ಲಸಿಕೆ ಪಡೆಯಲು ನೋಂದಣಿ ಅಗತ್ಯವಿಲ್ಲ : ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಮೋದಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.21- ಜಾಗತಿಕ ಮಹಾಮಾರಿ ತನ್ನ ಅಟ್ಟಹಾಸ ಮೆರೆದಿದ್ದರೂ ದೇಶದ ಜನರಲ್ಲಿ ಯೋಗ ದಿನಾಚರಣೆಯ ಉತ್ಸಾಹ ಮಾತ್ರ ಕುಂದಿಲ್ಲ. ಒತ್ತಡದಿಂದ ಶಕ್ತಿಯೆಡೆಗೆ, ನಕರಾತ್ಮಕತೆಯಿಂದ ಸಕಾರತ್ಮದೆಡೆಗೆ ಯೋಗ ಎಲ್ಲರನ್ನು ಕೊಂಡೊಯ್ದಿದ್ದು, ಸಂಕಷ್ಟದ ಸಮಯದಲ್ಲಿ ಭರವಸೆಯ ಕಿರಣವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

ಇದೇ ವೇಳೆ ಇಡೀ ವಿಶ್ವದಲ್ಲೇ ಅತಿದೊಡ್ಡ ಲಸಿಕೆ ಅಭಿಯಾನಕ್ಕೂ ಚಾಲನೆ ನೀಡಿದ ಅವರು, ಲಸಿಕೆ ಪಡೆಯಲು ನೋಂದಣಿ ಅಗತ್ಯವಿಲ್ಲ ಮತ್ತು ಲಸಿಕಾ ಕೇಂದ್ರಕ್ಕೆ ತೆರಳಿ ದಾಖಲೆ ತೋರಿಸಿ ಪಡೆಯಬಹುದು ಎಂದು ಘೋಷಿಸಿದರು.ಈಗಾಗಲೇ ದೇಶದಲ್ಲಿ ಸುಮಾರು 30 ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ. ಮೊದಲ ಡೋಸ್ ಹಾಗೂ ಎರಡನೆ ಡೋಸ್ ಪಡೆದಿರುವವರ ಸಂಖ್ಯೆ ಆರು ಕೋಟಿಗೂ ಹೆಚ್ಚಿದೆ ಎಂದು ತಿಳಿಸಿದರು.

ಈ ನಡುವೆ ಇಂದು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕುವ ದೊಡ್ಡ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸರಿಸುಮಾರು ಒಂದೇ ದಿನ 50 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಲಾಗಿದೆ.

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಎಂ-ಯೋಗ ಅಪ್ಲಿಕೇಷನ್ ಪರಿಚಯಿಸಿ ಮಾತನಾಡಿದ ಅವರು, ಡಬ್ಲ್ಯುಎಚ್‍ಒ ಸಹಯೋಗದೊಂದಿಗೆ ಭಾರತ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಈಗ ಎಂ-ಯೋಗ ಅಪ್ಲಿಕೇಷನ್ ಇರಲಿದ್ದು, ಇದು ವಿಶ್ವದಾದ್ಯಂತ ಜನರಿಗೆ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿ ವೀಡಿಯೊಗಳನ್ನು ಹೊಂದಿರುತ್ತದೆ. ಇದು ನಮ್ಮ ಒಂದು ಜಗತ್ತು, ಒಂದು ಆರೋಗ್ಯ ಧ್ಯೇಯವಾಕ್ಯದಲ್ಲಿ ನಮಗೆ ಸಹಾಯ ಮಾಡುತ್ತದೆ ಎಂದರು.

ಕಳೆದ ಎರಡು ವರ್ಷಗಳಿಂದ, ಭಾರತ ಸೇರಿದಂತೆ ಪ್ರಪಂಚದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿಲ್ಲ ಆದರೆ ಯೋಗದ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ ಎಂದು ಅಭಿಪ್ರಾಯಪಟ್ಟರು.
ಯೋಗವು ಒತ್ತಡದಿಂದ ಶಕ್ತಿಯನ್ನು ಮತ್ತು ನಕಾರಾತ್ಮಕತೆಯಿಂದ ಸೃಜನಶೀಲತೆಯ ಹಾದಿ ತೋರಿದೆ.

ಭಾರತೀಯ ಯೋಗದಲ್ಲಿ ಅನಂತ ಪರಿಹಾರಗಳನ್ನು ಕಂಡುಕೊಂಡಿದ್ದೇವೆ. ಭಾರತ ಬ್ರಹ್ಮಾಂಡದ ಅತಿದೊಡ್ಡ ಶಕ್ತಿಯ ಮೂಲವಾಗಿದೆ ಎಂದು ಬಣ್ಣಿಸಿದರು.

ಇಂದು ವೈದ್ಯಕೀಯ ವಿಜ್ಞಾ ನವು ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಗುಣಪಡಿಸುವ ಪ್ರಕ್ರಿಯೆಗೆ ಒತ್ತು ನೀಡುತ್ತದೆ. ಗುಣಪಡಿಸುವ ಪ್ರಕ್ರಿಯೆಯಲ್ಲಿ ಯೋಗ ನೆರವಾಗುತ್ತಿದೆ. ಯೋಗವು ನಮಗೆ ಸಂತೋಷದಾಯಕ ಜೀವನ ವಿಧಾನವನ್ನು ನೀಡುತ್ತದೆ. ಜನಸಾಮಾನ್ಯರ ಆರೋಗ್ಯ ರಕ್ಷಣೆಯಲ್ಲಿ ಉತ್ತೇಜಕ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.

ವಿಶ್ವದ ಹೆಚ್ಚಿನ ದೇಶಗಳಿಗೆ, ಯೋಗ ದಿನವು ಅವರ ಹಳೆಯ ಸಾಂಸ್ಕೃತಿಕ ಹಬ್ಬವಲ್ಲ. ಸಂಕಷ್ಟದ ಸಮಯದಲ್ಲಿ ಜನ ಮರೆತುಬಿಡುವುದು ಸಹಜ. ತುಂಬಾ ತೊಂದರೆಯಲ್ಲಿರುವ ಜನರು ಅದನ್ನು ಮರೆತುಬಿಡುವುದು ಸಹಜ. ಆದರೆ ಇದಕ್ಕೆ ವಿರುದ್ಧವಾಗಿ, ಯೋಗದ ಬಗ್ಗೆ ಜನರು ಹೆಚ್ಚು ಉತ್ಸಾಹ ತೋರುತ್ತಿದ್ದಾರೆ ಭಾರತೀಯ ಯೋಗ ವಿಶ್ವ ಮಟ್ಟದಲ್ಲೇ ನೆರವಾಗುತ್ತಿದೆ. ಆ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದರು.

Facebook Comments

Sri Raghav

Admin