ಪೊಲೀಸ್ ಮತ್ತು ಸಾರ್ವಜನಿಕ ಸಂಬಂಧಗಳು

ಈ ಸುದ್ದಿಯನ್ನು ಶೇರ್ ಮಾಡಿ

-ಜಿ. ಎ.ಜಗದೀಶ್,  ಪೊಲೀಸ್ ಅೀಕ್ಷಕರು(ನಿ)
ಬ್ರಿಟಿಷರು ಸ್ವಾತಂತ್ರ್ಯ ಪೂರ್ವದಲ್ಲಿ ಪೊಲೀಸರನ್ನು ದಬ್ಬಾಳಿಕೆಯ ಸಲುವಾಗಿಯೇ ಅತಿ ಮುಖ್ಯವಾಗಿ ಬಳಸುತ್ತಿದ್ದರು. ಆದರೆ, ಇತ್ತೀಚೆಗೆ ಬಹಳಷ್ಟು ಬದಲಾವಣೆ ಕಂಡು ಬಂದಿದೆ. ಪೊಲೀಸರು ನಾಗರಿಕರ ಜತೆಗೆ ಬೆರೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಪೊಲೀಸರು ಮಾನವ ಸಮಾಜದ ಅವಿಭಾಜ್ಯ ಅಂಗ ಎಂಬುದನ್ನು ಯಾರೂ ಮರೆಯುವಂತಿಲ್ಲ. ಪೊಲೀಸರು ತಮ್ಮ ದೈನಂದಿನ ಕರ್ತವ್ಯದ ಅವಯಲ್ಲಿ ಸಾರ್ವಜನಿಕರ ನಂಬಿಕೆ ವಿಶ್ವಾಸ ಗಳಿಸಬೇಕು.

ಯಾವುದೇ ಪೊಲೀಸ್ ಅಕಾರಿ ಮತ್ತು ಪೊಲೀಸ್ ಸಿಬ್ಬಂದಿಗಳು ಕಾರ್ಯನಿರ್ವಹಣೆ ಸಮಯದಲ್ಲಿ ನಾಗರಿಕರೊಂದಿಗೆ ಅಂತರ ಇಟ್ಟುಕೊಂಡಲ್ಲಿ ಯಾವುದೇ ಯಶಸ್ವಿ ಪೊಲೀಸರಾಗಲು ಖಂಡಿತಾ ಸಾಧ್ಯವಿಲ್ಲ. ಪೊಲೀಸ್ ಠಾಣೆಗೆ ಬರುವ ಬಹುತೇಕ ಜನರು ಹತ್ತು-ಹಲವಾರು ಸಮಸ್ಯೆ ತೊಡಕುಗಳ ಪರಿಹಾರಗಳಿಗಾಗಿ ಬಂದಿರುತ್ತಾರೆ.

ಶೇ.80ರಷ್ಟು ಜನರು ಬಡತನದ ರೇಖೆಯ ಕೆಳಗೆ ಇರುತ್ತಾರೆ. ಬಹುತೇಕ ನಾಗರಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಕ್ಕಬಹುದೆಂಬ ನಿರೀಕ್ಷೆಯಿಂದ ಬಂದಿರುತ್ತಾರೆ. ಈ ಅವಯಲ್ಲಿ ಠಾಣಾಕಾರಿಗಳು ನೊಂದ ಜನರಿಗೆ ಪ್ರೀತಿಯಿಂದ ಮಾತನಾಡಿಸಿ ಅವರ ತೊಂದರೆಗಳನ್ನು ಅತ್ಯಂತ ಸಮಾಧಾನದಿಂದ ಆಲಿಸಬೇಕು.

ನೊಂದು ಬಂದ ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿದರೆ ಸ್ವಲ್ಪ ನಿರಾಳವಾಗುತ್ತದೆ. ನಂತರ ಕಾನೂನು ಚೌಕಟ್ಟಿನಲ್ಲಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳುವುದು. ಸಮಸ್ಯೆಗಳ ನಿವಾರಣೆಗೆ ಸಾಧ್ಯವಾಗದಿದ್ದಲ್ಲಿ ಪರಿಹಾರದ ಬಗ್ಗೆ ಅವರಿಗೆ ಸೂಕ್ತ ಸಲಹೆಗಳನ್ನು ಮನವರಿಕೆ ಮಾಡಿಕೊಡಬೇಕು.

