ಪ್ರಧಾನಿ ನರೇದ್ರ ಮೋದಿ ಖ್ಯಾತಿಗೆ ಮತ್ತೊಂದು ಗರಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.21 (ಪಿಟಿಐ) -ದಕ್ಷ ಆಡಳಿತ ಮತ್ತು ಜನಪರ ಮಹತ್ವದ ಯೋಜನೆಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಗಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೀರ್ತಿಯ ಮುಕಟಕ್ಕೆ ಈಗ ಮತ್ತೊಂದು ಹೆಗ್ಗಳಿಕೆಯ ಗರಿ ಸೇರ್ಪಡೆಯಾಗಿದೆ.

ಪ್ರಸಕ್ತ ಸಾಲಿನ ಅಂದರೆ 2019ರಲ್ಲಿ ಬಹು ಪ್ರಶಂಸನೀಯ ಟಾಪ್-10 ಗಣ್ಯ ವ್ಯಕ್ತಿಗಳಲ್ಲಿ ಪ್ರಧಾನಿ ಮೋದಿ ಅವರಿಗೆ ಸ್ಥಾನ ಲಭಿಸಿದೆ. ಈ ಹೆಗ್ಗಳಿಕೆಗೆ ಪಾತ್ರವಾಗಿರುವ ಏಕ ಮಾತ್ರ ಭಾರತೀಯ ಎಂಬುದು ಮತ್ತೊಂದು ವಿಶೇಷ.

ಬ್ರಿಟನ್ ಮೂಲಕ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಯುವ್‍ಗೌ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಲೋಕಪ್ರಿಯತೆ ಮತ್ತೊಮ್ಮ ಸಾಬೀತಾಗಿದೆ. ವಿಶ್ವದ ಬಹು ಪ್ರಶಂಸನೀಯ ಗಣ್ಯರಲ್ಲಿ ಮೋದಿ ಅವರಿಗೆ ಆರನೆ ಸ್ಥಾನ ಲಭಿಸಿದೆ.

ಅವರ ದಕ್ಷ ಮತ್ತು ಸಮರ್ಥ ಆಡಳಿತಕ್ಕೆ 4.8 ಅಂಕಗಳನ್ನು ನೀಡಲಾಗಿದೆ. 2018ರಲ್ಲಿ ಮೋದಿ ಈ ಪಟ್ಟಿಯಲ್ಲಿ ಎಂಟನೆ ಸ್ಥಾನದಲ್ಲಿದ್ದರು. ಈಗ ಎರಡು ಸ್ಥಾನಗಳಿಗೆ ಮೇಲ್ಮುಖವಾಗಿ ಜಿಗಿದಿದ್ದಾರೆ. ಅಲ್ಲದೆ ಟಾಪ್ ಟನ್‍ನಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಎಂಬ ಹಗ್ಗೆಳಿಕೆಯನ್ನೂ ಗಳಿಸಿದ್ಧಾರೆ.

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಚೀನಿ ನಟ ಜಾಕಿ ಚಾನ್ ಅನುಕ್ರಮವಾಗಿ ಎರಡು ಮತ್ತು ಮೂರು ಸ್ಥಾನಗಳನ್ನು ಪಡೆದಿದ್ದಾರೆ.

ಟಾಪ್-10 ಹೊರತುಪಡಿಸಿದ ಉಳಿದ ಪಟ್ಟಿಯಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ 12, ಕಿಂಗ್ ಖಾನ್ ಶಾರುಕ್ ಖಾನ್ 16 ಮತ್ತು ಸೂಪರ್‍ಸ್ಟಾರ್ ಸಲ್ಮಾನ್ ಖಾನ್ 18ನೇ ಸ್ಥಾನದಲ್ಲಿದ್ದಾರೆ.

ಟಾಪ್ 20 ಪಟ್ಟಿಯಲ್ಲಿ ಸ್ಥಾನ ಗಳಿಸಿದ ಭಾರತದ ಇತರ ಖ್ಯಾತನಾಮರೆಂದರೆ ದೀಪಿಕಾ ಪಡುಕೋಣೆ(13), ಪ್ರಿಯಾಂಕಾ ಚೋಪ್ರಾ(14), ಐಶ್ವರ್ಯ ರಾಯ್ (16) ಮತ್ತು ಸುಶ್ಮಿತಾ ಸೇನ್ (17).

Facebook Comments

Sri Raghav

Admin