ಡಿಜಿಟಲ್ ಪಾವತಿ ವ್ಯವಸ್ಥೆ e-RUPIಗೆ ನಾಳೆ ಪ್ರಧಾನಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.1- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ವಿಡಿಯೋ ಕಾನರೆನ್ಸ್ ಮೂಲಕ ನಗದುರಹಿತ ಡಿಜಿಟಲ್ ಪಾವತಿ ಸಾಧನವಾದ ಇ-ರುಪಿ(e-RUPI ) ಉಪಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಷ್ಟ್ರೀಯ ಆರೋಗ್ಯ ಪ್ರಾಕಾರದ ಸಹಯೋಗದಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‍ಪಿಸಿಐ) ಇ-ರುಪಿ(e-RUPI )ನ್ನು ಅಭಿವೃದ್ಧಿಪಡಿಸಿದೆ.

ಇ-ರುಪಿ ಉಪಕ್ರಮವು ಸರ್ಕಾರ ಮತ್ತು ಫಲಾನುಭವಿಗಳ ನಡುವೆ ನೇರ ಸಂಪರ್ಕ ಸಾಸಲು ಮತ್ತು ಸರ್ಕಾರದ ಉದ್ದೇಶಿತ ಸೇವೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ಸಹಕಾರಿಯಾಗಿದೆ.ತಾಯಿ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು, ಟಿಬಿ ನಿರ್ಮೂಲನೆ ಕಾರ್ಯಕ್ರಮಗಳು, ಔಷಧಗಳು ಮತ್ತು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ರಸಗೊಬ್ಬರ ಸಬ್ಸಿಡಿಗಳು, ಮತ್ತು ರಸಗೊಬ್ಬರ ಸಬ್ಸಿಡಿಗಳ ಅಡಿಯಲ್ಲಿ ಪೌಷ್ಟಿಕಾಂಶದ ಬೆಂಬಲವನ್ನು ಒದಗಿಸುವ ಯೋಜನೆಗಳಡಿ ಸೇವೆಗಳನ್ನು ತಲುಪಿಸಲು ಬಳಸಬಹುದಾಗಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಖಾಸಗಿ ವಲಯವೂ ಸಹ ಈ ಡಿಜಿಟಲ್ ವೋಚರ್‍ಗಳನ್ನು ತಮ್ಮ ಉದ್ಯೋಗಿಗಳ ಕಲ್ಯಾಣ ಮತ್ತು ಕಾಪೆರ್Çರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳ ಭಾಗವಾಗಿ ಬಳಕೆ ಮಾಡಿಕೊಳ್ಳಬಹುದು ಎಂದು ಅದು ವಿವರಿಸಿದೆ.

# ಇ-ರುಪಿ ಸಾಧನ:
ಇ-ರುಪಿ ಡಿಜಿಟಲ್ ಪಾವತಿಗಳಿಗೆ ನಗದುರಹಿತ ಮತ್ತು ಡಿಜಿಟಲ್ ಸಾಧನವಾಗಿದೆ. ಇದು ಕ್ಯೂಆರ್ ಕೋಡ್ ಅಥವಾ ಎಸ್‍ಎಂಎಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಆಗಿ ಕಾರ್ಯನಿರ್ವಹಿಸಲಿದ್ದು, ಇದನ್ನು ಫಲಾನುಭವಿಗಳ ಮೊಬೈಲ್ ಫೆÇೀನ್‍ಗಳಿಗೆ ತಲುಪಿಸಲಾಗುತ್ತದೆ.

ಡಿ-ಡಿಜಿಟಲ್ ರೀತಿಯಲ್ಲಿ ಫಲಾನುಭವಿಗಳು ಮತ್ತು ಸೇವಾ ಪೂರೈಕೆದಾರರೊಂದಿಗೆ ಇ-ರೂಪಿ ಸೇವೆಗಳ ಪ್ರಾಯೋಜಕರ ನಡುವೆ ಸಂಪರ್ಕ ಏರ್ಪಡಿಸಿ ವಹಿವಾಟು ಪೂರ್ಣಗೊಂಡ ನಂತರವೇ ಸೇವಾ ಪೂರೈಕೆದಾರರಿಗೆ ಪಾವತಿ ಮಾಡಲಾಗಿರುವುದನ್ನು ಇದು ಖಚಿತಪಡಿಸುತ್ತದೆ.

ಇದು ಯಾವುದೇ ಮಧ್ಯವರ್ತಿಯ ಒಳಗೊಳ್ಳದೆಯೇ ಸೇವಾ ಪೂರೈಕೆದಾರರಿಗೆ ಸಕಾಲಿಕ ಪಾವತಿಯನ್ನು ನೀಡುತ್ತದೆ.
ಇ-ರೂಪಿನ ಒಂದು-ಬಾರಿ ಪಾವತಿ ಕಾರ್ಯವಿಧಾನವು ಬಳಕೆದಾರರಿಗೆ ಕಾರ್ಡ್, ಡಿಜಿಟಲ್ ಪಾವತಿ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಪ್ರವೇಶವಿಲ್ಲದೆ ವೋಚರ್‍ನ್ನು ರಿಡೀಮ್ ಮಾಡಲು ಸೇವಾ ಪೂರೈಕೆದಾರರಲ್ಲಿ ಅನುಮತಿಸುತ್ತದೆ.

Facebook Comments

Sri Raghav

Admin