ಸಮಾಜ ಘಾತುಕರು, ರೌಡಿಗಳು, ಅಪರಾಗಳು ಕಾನೂನು ಮುರಿಯುವವ ರೊಂದಿಗೆ ಅತ್ಯಂತ ಕಠಿಣವಾಗಿ ವರ್ತಿಸ ಬೇಕು. ಆದರೆ, ಸಾಮಾನ್ಯ ನಾಗರಿಕರ ಜತೆಗೆ ಸೌಜನ್ಯವಾಗಿ ನಡೆದು ಕೊಳ್ಳಬೇಕು.

ಪ್ರಸ್ತುತ ಪೊಲೀಸರು ದುಷ್ಟರು- ದುಷ್ಕರ್ಮಿಗಳಿಗೆ ಸಿಂಹ ಸ್ವಪ್ನವಾಗಬೇಕು. ದುಷ್ಟ ಶಿಕ್ಷಕ -ಶಿಷ್ಟ ರಕ್ಷಕರಾಗಬೇಕು. ಪೊಲೀಸರು ಸಾರ್ವಜನಿಕರಿಗೆ ರಕ್ಷಣೆ ನೀಡುವ ಭರವಸೆ ಮೂಡಿಸುವ ವಾತಾವರಣ ಕಲ್ಪಿಸಬೇಕು. ಪೊಲೀಸ್ ಅಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಕಾನೂನು ಶಾಂತಿ-ಸುವ್ಯವಸ್ಥೆ, ಅಪರಾಧ ತಡೆ ಹಾಗೂ ಪತ್ತೆ ಮತ್ತು ಸಂಚಾರ ಸುವ್ಯವಸ್ಥೆ ಕರ್ತವ್ಯ ನಿರ್ವಹಣೆ ಜತೆಗೆ ಸಾಮಾಜಿಕ ನ್ಯಾಯವನ್ನು ಸಾಮಾನ್ಯ ಜನರಿಗೆ ಒದಗಿಸಬೇಕು. ಪೊಲೀಸರು ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು.

ಪೊಲೀಸರು ಸಮುದಾಯ ಪೊಲೀಸ್ ವ್ಯವಸ್ಥೆಗೆ ಆದ್ಯತೆ ನೀಡಬೇಕು.ಪೊಲೀಸರು ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಪೊಲೀಸರು ಮಕ್ಕಳ ಮಿತ್ರರಾಗಬೇಕು.ಕಾನೂನು ಚೌಕಟ್ಟಿನಲ್ಲಿ ಸ್ತ್ರೀಯರ ಸ್ಥಾನಮಾನದ ಅಭ್ಯುದಯದ ಬಗ್ಗೆ ಒತ್ತು ನೀಡಬೇಕು.

ಪ್ರಸ್ತುತ ಸಮಾಜದಲ್ಲಿ ಪೊಲೀಸ್ ಠಾಣೆಗಳ ಬಗ್ಗೆ ಅತ್ಯಂತ ಗೌರವ ಭಾವನೆ ಮೂಡಿಸುವಂತೆ ಬದಲಾವಣೆ ತರಬೇಕು, ಪೆÇಲೀಸರು ಜನ ಸ್ನೇಹಿಗಳಾಗಬೇಕು. ಪೊಲೀಸರು ಸಾಮಾಜಿಕ ಬದಲಾವಣೆಯ ರೂವಾರಿಗಳಾಗಬೇಕು, ಪೊಲೀಸರು ಸಮಾಜ ಪರಿವರ್ತನೆ ತರುವ ಎಂಜಿನಿಯರ್ ಹಾಗೂ ಜನರ ಅಸೌಖ್ಯದ ಬಗ್ಗೆ ಸೂಕ್ತ ಚಿಕಿತ್ಸೆ ನೀಡುವ ವೈದ್ಯರಾಗಬೇಕು.

