ಬಡವರಿಗೆ ನೆರವು ನೀಡುವಂತೆ ಪ್ರಧಾನಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.26-ಕೊರೊನಾ ಹೆಮ್ಮಾರಿಯಿಂದ ನಲುಗುತ್ತಿರುವ ದೇಶವಾಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಜನತೆಗೆ ಕೆಲವು ಉತ್ತಮ ಸಲಹೆಗಳನ್ನು ನೀಡಿದ್ದಾರೆ.ಕೊರೊನಾ ಪೀಡಿತರು ಮತ್ತು ಈ ದುಸ್ಥಿತಿಯಿಂದ ಕಂಗೆಟ್ಟಿರುವ ಬಡ ಕುಟುಂಬಗಲಿಗೆ ನೆರವು ನೀಡಿ ಅವರಿಗೆ ನಿಮ್ಮಕೈಲಾದಷ್ಟು ಹಣ, ಅನ್ನಾಹಾರ ಮತ್ತು ಅಗತ್ಯ ವಸ್ತುಗಳನ್ನು ನೀಡಿ ಸಹಾಯ ಹಸ್ತ ಚಾಚಿ ಎಂದು ಕೋರಿದ್ದಾರೆ.

ರಾಜಧಾನಿ ದೆಹಲಿಯಿಂಧತಮ್ಮ ಲೋಕಸಭಾಕ್ಷೇತ್ರವಾದ ವಾರಣಾಸಿ ಜನತೆಗೆ ವಿಡಿಯೋಕಾನ್ಫೆರೆನ್ಸ್ ಸಂದೇಶ ನೀಡಿರುವ ಅವರು ಕೊರೊನಾ ಸ್ಥಿತಿಯನ್ನು ಮಹಾಭಾರದ ಕುರುಕ್ಷೇತ್ರ ಧರ್ಮಯುದ್ಧಕ್ಕೆ ಹೋಲಿಸಿದರು.ಮಹಾಭಾರತದ ಕುರುಕ್ಷೇತ್ರ ರಣರಂಗದಲ್ಲಿ ಕೌರವರನ್ನು ಸಂಹರಿಸಲು ಪಾಂಡವರಿಗೆ 18 ದಿನಗಳು ಬೇಕಾಯಿತು. ಅದೇ ರೀತಿಕೊರೊನಾ ಹೆಮ್ಮಾರಿ ವಿರುದ್ಧಗೆಲ್ಲಲ್ಲು 21 ದಿನಗಳು ಬೇಕು. ಈಗಾಗಲೇ ಯುದ್ಧಆರಂಭವಾಗಿದೆಎಂದು ಹೇಳಿದರು.

ಬಡವರಿಗೆ ಸಹಾಯ ಮಾಡಲುಇ ದು ನಿಮಗೆ ಸೂಕ್ತ ಸಮಯ. ಅವರಿಗೆ ನೀವು ಸಹಾಯ ಹಸ್ತ ಚಾಚಿಎಂದು ಪ್ರಧಾನಿ ಮನವಿ ಮಾಡಿದರು. ಕೊರೊನೋ ವಿರುದ್ಧದ ಸಮರದಲ್ಲಿ ಹೋರಾಡುತ್ತಿರುವ ಇಡೀ ವೈದ್ಯಲೋಕಕ್ಕೆಅವರುಕೃತಜ್ಞತೆ ಸಲ್ಲಿಸಿದರು. ಅವರತ್ಯಾಗ ಮತ್ತು ಸೇವೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು..

ವಿಶ್ವಾದ್ಯಂತಈವರೆಗೆಒಂದು ಲಕ್ಷಕ್ಕೂ ಹೆಚ್ಚು ಸೋಂಕು ಪೀಡಿತರುಗುಣಮುಖರಾಗುತ್ತಿದ್ಧಾರೆ. ಇದುಆಶಾಭಾವನೆಯಾಗಿದೆ. ಇದನ್ನು ನೀವೆಲ್ಲರೂ ನೆನೆಪಿನಲ್ಲಿ ಇಟ್ಟುಕೊಳ್ಳಬೇಕು. ಮತ್ತೊಂದು ಸಮಾಧಾನಕರ ಸಂಗತಿಎಂದರೆ ಇಟಲಿ ಸೇರಿದಂತೆ ಕೆಲವು ದೇಶಗಳಲ್ಲಿ ಸೋಂಕು ಪೀಡಿತರಾಗಿದ್ದ ಭಾರತೀಯರು ಚೇತರಿಸಿಕೊಂಡು ಗುಣಮುಖರಾಗುತ್ತಿದ್ದಾರೆಎಂದುಅವರು ಹೇಳಿದರು.

Facebook Comments

Sri Raghav

Admin