ಪಾಕ್ ಪ್ರಧಾನಿ ಇಮ್ರಾನ್‌ಗೆ ಥ್ಯಾಂಕ್ಸ್ ಹೇಳಿದ ಮೋದಿ, ಕಾರಣವೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಗುರ್‍ದಾಸ್‍ಪುರ್/ಕರ್ತಾರ್‍ಪುರ್, ನ.9-ಬಾರತದ ಪಂಜಾಬ್ ಪ್ರಾಂತ್ಯದ ಗುರುದಾಸ್‍ಪುರ್‍ನ ಡೇರಾ ಬಾಬಾ ನಾನಕ್ ಮಂದಿರದಿಂದ ಪಾಕಿಸ್ತಾನದ ಪಂಬಾಜ್ ಪ್ರಾಂತ್ಯದ ನರ್ವಾಲ್ ಜಿಲ್ಲೆಯಲ್ಲಿರುವ ಸಿಖ್ ಸಮುದಾಯದ ಪವಿತ್ರ ಕ್ಷೇತ್ರ ಗುರುದ್ವಾರ್ ದರ್ಬಾರ್ ಸಾಹೀಬ್ ದೇಗುಲಕ್ಕೆ ಸಂಪರ್ಕಿ ಕಲ್ಪಿಸುವ ಕರ್ತಾರ್‍ಪುರ್ ಕಾರಿಡಾರ್ ಯೋಜನೆ ಇಂದು ಲೋಕಾರ್ಪಣೆಯಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿದ್ದ ಭಾರತೀಯ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನ ಸ್ಥಿತಿ ನೆಲೆಸಿರುವಾಗಲೇ ಕರ್ತಾರ್‍ಪುರ್ ಕಾರಿಡಾರ್(ರಾಜಮಾರ್ಗ) ಉದ್ಘಾಟನೆಗೊಂಡಿದೆ.

ಇದು ಉಭಯ ದೇಶಗಳ ನಡುವೆ ಬಾಂಧವ್ಯ ವೃದ್ದಿಯ ಹೊಸ ಆಶಾಭಾವನೆಯನ್ನೂ ಸೃಷ್ಟಿಸಿದೆ.  ಸಿಖ್ ಸಮುದಾಯದ ಪರಮೋಚ್ಚ ಧರ್ಮಗುರು ಗುರುನಾನಕ್ ದೇವ್ ಅವರ 550ನೇ ಜನ್ಮಜಯಂತಿ ದಿನವಾದ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ತಮ್ಮ ದೇಶಗಳಲ್ಲಿ ಈ ಯೋಜನೆಗೆ ಚಾಲನೆ ನೀಡಿದರು.

ಇಂದು ಬೆಳಗ್ಗೆ ಪ್ರಧಾನಿ ಮೋದಿ ಪಂಜಾಬ್‍ನ ಗುರುದಾಸ್‍ಪುರ್‍ನಲ್ಲಿ ಕರ್ತಾರ್‍ಪುರ್ ಕಾರಿಡಾರ್ ಯೋಜನೆಗಾಗಿ ನಿರ್ಮಿಸಿರುವ ಸಿಖ್ ಯಾತ್ರಿಕರ ತಂಗು ನಿಲ್ದಾಣವನ್ನು ಉದ್ಘಾಟಿಸಿದರು. ನಂತರ ಅವರು ಈ ರಾಜಪಥದ ಮೂಲಕ ಪಾಕಿಸ್ತಾನದ ಕರ್ತಾರ್‍ಪುರ್‍ಗೆ ಪ್ರಯಾಣ ಬೆಳೆಸಿದ ಮೊದಲ ತಂಡಕ್ಕೆ ಹಸಿರು ನಿಶಾನೆ ತೋರಿ ಸುಭ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ಭಾರತೀಯರ ಭಾವನೆಗಳನ್ನು ಅರ್ಥ ಮಾಡಿಕೊಂಡು ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸಾಕಾರಗೊಳಿಸಲು ನೆರವು ನೀಡಿದ್ದಕ್ಕೆ ಪಾಕ್ ಪ್ರಧಾನಿ ಇಮ್ರಾನ್‍ಖಾನ್‍ಗೆ ಮೋದಿ ಕೃತಜ್ಞತೆ ಸಲ್ಲಿಸಿದರು.

ಮೊದಲ ಹಂತದಲ್ಲಿ ಕರ್ತಾರ್‍ಪುರ್ ಸಾಹಿಬ್‍ಗೆ ತೆರೆಳುತ್ತಿರುವವರ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಅಕಾಲ್‍ತಕ್ತ್ ಜತೇಂದರ್ ಸಿಂಗ್ ಬಾದಲ್, ಧುರೀಣರಾದ ಸುಖಬೀರ್ ಸಿಂಗ್ ಬಾದಲ್, ಹಸ್ರಿಮತ್ ಕೌರ್ ಬಾದಲ್ ಮತ್ತು ನವಜೋತ್ ಸಿಂಗ್ ಸಿಧು ಪ್ರಮುಖರಾಗಿದ್ದಾರೆ. ಇದೇ ವೇಳೆ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ತಮ್ಮ ಭಾಗದ ಪಂಜಾಬ್ ಪ್ರಾಂತ್ಯದಲ್ಲಿರುವ ಕಾರಿಡಾರ್ ಯೋಜನೆಯನ್ನು ಲೋಕಾರ್ಪಣೆ ಮಾಡಿದರು.

Facebook Comments

Sri Raghav

Admin