ಶ್ರೀರಾಮನ ಜನ್ಮಸ್ಥಳ ನೇಪಾಳದಲ್ಲಿದೆ : ಕೆ.ಪಿ.ಶರ್ಮ ಒಲಿ ಹೊಸ ಖ್ಯಾತೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.14- ಭಗವಾನ್ ಶ್ರೀರಾಮನ ಜನ್ಮಸ್ಥಳ ನೇಪಾಳದಲ್ಲಿದೆ. ಭಾರತದಲ್ಲಿ ಅಲ್ಲ ಎಂದು ನೇಪಾಳ ಪ್ರಧಾನಿ ಕೆ.ಪಿ.ಶರ್ಮ ಒಲಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಭಾನುಮತಿ ಜಯಂತಿ ಅಂಗವಾಗಿ ಪ್ರಧಾನಿ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಜವಾದ ಅಯೋಧ್ಯೆ ಸ್ಥಳ ಪಶ್ಚಿಮ ಬ್ರಿಜುಗಂಜ್‍ನ ಥೋರಿಯಲ್ಲಿದೆ.

ಭಾರತವು ನಕಲಿ ಅಯೋಧ್ಯೆಯನ್ನು ರಚಿಸುವ ಮೂಲಕ ಸಾಂಸ್ಕೃತಿಕ ಅತಿಕ್ರಮಣ ತೆಗೆದುಕೊಂಡಿದೆ ಎಂದಿದ್ದಾರೆ. ಬಾಲ್ಮಿಕಿ ಆಶ್ರಮವು ನೇಪಾಳದಲ್ಲಿದೆ ಮತ್ತು ಮಗನನ್ನು ಪಡೆಯಲು ರಾಜ ದಶರಥ ವಿಧಿಗಳನ್ನು ನೆರವೇರಿಸಿದ ಪವಿತ್ರ ಸ್ಥಳವು ರಿಡಿಯಲ್ಲಿದೆ.

ಈ ಹೊಸ ಸಂಗತಿಯನ್ನು ಒಪ್ಪದ ವಿದ್ವಾಂಸರುಗಳು ತಮ್ಮ ವಿರುದ್ಧ ತಿರುಗಿ ಬೀಳಬಹುದು ಎಂದು ಹೇಳೀದ್ದಾರೆ.

ಜುಲೈನಲ್ಲಿ ನೇಪಾಳವು ದೂರದರ್ಶನ ಹೊರತುಪಡಿಸಿ ಎಲ್ಲಾ ಭಾರತೀಯ ಖಾಸಗಿ ಸುದ್ದಿ ವಾಹಿನಿಗಳ ಪ್ರಸಾರವನ್ನು ತಡೆಹಿಡಿದಿದ್ದು, ಕೆಲವು ಭಾರತೀಯ ಚಾನೆಲ್‍ಗಳು ಪ್ರಧಾನಿ ಶರ್ಮಾ ಒಲಿ ಮತ್ತು ಅವರ ಸರ್ಕಾರವನ್ನು ಟೀಕಿಸಿ ಪ್ರಸಾರ ಮಾಡಿದ ನಂತರ ಈ ಬೆಳವಣಿಗೆ ಶರ್ಮ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Facebook Comments

Sri Raghav

Admin