ಸೈಕ್ಲೋನ್ ಪೀಡಿತ ಪ್ರದೇಶಗಳಲ್ಲಿ ಪ್ರಧಾನಿ ವೈಮಾನಿಕ ಸಮೀಕ್ಷೆ, 90ಕ್ಕೂ ಹೆಚ್ಚು ಬಲಿ ಪಡೆದ ಅಂಫನ್

ಈ ಸುದ್ದಿಯನ್ನು ಶೇರ್ ಮಾಡಿ

ಕೊಲ್ಕತಾ/ಭುವನೇಶ್ವರ, ಮೇ 22- ಬಂಗಾಳಕೊಲ್ಲಿ ಮೇಲೆ ಅಪ್ಪಳಿಸಿದ ಅಂಫನ್ ಚಂಡಮಾರುತದಿಂದ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ಕರಾವಳಿ ಪ್ರದೇಶಗಳು ತತ್ತರಿಸಿದ್ದು, 90ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

ಸೂಪರ್ ಸೈಕ್ಲೋನ್ ರೌದ್ರಾವತಾರದಿಂದ ಲಕ್ಷಾಂತರ ಜನರ ಸಂತ್ರಸ್ತರಾಗಿದ್ದು, ವ್ಯಾಪಕ ಹಾನಿ ಸಂಭವಿಸಿದೆ.ಎರಡೂ ರಾಜ್ಯಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಿಲ್ಲರ್‍ಕೊರೊನಾ ದಾಳಿಯಿಂದ ಕಂಗೆಟ್ಟಿರುವ ಎರಡೂ ರಾಜ್ಯಗಳಲ್ಲಿ ಅಂಪನ್ ಚಂಡಮಾರುತ ಆರ್ಭಟಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ಮಧ್ಯೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರುಎರಡೂ ರಾಜ್ಯಗಳಲ್ಲಿ ಇಂದು ವೈಮಾನಿಕ ಸಮೀಕ್ಷೆಗಳನ್ನು ನಡೆಸಿ ಪಕೃತಿ ವಿಕೋಪದ ವಾಸ್ತವ ಸ್ಥಿತಿಯನ್ನು ಅವಲೋಕಿಸಿದರು.

ಬಂಗಾಳಕೊಲ್ಲಿ ತೀರ ಪ್ರದೇಶಗಳ ಮೇಲೆ ಗಂಟೆಗೆ 190 ಕಿ.ಮೀ. ವೇಗದಲ್ಲಿ ಬೀಸಿದ ಪ್ರಬಲ ಬಿರುಗಾಳಿಯ ರೌದ್ರಾವತಾರಕ್ಕೆ ಪಶ್ಚಿಮ ಬಂಗಾಳದಲ್ಲಿ 80ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಒಡಿಶಾದಲ್ಲಿ 10ಕ್ಕೂ ಅದಿಕ ಸಾವು ಸಂಭವಿಸಿದೆ. ಎರಡೂ ರಾಜ್ಯಗಳಲ್ಲಿ ಒಂದು ಕೋಟಿಗೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ಒಂದೂವರೆ ಲಕ್ಷ ಕೋಟಿ ರೂ.ಗಳಿಗೆ ಅಧಿಕ ನಷ್ಟ ಸಂಭವಿಸಿದೆ.

ಸೂಪರ್‍ಸೈಕ್ಲೋಆರ್ಭಟಕ್ಕೆ ಸಹಸ್ರಾರು ಮನೆಗಳಿಗೆ ಹಾನಿಯಾಗಿದ್ದು, ಅನೇಕ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಎರಡೂ ರಾಜ್ಯಗಳಲ್ಲೂ 90ಕ್ಕೂ ಹೆಚ್ಚು ಮಂದಿಯನ್ನುಅಂಫನ್ ಬಲಿತೆಗೆದು ಕೊಂಡಿದ್ದು, ಅನೇಕರು ಗಾಯಗೊಂಡಿದ್ದಾರೆ. ಕೆಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಪಶ್ಚಿಮ ಬಂಗಾಳದಲ್ಲಿ ಶತಮಾನದಲ್ಲೇಅತ್ಯಂತ ಭೀಕರಚಂಡ ಮಾರುತ ಇದಾಗಿದೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಏರುಗತಿಯಲ್ಲಿ ಮುಂದುವರಿದಿರುವಾಗಲೇ ಬಂದೆರಗಿರುವ ಪ್ರಕೃತಿ ವಿಕೋಪದಿಂದ ಜನ ಮತ್ತಷ್ಟು ಕಂಗಲಾಗಿದ್ದಾರೆ.

ಉಭಯ ರಾಜ್ಯಗಳಲ್ಲಿ ಭಾರೀ ಬಿರುಗಾಳಿಯಿಂದ ಕೂಡಿದ ಧಾರಾಕಾರ ಮಳೆಯಿಂದ ಕರಾವಳಿ ತೀರದ ನಗರಗಳು ಮತ್ತು ಇತರ ಪಟ್ಟಣಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ವ್ಯಾಪಕ ಹಾನಿ ಸಂಭವಿಸಿದೆ.

ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತಾ, ಹೂಗ್ಲಿ, ಹೌರಾ, ನಾರ್ತ್ 24 ಪರಗಣ ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಮತ್ತು ಸಾವು-ನೋವು ವರದಿಯಾಗಿವೆ. ಈ ನಗರಗಳ ಜನವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ. ಧಾರಾಕಾರ ಮಳೆಯಿಂದಾಗಿ ಕೊಲ್ಕತಾದಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಅನೇಕ ಸ್ಥಳಗಳಿಗೆ ನೀರು ನುಗ್ಗಿದ್ದು, ಜಲಾವೃತ ಸ್ಥಿತಿಯಲ್ಲಿಯೇ ಇದೆ.

# ಪ್ರಧಾನಿ ವೈಮಾನಿಕ ಸಮೀಕ್ಷೆ:
ದೆಹಲಿಯಿಂದ ಇಂದು ಬೆಳಗ್ಗೆ ರಾಜಧಾನಿ ದೆಹಲಿಯಿಂದ ಪಶ್ಚಿಮ ಬಂಗಾಳಕ್ಕೆ ತೆರಳಿ ವೈಮಾನಿಕ ಸಮೀಕ್ಷೆ ನಡೆಸಿದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಜೊತೆ ಇದ್ದರು.

ಅಂಪನ್ ಚಂಡಮಾರುತದಿಂದ ವ್ಯಾಪಕ ಹಾನಿಗೀಡಾದ ಪ್ರದೇಶಗಳ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಿದ ಪ್ರಧಾನಿ ನಂತರ ಮಮತಾ ಬ್ಯಾನರ್ಜಿ ಮತ್ತು ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪಕೃತಿ ವಿಕೋಪ ನಿಭಾಯಿಸಲು ಕೇಂದ್ರದಿಂದ ರಾಜ್ಯಕ್ಕೆ ಅಗತ್ಯವಾದ ಎಲ್ಲ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು.

ನಂತರ ಅವರು ಪಶ್ಚಿಮ ಬಂಗಾಳದಿಂದ ಸೂಪರ್ ಸೈಕ್ಲೋನ್ ಪೀಡಿತ ಒಡಿಶಾ ರಾಜ್ಯಗೆ ತೆರಳಿದರು. ಮುಖ್ಯಮಂತ್ರಿ ನವೀನ್ ಪಟ್ನಾಯಕ್‍ಅವರೊಂದಿಗೆ ವೈಮಾನಿಕ ಸಮೀಕ್ಷೆ ನಂತರ ಸಭೈಯಲ್ಲಿ ಭಾಗವಹಿಸಿ ಪರಿಸ್ಥಿತಿ ನಿಭಾಯಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸುವರು

# ಯುದ್ಧೋಪಾದಿ ರಕ್ಷಣಾ ಕಾರ್ಯಾಚರಣೆ:
ಅಂಫನ್‍ಚಂಡಮಾರುತಮೊನ್ನೆ ಮಧ್ಯಾಹ್ನ 2.30ಕ್ಕೆ ಪಶ್ಚಿಮ ಬಂಗಾಳದ ದಿಫಾ ಮತ್ತು ಬಾಂಗ್ಲಾದೇಶದ ಹಟಿಯಾ ದ್ವೀಪಗಳ ನಡುವೆ ಅಪ್ಪಳಿಸಿ ಅಲ್ಲೋಲಕಲ್ಲೋಲ ಸೃಷ್ಟಿಸಿತು.

ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‍ಡಿಆರ್‍ಎಫ್)ಯತಲಾ 20 ತಂಡಗಳು ರಕ್ಷಣಾ ಮತ್ತು ಪರಿಹಾರಕಾರ್ಯಾಚರಣೆಯಲ್ಲಿತೊಡಗಿವೆ.ಇಂದು ಮತ್ತೆ ನಾಲ್ಕು ಹೆಚ್ಚುವರಿ ತುಕಡಿಗಳನ್ನು ಎರಡೂ ರಾಜ್ಯಗಳಿಗೆ ರವಾನಿಸಲಾಗಿದೆ.

ಎರಡು ದಶಕಗಳಲ್ಲಿ ಬಂಗಾಳಕೊಲ್ಲಿ ಮೇಲೆ ಅಪ್ಪಳಿಸಿರುವ ಎರಡನೇ ವಿನಾಶಕಾರಿ ಸೂಪರ್ ಸೈಕ್ಲೋನ್ ಇದಾಗಿದೆ. 1999ರಲ್ಲಿ ಒಡಿಶಾ ಮೇಲೆ ಬಂದೆರಗಿದ ವಿನಾಶಕಾರಿ ಚಂಡಮಾರುತದಿಂದ 10,000ಕ್ಕೂ ಹೆಚ್ಚು ಮಂದಿ ಬಲಿಯಾಗಿ ಲಕ್ಷಾಂತರಜನರು ಸಂತ್ರಸ್ಥರಾಗಿದ್ದರು. ಪಶ್ಚಿಮ ಬಂಗಾಳದಲ್ಲಿ 100 ವರ್ಷಗಳಲ್ಲಿ ಕಂಡು ಕೇಳರಿಯದ ಬೀಕರತೂಫಾನ್‍ಇದಾಗಿದೆ.

Facebook Comments

Sri Raghav

Admin