ವಿಜಯ ದಿವಸ : ಹುತಾತ್ಮರಿಗೆ ಮೋದಿ, ನಾಯ್ಡು ಶ್ರದ್ಧಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಡಿ.16- ಪ್ರಧಾನಿ ನರೇಂದ್ರ ಮೋದಿ ಅವರು 1971ರ ಭಾರತ-ಪಾಕಿಸ್ತಾನ ಸಮರದ ವಿಜಯ ದಿವಸದ ಸ್ವರ್ಣ ಮಹೋತ್ಸವ ದಿನವಾದ ಇಂದು ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತದ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಬಲಿದಾನಗಳಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಅಂದು ಪಾಕಿಸ್ತಾನದ ಭಾಗವಾಗಿದ್ದ ಬಾಂಗ್ಲಾದೇಶವು 1971ರ ಯುದ್ಧದ ಬಳಿಕ ಸ್ವತಂತ್ರ ರಾಷ್ಟ್ರವಾಯಿತು. 50ನೆ ವಿಜಯ ದಿವಸದಂದು ಭಾರತೀಯ ಸಶಸ್ತ್ರ ಪಡೆಗಳ ಮುಕ್ತಿ ಯೋಧರು, ವೀರಾಗ್ರಣಿಗಳು ಮತ್ತು ಕೆಚ್ಚೆದೆಯ ಯೋಧರು ಮಾಡಿದ ತ್ಯಾಗ-ಬಲಿದಾನಗಳನ್ನು ನಾನು ಸ್ಮರಿಸುತ್ತೇನೆ.

ಒಟ್ಟಾಗಿ ನಾವು ದಮನಕಾರಿ ಶಕ್ತಿಗಳ ವಿರುದ್ಧ ಹೋರಾಡಿದೆವು. ಈ ಸಂದರ್ಭದಲ್ಲಿ ಬಾಂಗ್ಲಾದಲ್ಲಿ ರಾಷ್ಟ್ರಪತಿಯವರ ಉಪಸ್ಥಿತಿ ಪ್ರತಿಯೊಬ್ಬ ಭಾರತೀಯನಿಗೆ ವಿಶೇಷ ಹಾಗೂ ಮಹತ್ವಪೂರ್ಣವಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ನಾಯ್ಡು ನಮನ: ವಿಜಯ ದಿವಸದಂದು 1971ರ ಸಮರದಲ್ಲಿ ಪಾಕಿಸ್ತಾನ ವಿರುದ್ಧ ಹೋರಾಡಿ ಹುತಾತ್ಮರಾದ ವೀರಯೋಧರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಯುದ್ಧದ ಸಮಯದಲ್ಲಿ ನಮ್ಮ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಶೌರ್ಯ ಮತ್ತು ಅವಿಚ್ಛಿನ್ನ ದೇಶಭಕ್ತಿಯನ್ನು ದೇಶವು ಸ್ಮರಿಸುತ್ತದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ಟ್ವಿಟ್ ಮೂಲಕ ಗೌರವಾರ್ಪಣೆ ಮಾಡಿದ್ದಾರೆ.

Facebook Comments