ಕೆಲವೊಮ್ಮೆ ಶಿಕ್ಷಕರು ವಿದ್ಯಾರ್ಥಿಗಳ ಒಳಿತಿಗಾಗಿ ಸಕಾಲಿಕ ಮಾರ್ಗದರ್ಶನ ನೀಡುವಂತೆ ಪೊಲೀಸರು ಸಹ ಸಮಾಜದಲ್ಲಿ ನಾಗರಿಕರಿಗೆ ಸಕಾಲಿಕ ಮಾರ್ಗದರ್ಶನ ನೀಡಿ ದಿಕ್ಸೂಚಿ ಯಾಗಬೇಕು. ಮನೆಗಳಲ್ಲಿ ತಂದೆ ತಾಯಿಗಳು ತಮ್ಮ ಎಳೆಯ ಮಕ್ಕಳಿಗೆ ಹಲವಾರು ಸಂದರ್ಭದಲ್ಲಿ ಹೆದರಿಸಲು ಪೊಲೀಸರನ್ನು ಕರೆಸುತ್ತೇವೆಂದು ಭಯ ಹುಟ್ಟಿಸುತ್ತಾರೆ ಇದು ಸಂಪೂರ್ಣ ನಿಲ್ಲಬೇಕು.

ಇದು ಸಮಾಜದ ಮೂಲಭೂತವಾದ ಜವಾಬ್ದಾರಿಯಾಗಿದೆ. ಎಳೆಯ ಮಕ್ಕಳಿಗೆ ಪೊಲೀಸ್ ಠಾಣೆಗಳು ಹಾಗೂ ಪೊಲೀಸರು ಭಯದ ಕೇಂದ್ರಗಳಾಗ ಬಾರದು. ಮನೆಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಪೊಲೀಸ್ ಠಾಣೆಗಳು ಮತ್ತು ಪೊಲೀಸರ ಬಗ್ಗೆ ಒಳ್ಳೆಯ ಭಾವನೆ ಮೂಡುವಂತೆ ಮಾತನಾಡಬೇಕು.

ಆಧುನಿಕ ಸಮಾಜದಲ್ಲಿ ಪೊಲೀಸರ ಮೇಲೆ ಮಹತ್ತರ ಜವಾಬ್ದಾರಿಯಿದೆ. ಪೊಲೀಸರಿಲ್ಲದೆ ದೈನಂದಿನ ಜನಜೀವನ ಅಸಾಧ್ಯ ಎನ್ನುವಷ್ಪರ ಮಟ್ಟಿಗೆ ಅನಿವಾರ್ಯವಾಗಿದೆ.ಈ ಸಂದಿಗ್ಧ ಪರಿಸ್ಥಿತಿಯನ್ನು ಪೊಲೀಸರು ಅರ್ಥ ಮಾಡಿಕೊಂಡು ಸಮಾಜದ ಹೆಚ್ಚಿನ ಜವಾಬ್ದಾರಿ ನಿರ್ವಹಿಸಲು ಸನ್ನದ್ದರಾಗಬೇಕು. ಪೊಲೀಸರು ದರ್ಪ, ದೌರ್ಜನ್ಯ, ದಬ್ಬಾಳಿಕೆಯ ಪ್ರತೀಕವಾಗಬಾರದು.
ಸಾರ್ವಜನಿಕರು ಪೊಲೀಸರ ಮೇಲೆ ಇಟ್ಟಿರುವ ನಿರೀಕ್ಷೆಗೆ ಚ್ಯುತಿ ಬಾರದಂತೆ ಹೊಸ ಬದಲಾವಣೆಗೆ ಒತ್ತು ನೀಡಿ ಸದಾ ಜನ ಸ್ನೇಹಿ ಪೊಲೀಸರಾಗಬೇಕು.

ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಆಗುತ್ತದೆ. ಸಮಾಜದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಸಮಾಜದ ಒಳಿತಿಗಾಗಿ ಪರಸ್ಪರರೂ ತಮ್ಮ ಮಹತ್ತರವಾದ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಬೇಕು. ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅತ್ಯಮೂಲ್ಯವಾಗಿದೆ.

