ಪ್ರಧಾನಿ ಮೋದಿ 70ನೇ ಜನ್ಮದಿನ : ವಿಶ್ವದ ಗಣ್ಯಾತಿಗಣ್ಯರ ಶುಭಾಶಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.17- ಲೋಕಖ್ಯಾತಿ ಗಳಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 70ನೇ ಜನ್ಮದಿನ ಪ್ರಯುಕ್ತ ವಿಶ್ವದ ನಾಯಕರು ಮತ್ತುಗಣ್ಯಾತಿಗಣ್ಯರು ಶುಭಕೋರಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇಂಗ್ಲೆಂಡ್ ಪ್ರಧಾನಿ ಬೋರಿಸ್‍ಜಾನ್ಸನ್, ನೇಪಾಳ ಪ್ರಧಾನಮಂತ್ರಿ ಕೆ.ಪಿ.ಶರ್ಮ ಓಲಿ, ಜಪಾನ್ ನಾಯಕ ಶಿಂಜೋ ಅಬೆ, ಇಸ್ರೇಲ್‍ನ ಬೆಂಜಮಿನ್ ನೆಥನ್ಯಾಹು ಸೇರಿದಂತೆ ವಿವಿಧ ದೇಶಗಳ ಮುಖಂಡರು, ಅಧ್ಯಕ್ಷರು ಮತ್ತು ಪ್ರಧಾನಮಂತ್ರಿಗಳು ನರೇಂದ್ರ ಮೋದಿ ಅವರಿಗೆ ಹುಟ್ಟು ಹಬ್ಬದ ಶುಭಕೋರಿದ್ದಾರೆ.

ದೇಶಗಳ ನಡುವೆ ಉತ್ತಮ ಸಂಬಂಧ ಸುಧಾರಣೆಯನ್ನು ಮೋದಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವದಲ್ಲಿ ಭಾರತವು ಮತ್ತಷ್ಟು ಪ್ರಗತಿ ಸಾಧಿಸಲಿದೆಎಂದು ವಿದೇಶಿ ಗಣ್ಯರು ಹೇಳಿದ್ದಾರೆ.

ರಾಷ್ಟ್ರಪತಿ ಶುಭ ಹಾರೈಕೆ : ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಹುಟ್ಟುಹಬ್ಬದ ಪ್ರಯುಕ್ತ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪ ರಾಷ್ಟ್ರಪತಿ ಡಾ.ಎಂ.ವೆಂಕಯ್ಯ ನಾಯ್ಡು, ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ.ದೇವೇಗೌಡರು, ಡಾ.ಮನಮೋಹನ್ ಸಿಂಗ್, ಕೇಂದ್ರ ಸಚಿವರು, ಲೋಕಸಭಾ ಅಧ್ಯಕ್ಷ ಅಧೀರ್‍ರಂಜನ್ ಚೌಧರಿ, ರಾಜ್ಯಸಭೆ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್,

ಕಾಂಗ್ರೆಸ್ ಮುಖಂಡರಾದ ಸೋನಿಯಾಗಾಂಧಿ, ರಾಹುಲ್‍ಗಾಂಧಿ, ಗುಲಾಂ ನಬಿ ಅಜಾದ್, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಅನೇಕ ರಾಜಕೀಯ ಪಕ್ಷಗಳು ಮುಖಂಡರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮೋದಿ ಅವರಿಗೆಜನ್ಮದಿನ ಶುಭಕೋರಿದ್ದಾರೆ.

ಭಾರತದ ಜೀವನ ಮೌಲ್ಯಗಳು ಮತ್ತು ಪ್ರಜಾಸತ್ತಾತ್ಮಕ ಸಾಂಪ್ರದಾಯಗಳನ್ನು ಹಿತಾಸಕ್ತಿಗೆ ಬದ್ಧವಾಗಿರುವ ಮೋದಿ ಅವರು ಅತ್ಯುತ್ತಮ ನಾಯಕತ್ವದಲ್ಲಿ ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ರಾಷ್ಟ್ರಪತಿ ಬಣ್ಣಿಸಿದ್ದಾರೆ.

Facebook Comments