ಜಾಡಮಾಲಿಗಳ ಹುದ್ದೆ ಖಾಯಂಗೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.23- ರಾಜ್ಯದ ಪೊಲೀಸ್ ಠಾಣೆಗಳ ಸ್ವಚ್ಛತೆಗಾಗಿ ನೇಮಕಗೊಂಡಿದ್ದ 361 ಜಾಡಮಾಲಿಗಳನ್ನು ಹುದ್ದೆಯಿಂದ ತೆರವುಗೊಳಿಸಲಾಗಿದೆ. ಅವರ ಬದುಕು ಅತಂತ್ರಕ್ಕೆ ಸಿಲುಕಿದೆ ಎಂದು ಕಾಂಗ್ರೆಸ್‍ನ ಪ್ರತಾಪ್‍ಚಂದ್ರ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.

ವಿಧಾನ ಪರಿಷತ್‍ನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಹಲವಾರು ವರ್ಷಗಳಿಂದ ಜಾಡಮಾಲಿಗಳು ಸ್ವಚ್ಛತಾ ಕೆಲಸ ಮಾಡುತ್ತಿದ್ದರು. ಅವರಿಗೆ 3500ರೂ. ವೇತನ ನೀಡಲಾಗುತ್ತಿತ್ತು. 2019ರಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಇವರ ವೇತನ ದುಪ್ಪಟ್ಟುಗೊಳಿಸಿ ಹುದ್ದೆ ಖಾಯಂಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ಆದರೆ, ಈಗಿನ ಸರ್ಕಾರ ಠಾಣೆಗಳ ಸ್ವಚ್ಛತೆ ಹೊರಗುತ್ತಿಗೆಗೆ ನೀಡಿರುವುದರಿಂದ ಮಾರ್ಚ್‍ನಲ್ಲಿ ಅವರನ್ನು ಕೆಲಸದಿಂದ ತೆಗೆದುಹಾಕುತ್ತಾರೆ. ಸ್ವಚ್ಛತಾ ಕೆಲಸ ನಿರ್ವಹಿಸುವ ಜಾಡಮಾಲಿಗಳನ್ನು ಡಿ ದರ್ಜೆ ಹುದ್ದೆಗೆ ನೇಮಿಸಿ ಸೇವೆ ಖಾಯಂಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

Facebook Comments