ವಾರಣಾಸಿಯಲ್ಲಿ ನಮೋ ನಾಮಪತ್ರ, ರಂಗೇರಿದ ರಣಕಣ

ಈ ಸುದ್ದಿಯನ್ನು ಶೇರ್ ಮಾಡಿ

ವಾರಣಾಸಿ,ಏ.25- ಇಡೀ ದೇಶದ ಗಮನ ಸೆಳೆಯುತ್ತಿರುವ ಉತ್ತರಪ್ರದೇಶದ ಪ್ರತಿಷ್ಠಿತ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಇಂದು ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಹೈವೋಲ್ಟೇಜ್ ಮಹಾಚುನಾವಣೆ ಮತ್ತಷ್ಟು ರಂಗೇರಿದೆ.

ನಿನ್ನೆ ಅಪಾರ ಜನಸಾಗರದೊಂದಿಗೆ ವಾರಣಾಸಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿಯ ಶಕ್ತಿ ಸಾಮಥ್ರ್ಯ ಪ್ರದರ್ಶಿಸಿದ ಮೋದಿ ಇಂದು ಕೂಡ ಬಿಜೆಪಿಯ ಪ್ರಮುಖ ಮುಖಂಡರು, ಮಿತ್ರ ಪಕ್ಷಗಳ ನಾಯಕರು ಹಾಗೂ ಅಸಂಖ್ಯಾತ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ಅವರು ವಾರಣಾಸಿಯ ಪ್ರಸಿದ್ಧ ದೇವಾಲಯ ಕಾಲಭೈರೇಶ್ವರ ದೇವಸ್ಥಾನಕ್ಕೆ ಆಗಮಿಸಿ ಮಹಾಕಾಲನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮೋದಿ ನಾಮಪತ್ರ ಸಲ್ಲಿಸಿ ಹೊರಬರುತ್ತಿದ್ದಂತೆ ಕಾರ್ಯಕರ್ತರ ಹರ್ ಹರ್ ಮೋದಿ ಘೋಷಣೆಗಳು ಮಾರ್ದನಿಸಿದವು. ಕಾರ್ಯಕರ್ತರತ್ತ ವಿಜಯದ ಸಂಕೇತ ತೋರಿಸಿ ಮೋದಿ ಮುಗುಳ್ನಕ್ಕರು.

ಮೋದಿ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಅಮಿತೋತ್ಸಾಹ ಇಮ್ಮಡಿಗೊಂಡಿದ್ದು, ಕಾರ್ಯಕರ್ತರ ಹರ್ಷೋದ್ಘಾರ, ಮಹಿಳೆಯರ ನೃತ್ಯ, ಸಾಂಪ್ರದಾಯಿಕ ಕಲಾ ತಂಡಗಳ ವಾದ್ಯಮೇಳ ಮೇಳೈಸಿತು. ವಾರಣಾಸಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ವಾರಣಾಸಿ ಕ್ಷೇತ್ರದಿಂದ ಕಾಂಗ್ರೆಸ್‍ನ ಸ್ಟಾರ್ ಪ್ರಚಾರಕಿ ಮತ್ತು ಉತ್ತರಪ್ರದೇಶ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ ವಾದ್ರಾ ಸ್ಪರ್ಧೆ ಕುರಿತ ಊಹಾಫೋಹಕ್ಕೆ ನಿನ್ನೆ ತೆರೆಬಿದ್ದಿದ್ದು, ಪ್ರಧಾನಿಗೆ ಕಾಂಗ್ರೆಸ್‍ನ ಅಜಯ್ ರಾಯ್ ಪ್ರತಿಸ್ಪರ್ಧಿಯಾಗಿದ್ದಾರೆ.

