ವಾರಣಾಸಿಯಲ್ಲಿ ದೇವ ದೀಪಾವಳಿಗೆ ಪ್ರಧಾನಿ ನಮೋ ರಂಗು

ಈ ಸುದ್ದಿಯನ್ನು ಶೇರ್ ಮಾಡಿ

ವಾರಣಾಸಿ,ಅ.28- ಪ್ರತಿ ವರ್ಷದಂತೆ ವಾರಣಾಸಿಯಲ್ಲಿ ದೀಪಾವಳಿ ಹಬ್ಬದ 15 ದಿನಗಳ ನಂತರ ನಡೆಯುವ ದೇವತೆಗಳ ಹಬ್ಬ ದೀಪಾವಳಿ(ದೇವ್ ದೀಪಾವಳಿ) ಆಚರಣೆಯು ನಡೆಯಲಿದ್ದು, ನ.12ರಂದು ಪ್ರಧಾನಿ ನರೇಂದ್ರ ಮೋದಿ ಅಗಮನದಿಂದ ಉತ್ಸವ ಮತ್ತಷ್ಟು ರಂಗು ಪಡೆಯಲಿದೆ.

ಸ್ಥಳೀಯ ಬಿಜೆಪಿ ಕಾರ್ಯಕರ್ತರು ಪಕ್ಷದೊಂದಿಗೆ ಸಮಾಲೋಚಿಸಿ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂಬ ಮನವಿ ಹಿನ್ನೆಲೆಯಲ್ಲಿ ಪ್ರಧಾನಿ ವಾರಣಾಸಿ ಭೇಟಿಯನ್ನು ಆಯೋಜಿಸಲಾಗಿದೆ. ಅಲ್ಲದೆ ಗುರುದ್ವಾರದ ಗುರುಭಾಗ್‍ನಲ್ಲಿ ನಡೆಯಲಿರುವ ಗುರು ನಾನಕ್ ದೇವ್ ಅವರ 550ನೇ ಪ್ರಕಾಶೋತ್ಸವದಲ್ಲಿ ಪ್ರಧಾನಿಯವರು ಪಾಲ್ಗೊಳ್ಳುತ್ತಿದ್ದಾರೆ.

ಗುರುದ್ವಾರದ ಮುಖ್ಯಸ್ಥ ಗ್ರಂಥಿಕರಾದ ಸರ್ದಾರ್ ಸುಖ್ವಿಂದರ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದು, ಧಾರ್ಮಿಕ ಸಂದರ್ಭದಲ್ಲಿ ಅವರು ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು. ಕಳೆದ ವರ್ಷ ದೇವ್ ದೀಪಾವಳಿ ಉತ್ಸವದಲ್ಲಿ ಪವಿತ್ರ ನಗರದ ಎಲ್ಲಾ ಘಾಟ್‍ಗಳು ಮಣ್ಣಿನ ದೀಪಗಳು ಮತ್ತು ಬಹುವರ್ಣದ ದೀಪಗಳಿಂದ ಬೆಳಗಿದ್ದವು.

ಖ್ಯಾತ ಚಲನಚಿತ್ರ ನಟ ಅನಿಲ್ ಕಪೂರ್ ಅವರೊಂದಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin