ಲಸಿಕಾ ತಯಾರಿಕಾ ಸಂಸ್ಥೆಗಳೊಂದಿಗೆ ಪ್ರಧಾನಿ ಮೋದಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಏ.20-ಕೋವಿಡ್ ಲಸಿಕಾ ತಯಾರಕ ರೊಂದಿಗೆ ಪ್ರಧಾನಿ ನರೇಂದ್ರಮೋದಿ ಅವರು ಇಂದು ಸಂಜೆ ವಿಡಿಯೋ ಕಾನರೆನ್ಸ್ ಮೂಲಕ ವಚ್ರ್ಯುಲ್ ಸಭೆ ನಡೆಸಲಿದ್ದಾರೆ. ಸಂಜೆ 6 ಗಂಟೆಗೆ ನಡೆಯುವ ಸಭೆಯಲ್ಲಿ ಭಾರತ ಮತ್ತು ವಿದೇಶಗಳ ಲಸಿಕಾ ತಯಾರಕರ ಉನ್ನತ ಮಟ್ಟದ ಪ್ರತಿನಿಗಳು ಪಾಲ್ಗೊಳ್ಳಲಿದ್ದಾರೆ.

ನಿನ್ನೆ ಪ್ರಧಾನಿಗಳು ಉನ್ನತಪಟ್ಟದ ತಜ್ಞವೈದ್ಯರು ಮತ್ತು ಔಷೀಯ ಉದ್ಯಮದ ಪ್ರತಿನಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿ ಚರ್ಚೆ ನಡೆಸಿದ್ದರು. ಈ ವೇಳೆ ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ನಿರ್ಧಾರ ಕೈಗೊಳ್ಳಲಾಗಿತ್ತು.

ಎಲ್ಲಾ ವಯಸ್ಕರು ಕೋವಿಡ್ ಲಸಿಕೆ ಪಡೆಯಲು ಅರ್ಹರಾಗುತ್ತಾರೆ ಮತ್ತು ಡೋಸೇಜ್‍ಗಳನ್ನು ಮಾರುಕಟ್ಟೆಯ ಮೂಲಕ ಮಾರಾಟ ಮಾಡಬಹುದು ಎಂದು ಕೇಂದ್ರ ಪ್ರಕಟಿಸಿದ್ದು,ದೇಶಾದ್ಯಂತ 126 ದಶಲಕ್ಷಕ್ಕೂ ಹೆಚ್ಚು ಕರೋನ ಲಸಿಕೆಯನ್ನು ಇಲ್ಲಿಯವರೆಗೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

Facebook Comments