ಐದು ಬಾರಿ ವಾರಣಾಸಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಅಜಯ್ ರಾಯ್ ಅತ್ಯಂತ ಪ್ರಬಲ ಅಭ್ಯರ್ಥಿಯಾದ ಪ್ರಧಾನಿ ವಿರುದ್ಧ ಮೋದಿ ಸ್ಪರ್ಧಿಸಿರುವುದು ಕುತೂಹಲ ಕೆರಳಿಸಿದೆಯಾದರೂ ನಮೋ ವರ್ಚಸ್ಸಿನ ಮುಂದೆ ರಾಯ್ ಪ್ರಾಬಲ್ಯ ಗೌಣ ಎಂಬು ಮಾತುಗಳು ಕೇಳಿಬರುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ತಮ್ಮ ಸ್ವಕ್ಷೇತ್ರ ಪ್ರತಿಷ್ಠಿತ ವಾರಣಾಸಿ ಲೋಕಸಭಾ ಕ್ಷೇತ್ರದಿಂದ 2ನೇ ಬಾರಿ ಮರು ಆಯ್ಕೆ ಬಯಸಿ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಮೆಗಾ ರೋಡ್ ಶೋ ನಡೆಸಿ ತಮ್ಮ ಶಕ್ತಿಪ್ರದರ್ಶನ ನಡೆಸಿದರು.

ಈ ಮೆಗಾ ರೋಡ್ ಶೋನಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಅಗ್ರ ಮುಖಂಡರುಗಳು, ಅಸಂಖ್ಯಾತ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.
ವಾರಣಾಸಿಯ 7 ಕಿ.ಮೀ ಉದ್ದಕ್ಕೂ ಬಿಜೆಪಿ ಧ್ವಜಗಳು ರಾರಾಜಾಜಿಸುತ್ತಾ ಮೋದಿ ಪರ ಜೈಕಾರಗಳು ಮಾದರ್Àನಿಸಿದವು. ದೇವಾಲಯಗಳ ನಗರಿ ವಾರಣಾಸಿ ಅಕ್ಷರಶಃ ಕೇಸರಿಮಯವಾಗಿತ್ತು.

ಬನಾರಸ್ ಹಿಂದು ವಿಶ್ವವಿದ್ಯಾನಿಲಯದಿಂದ ಮೋದಿ ಅವರ ರ್ಯಾಲಿ ಆರಂಭಗೊಂಡಿತು. ಇದಕ್ಕೂ ಮುನ್ನ ಮೋದಿ ಭಾರತರತ್ನ ಪಂಡಿತ್ ಮೋಹನ್ ಮಾಳಿವೀಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರ್ಯಾಲಿ ಆರಂಭಿಸಿದ್ದರು.

ಶಿರೋಮಣಿ ಅಕಾಲಿ ದಳ (ಎಸ್‍ಎಡಿ) ನ ಪ್ರಕಾಶ್ ಸಿಂಗ್ ಬಾದಲ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಬಿಜೆಪಿ ನೇತೃತ್ವದ ಎಎನ್‍ಡಿಯ ಇತರ ಘಟಕಗಳ ನಾಯಕರು, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕರೆ ಮೊದಲಾದವರು ರೋಡ್ ಶೋನಲ್ಲಿ ಮೋದಿಗೆ ಸಾಥ್ ನೀಡಿದ್ದರು.

ಹಿರಿಯ ಬಿಜೆಪಿ ಮುಖಂಡರು ಮತ್ತು ಮೋದಿ ಅವರ ಸಂಪುಟ ಸಹೋದ್ಯೋಗಿಗಳು ಬಿಜೆಪಿ ನೇತೃತ್ವದ ರಾಜ್ಯಗಳ ಮುಖ್ಯಮಂತ್ರಿಗಳು ಜೊತೆಯಲ್ಲೂ ಸಹ ಪಾಲ್ಗೊಂಡಿದ್ದರು.

ಸಂಜೆ ದಶಾಶ್ವಮೇಧ ಘಾಟ್‍ನಲ್ಲಿ ಗಂಗಾರತಿ ಮಾಡುವ ಮೂಲಕ ರೋಡ್ ಶೋಗೆ ಮುಕ್ತಾಯಗೊಂಡಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