ಕಮಲ ಅರಳುವುದು ಕೆಸರಿನಲ್ಲೇ: ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ವಾರಾಣಾಸಿ, ಏ.26- ವಿರೋಧ ಪಕ್ಷದವರು ನನ್ನ ವಿರುದ್ಧ ಮಾಡುವ ಆರೋಪಗಳು ಮತ್ತು ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ಕೊಳಕು ಪರಿಸರ ಮತ್ತು ಕೆಸರಿನಲ್ಲೇ ಕಮಲ ಅರಳುತ್ತದೆ ಎಂಬುದನ್ನು ನೀವು ಮರೆಯಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ.

ವಾರಾಣಾಸಿಯಲ್ಲಿ ಇಂದು ಬಿಜೆಪಿ ಹಿರಿಯ ಕಾರ್ಯಕರ್ತರೊಂದಿಗೆ ಮಾತನಾಡಿದ ಮೋದಿ ಈ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವರ ಅಭ್ಯರ್ಥಿಗಳು ಸಹ ನಮ್ಮ ಮಿತ್ರರರೇ ಹೊರತು ಶತ್ರುಗಳಲ್ಲ, ಅವರು ಬೇರೆ ಪಕ್ಷದಲ್ಲಿ ಇದ್ದಾರೆ ಅಷ್ಟೆ ಎಂದು ತಿಳಿಸಿದರು.

ನನ್ನ ಬಗ್ಗೆ ವ್ಯಾಪಕ ಟೀಕೆಗಳು, ಆರೋಪಗಳು ವ್ಯಕ್ತವಾಗುತ್ತಿದೆ. ಈ ಬಗ್ಗೆ ನೀವು ಕೋಪಗೊಳ್ಳಬೇಡಿ ಮತ್ತು ಚಿಂತಿಸ ಬೇಡಿ ಇಂತಹ ಟೀಕೆಗಳನ್ನು ನನ್ನ ಸಾಮಾಜಿಕ ಜಾಲತಾಣಕ್ಕೆ ಫೋಸ್ಟ್ ಮಾಡಿಬಿಡಿ ಎಂದು ಕಾರ್ಯಕರ್ತರಿಗೆ ಪ್ರಧಾನಿ ಸಲಹೆ ಮಾಡಿದರು.

ನಾನು ಶ್ರೀಮಂತಿಕೆ ಹಿನ್ನೆಲೆಯಿಂದ ಬಂದವನಲ್ಲ, ನಾನೊಬ್ಬ ನಿಮ್ಮಂತೆಯೇ ಸಾಮಾನ್ಯ ಕಾರ್ಯಕರ್ತ. ನಿಮ್ಮೆಲ್ಲರ ಪರಿಶ್ರಮ ಮತ್ತು ಸಹನೆಗೆ ಬೆಲೆ ಕಟ್ಟಲಾಗದು, ಕಾರ್ಯಕರ್ತರು ಮತ್ತು ಜನರು ಪಕ್ಷ ಮತ್ತು ನನ್ನ ಮೇಲೆ ತೋರಿರುವ ಪ್ರೀತಿ, ವಿಶ್ವಾಸಕ್ಕೆ ನಾನು ತುಂಬಾ ಆಭಾರಿಯಾಗಿದ್ದೇನೆ ಎಂದು ಮೋದಿ ಭಾವೋದ್ವೇಗದಿಂದ ನುಡಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