ಯಾವುದಾದರೂ ವಿಚಾರದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳಿಗೆ ಸಿಲುಕಿ ನೊಂದು ಬೆಂದು ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರಿಗೆ ಬೇಕಾದದ್ದು ಆತ್ಮೀಯ ಸಾಂತ್ವನ ಮಾತುಗಳ ಅವಶ್ಯಕತೆ ಇದೆ. ಪ್ರೀತಿಯ ಒಂದು ನಗು,ಒಂದು ಒಳ್ಳೆಯ ಮಾತು ಇಷ್ಟೇ ಸಾಕು.ನೊಂದ ಜನರಿಗೆ ಸಮಾಧಾನ ಬೇಕಾಗಿದೆ. ಈ ಕೆಲಸ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಆಗಬೇಕಾಗಿರುವುದು ಅತೀ ಅಗತ್ಯವಾಗಿದೆ. ಈ ರೀತಿಯಲ್ಲಿ ಪೊಲೀಸರು ಸಾರ್ವಜನಿಕರೊಂದಿಗೆ ಸ್ಪಂದಿಸಿದರೆ ಜನಸ್ನೇಹಿ ಪೊಲೀಸರಾಗುವುದರಲ್ಲಿ ಸಂದೇಹವಿಲ್ಲ.

ಸಮಾಜದಲ್ಲಿ ನಡೆಯುವ ಕೆಲವೊಂದು ಕಾನೂನು ಬಾಹಿರ ಕೃತ್ಯಗಳನ್ನು ತಡೆಯಲು ಸಜ್ಜನ ನಾಗರಿಕರ ಸಹಕಾರ ಕೂಡಲೇ ಸಿಗುತ್ತದೆ. ಪೊಲೀಸರು ಎಂದರೆ ಕ್ರೂರಿಗಳು ಎನ್ನುವ ಮನೋಭಾವನೆ ತೊಲಗಬೇಕು. ಯಾವುದೇ ವಿಚಾರದಲ್ಲಿ ಪೊಲೀಸ್ ಠಾಣೆಗೆ ಹೋದರೆ ನ್ಯಾಯ ಸಿಗುವುದಿಲ್ಲ ಎಂದು ಸಾರ್ವಜನಿಕರಲ್ಲಿ ಇರುವ ತಪ್ಪು ಕಲ್ಪನೆ ದೂರವಾಗಬೇಕು.

ಹಿರಿಯ ನಾಗರಿಕರು, ನೊಂದ ಅಸಹಾಯಕರು ಒಂಟಿಯಾಗಿ ವಾಸಿಸುವ ವಯೋವೃದ್ಧರಿಗೆ ಪೊಲೀಸರು ಆಸರೆಯಾದರೆ ಸಮಾಜದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಒಳ್ಳೆಯ ಭಾವನೆ ಮೂಡುತ್ತದೆ. ಶಾಲಾ ಮಕ್ಕಳಿಗೂ ಕೂಡಾ ಪೊಲೀಸ್ ಇಲಾಖೆಯ ಮೇಲೆ ಇರುವ ತಪ್ಪು ಅಭಿಪ್ರಾಯ ದೂರವಾಗಬೇಕಾದರೆ,ಪೊಲೀಸರು ಶಾಲಾ ಕಾಲೇಜಿಗೆ ಭೇಟಿ ನೀಡಿ ಶಾಲಾ ಮಕ್ಕಳೊಂದಿಗೆ ಬೆರೆತು ಮಕ್ಕಳಲ್ಲಿ ದೈರ್ಯ ತುಂಬುವಂತಹ ಕೆಲಸ ಮಾಡಬೇಕು.

ಪೊಲೀಸ್ ಇಲಾಖೆಯ ಕರ್ತವ್ಯ ದ ಬಗ್ಗೆ ಮಾಹಿತಿ ನೀಡಬೇಕು. ಕಾನೂನಿನ ಅರಿವು ಮೂಡಿಸುವ ಮೂಲಕ ಪೊಲೀಸ್ ಇಲಾಖೆ ಎಂದರೆ ಸಾರ್ವಜನಿಕರು ಹೆಮ್ಮೆ ಪಡುವಂತಾಗಬೇಕು. ಪೊಲೀಸರು ಹಾಗೂ ಸಾರ್ವಜನಿಕರು ಒಂದೇ ನಾಣ್ಯದ ಎರಡು ಮುಖಗಳು ಎಂದರೆ ಅತಿಶಯೋಕ್ತಿಯಲ್ಲ.

Facebook Comments

Sri Raghav

Admin