರು ವ್ಯಾಕ್ಸಿನ್ ಪಡೆಯಲು ವೋ-ವಿನ್ 2.0 ಪೋರ್ಟಲ್ ಅಥವಾ ಐಟಿ ಅಪ್ಲಿಕೇಷನ್ ಆದ ಆರೋಗ್ಯ ಸೇತು ಮೂಲಕ ಮುಂಗಡವಾಗಿ ನೋಂದಾಯಿಸಿಕೊಂಡಿರಬೇಕಾಗಿದೆ.