8.5 ಕೋಟಿ ರೈತರಿಗೆ 17,000 ಕೋಟಿ ರೂ. ವರ್ಗಾವಣೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.9-ಕೃಷಿ ಮೂಲ ಸೌಕರ್ಯಾಭಿವೃದ್ಧಿ ನಿಧಿ ರೈತರಿಗೆ ಒಂದು ಲಕ್ಷ ಕೋಟಿ ರೂ.ಗಳ ಹಣಕಾಸು ನೆರವಿನ ಸೌಲಭ್ಯ ಒದಗಿಸುವ ಮಹತ್ವದ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ.

ಇದೇ ವೇಳೆ ಪಿಎಂ ಕಿಸಾನ್ (ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿ) ಯೋಜನೆ ಅಡಿ ದೇಶದ 8.5 ಕೋಟಿ ಕೃಷಿಕರಿಗೆ 17,000 ಕೋಟಿ ರೂ.ಗಳ ಅರನೇ ಕಂತಿಯ ನಿಧಿಯನ್ನು ಸಹ ಮೋದಿ ಬಿಡುಗಡೆಗೊಳಿಸಿದ್ದಾರೆ.

ರಾಜಧಾನಿ ದೆಹಲಿಯಲ್ಲಿ ಇಂದು ವಿಡಿಯೋಲಿಂಕ್ ಮೂಲಕ ನಡೆದ ನಿಗಳ ಬಿಡುಗಡೆ ಕಾರ್ಯಕ್ರಮವನ್ನು ದೇಶದ ಲಕ್ಷಾಂತರ ರೈತರು ಮತ್ತು ಸಹಕಾರ ಕ್ಷೇತ್ರದ ಜನರು ಸಾಕ್ಷೀಕರಿಸಿದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್ ಅವರೂ ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ, ಒಂದು ಲಕ್ಷ ಕೋಟಿ ರೂ.ಗಳ ಕೃಷಿ ಮೂಲಸೌಕರ್ಯಾಭಿವೃದ್ದಿ ನಿಧಿ ಅಡಿ ಹಣಕಾಸು ಸೌಲಭ್ಯದ ಕೇಂದ್ರೀಯ ವಲಯ ಯೋಜನೆಗೆ ಇತ್ತೀಚೆಗೆ ಅನುಮೋದನೆ ನೀಡಿತ್ತು.

ಈ ಹಣಕಾಸು ಸೌಲಭ್ಯವು ಶೈತ್ಯಾಗಾರ, ಸಂಗ್ರಹ ಕೇಂದ್ರಗಳು ಮತ್ತು ಸಂಸ್ಕರಣ ಘಟಕಗಳಂಥ ಕೊಯ್ಲು ನಂತರದ ನಿರ್ವಹಣೆ ಮೂಲಸೌಕರ್ಯ ಮತ್ತು ಸಮುದಾಯ ಕೃಷಿ ಸ್ವತ್ತುಗಳ ಸೃಷ್ಟಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.

ಈ ಸೌಲಭ್ಯಗಳಿಂದಾಗಿ ರೈತರ ತಮ್ಮ ಬೆಳೆಗಳು ಮತ್ತು ಉತ್ಪನ್ನಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ ಅಕ ಬೆಲೆಗಳಿಗೆ ಮಾರಾಟ ಮಾಡಲು, ತ್ಯಾಜ್ಯಗಳನ್ನು ಕಡಿಮೆ ಮಾಡಲು ಹಾಗೂ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಇದರಿಂದ ಈ ಸೌಕರ್ಯಗಳು ಕೃಷಿಕರು ತಮ್ಮ ಉತ್ಪನ್ನಗಳಿಗೆ ದೊಡ್ಡ ಮೌಲ್ಯ ಪಡೆಯಲು ಸಹಕಾರಿಯಾಗುತ್ತದೆ.

ಬಹು ಹಣಕಾಸು ಸಂಸ್ಥೆಗಳ ಸಹಭಾಗಿತ್ವದೊಂದಿಗೆ ನಿ ಸೌಲಭ್ಯದ ಅಡಿ ಒಂದು ಲಕ್ಷ ಕೋಟಿ ರೂ.ಗಳನ್ನು ಮಂಜೂರು ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ವಲಯದ 11 ಬ್ಯಾಂಕುಗಳು ಕೃಷಿ ಇಲಾಖೆಯೊಂದಿಗೆ ತಿಳುವಳಿಕೆ ಒಪ್ಪಂದ ಪತ್ರ (ಎಂಒಯು)ಕ್ಕೆ ಈಗಾಗಲೇ ಸಹಿ ಹಾಕಿವೆ.

ಇಂಥ ಯೋಜನೆಗಳ ಕಾರ್ಯ ಸಾಧನೆಯನ್ನು ಹೆಚ್ಚಿಸಲು 2 ಕೋಟಿ ರೂ.ಗಳ ತನಕ ಸಾಲ ಖಾತರಿ ಮತ್ತು ಶೇ.3ರಷ್ಟು ಬಡ್ಡಿ ಆರ್ಥಿಕ ಸಹಾಯ ನೀಡಲಾಗುತ್ತದೆ. ಪಿಎಂ ಕಿಸಾನ್ (ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿ) ಯೋಜನೆಯನ್ನು 2018ರ ಡಿ.1ರಂದು ಆರಂಭಿಸಲಾಯಿತು.

ಈ ಯೋಜನೆ ಅಡಿ ದೇಶದಲ್ಲಿ 9.9 ಕೋಟಿಗೂ ಅಕ ರೈತರಿಗೆ 75,000 ಕೋಟಿ ರೂ.ಗಳ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಈಗಾಗಲೇ ಐದು ಕಂತುಗಳು ಬಿಡುಗಡೆಯಾಗಿದ್ದು, 8.5 ಕೋಟಿ ಕೃಷಿಕರಿಗೆ 17,000 ಕೋಟಿ ರೂ.ಗಳ ಅರನೇ ಕಂತಿಯ ನಿಯನ್ನು ಸಹ ಮೋದಿ ಬಿಡುಗಡೆಗೊಳಿಸಿದರು.

ದೇಶದ ಬೆನ್ನೆಲುಬಾದ ಅನ್ನದಾತ ರೈತರು ತಮ್ಮ ಕೃಷಿ ಅಗತ್ಯತೆಗಳನ್ನು ಪೂರೈಸಲು ಮತ್ತು ತಮ್ಮ ಕುಟುಂಬಗಳಿಗೆ ಆಧಾರವಾಗಿ ನಿಲ್ಲಲು ಈ ಸೌಲಭ್ಯ ನೆರವಾಗುತ್ತಿದೆ.

ಸುಮಾರು 22,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರಕ ಕೊರೊನಾ ವೈರಸ್ ಹಾವಳಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಲು ಸಹ ಈ ಯೋಜನೆ ಬಹಳಷ್ಟು ಪ್ರಯೋಜನಕಾರಿಯಾಗಿದೆ.

Facebook Comments

Sri Raghav

Admin