ಪುರಿ ಕಡಲ ತೀರದ ಮರಳಿನಲ್ಲಿ ಅರಳಿದ ಮೋದಿ ಚಿತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಒಡಿಶಾ, ಸೆ. 17- ದೇಶ ಕಂಡ ಸಮರ್ಥ ಪ್ರಧಾನಿ ನರೇಂದ್ರ ಮೋದಿ ಅವರ 71 ನೆ ಹುಟ್ಟುಹಬ್ಬಕ್ಕಾಗಿ ಮರಳು ಪ್ರತಿಭೆ ಸುದರ್ಶನ್ ಪಟ್ನಾಯಕ್ ಅವರು ಪುರಿ ಕಡಲ ತೀರದಲ್ಲಿ ಮೋದಿ ಅವರ ಮರಳಿನ ಕಲಾಕೃತಿ ಬಿಡಿಸುವ ಮೂಲಕ ಶುಭಾಶಯ ಕೋರಿದ್ದಾರೆ.

ಮೋದಿ ಅವರ ಜನ್ಮ ದಿನಕ್ಕೆ ವಿಶಿಷ್ಟ ರೀತಿಯಲ್ಲಿ ಶುಭಾಶಯ ಕೋರುವ ಸಲುವಾಗಿ ಪುರಿ ಕಡಲ ತೀರದಲ್ಲಿ ಮರಳು ಹಾಗೂ 2035 ಕಪ್ಪೆ ಚಿಪ್ಪುಗಳನ್ನು ಬಳಸಿ ಪ್ರಧಾನಿಯ ಸುಂದರವಾದ ಕಲಾಕೃತಿ ಬಿಡಿಸಿದ್ದೇನೆ ಎಂದು ಪಟ್ನಾಯಕ್ ಟ್ವಿಟ್ ಮಾಡಿದ್ದಾರೆ.

ಸುದರ್ಶನ್ ಪಟ್ನಾಯಕ್ ಅವರು ಮಹಾಗಣಪತಿ, ಶಿವ, ದುರ್ಗೆ, ಮಹಾತ್ಮಗಾಂಧಿ, ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್‍ಕಲಾಂ ಸೇರಿದಂತೆ ಹಲವರ ಕಲಾಕೃತಿಯನ್ನು ಮರಳಿನಲ್ಲಿ ಚಿತ್ರಿಸಿರುವುದಲ್ಲದೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು, ದೇಶದ ಬಗ್ಗೆ ಹೆಮ್ಮೆ ಮೂಡಿಸಲು, ಪರಿಸರ ಕುರಿತು ಒಲಿವು, ತಂಬಾಕಿನ ಬಗ್ಗೆ ಆಗುವ ದುಷ್ಪರಿಣಾಮಗಳ ಬಗ್ಗೆ
ಅವರು ಮರಳಿನಲ್ಲಿ ಕಲಾಕೃತಿ ಬಿಡಿಸುವ ಮೂಲಕ ಜಾಗೃತಿ ಮೂಡಿಸಿದ್ದರು.

Facebook Comments