ನಾಗಾ ಉಗ್ರರ ಉಪಟಳ ನಿಯಂತ್ರಣಕ್ಕೆ ಮೋದಿ ಮಾಸ್ಟರ್ ಪ್ಲಾನ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಕೋಹಿಮಾ, ಆ.18- ಈಶಾನ್ಯ ಭಾರತದ ಅಷ್ಟ ಸಹೋದರಿ ರಾಜ್ಯಗಳಲ್ಲಿ ಒಂದಾದ ನಾಗಾಲ್ಯಾಂಡ್‍ನಲ್ಲಿ ನಾಗಾ ಉಗ್ರಗಾಮಿಗಳ ಉಪಟಳ ಹೆಚ್ಚಾಗಿದ್ದು, ಮತ್ತೊಂದೆಡೆ ಸಂಧಾನ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹೊಸ ಯೋಜನೆಯೊಂದನ್ನು ರೂಪಿಸಿದ್ದಾರೆ.

ನಾಗಾಲ್ಯಾಂಡ್‍ನ ಅತಿದೊಡ್ಡ ಬಂಡುಕೋರ ಸಂಘಟನೆಯಾದ ಎನ್‍ಎಸ್‍ಸಿಎನ್ (ಐಎಂ), ನ್ಯಾಷನಲ್ ನಾಗಾ ಪೊಲಿಟಿಕಲ್ ಗ್ರೂಪ್ (ಎನ್‍ಎನ್‍ಪಿಜಿ) ಸೇರಿದಂತೆ ವಿವಿಧ ಉಗ್ರಗಾಮಿ ಸಂಘಟನೆಗಳೊಂದಿಗೆ ನಾಗಾಲ್ಯಾಂಡ್ ರಾಜ್ಯಪಾಲ ಆರ್.ಎನ್.ರವಿ ಕೇಂದ್ರ ಸಂಧಾನಕಾರರಾಗಿ ನಡೆಸಿದ ಮಾತುಕತೆ ವಿಫಲವಾಗಿದೆ.

ಕಳೆದ 10 ತಿಂಗಳಿನಿಂದಲೂ ನಡೆಯುತ್ತಿರುವ ನಾಗಾ ಶಾಂತಿ ಮಾತುಕತೆ ಫಲಪ್ರದವಾಗದೆ ಇರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ರಂಗ ಪ್ರವೇಶಿಸಿದ್ದಾರೆ.

ಗುಪ್ತಚರ ದಳ (ಐಬಿ) ನಿರ್ದೇಶಕ ಮತ್ತು ಅತ್ಯಂತ ದಕ್ಷ ಎನಿಸಿರುವ ಅರವಿಂದ್ ಕುಮಾರ್ ಅವರನ್ನು ನಾಗಾ ಉಗ್ರರ ಜತೆಗೆ ಶಾಂತಿ ಮಾತುಕತೆ ನಡೆಸಿ ಬಂಡುಕೋರರು ಶಸ್ತ್ರಾಸ್ತ್ರ ತ್ಯಜಿಸುವಂತೆ ಮಾಡುವ ಹೊಣೆಗಾರಿಕೆ ನೀಡಲಾಗಿದೆ.

ಅಲ್ಲದೆ, ಗುಪ್ತಚರ ದಳದ ಮತ್ತೋರ್ವ ವಿಶೇಷ ಅಕಾರಿ ಅಕ್ಷಯ್ ಕುಮಾರ್ ಮಿಶ್ರಾ ಅವರನ್ನು ಸಹ ಈ ಸಂಧಾನ ಮಾತುಕತೆಯನ್ನು ನೆರವು ನೀಡಲು ನಿಯೋಜಿಸಲಾಗಿದೆ.

ಉಗ್ರರು ಮತ್ತು ಉಗ್ರಗಾಮಿಗಳ ಚಟುವಟಿಕೆ ಬಗ್ಗೆ ಅತ್ಯಂತ ನಿಖರ ಮಾಹಿತಿ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ನೀಡುತ್ತಿರುವ ಅರವಿಂದ್ ಕುಮಾರ್ ಅವರೇ ಈ ನಾಗಾ ಶಾಂತಿ ಮಾತುಕತೆಗೆ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿರುವ ಪ್ರಧಾನಿ ಪರಿಸ್ಥಿತಿಯನ್ನು ನಿಯಂತ್ರಿಸಿ ಈಶಾನ್ಯ ರಾಜ್ಯವನ್ನು ನಾಗಾ ಉಗ್ರರಿಂದ ಮುಕ್ತಗೊಳಿಸುವಂತೆ ಸಲಹೆ ನೀಡಿದ್ದಾರೆ.

Facebook Comments

Sri Raghav

Admin