ಡಿಸಿಪಿ ಅನುಚೇತ್ ಸೇರಿ 6 ಮಂದಿ ಪೊಲೀಸ್ ಅಧಿಕಾರಿಗಳಿಗೆ ಕೇಂದ್ರದ ಪದಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.13- ಅಪರಾಧ ಪ್ರಕರಣಗಳ ಅತ್ಯುತ್ತಮ ತನಿಖೆಗಾಗಿ ಕೇಂದ್ರ ಸರ್ಕಾರ ನೀಡುವ ಗೃಹಮಂತ್ರಿ ಪದಕಕ್ಕೆ ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಅನುಚೇತ್ ಸೇರಿದಂತೆ ರಾಜ್ಯದ ಆರು ಮಂದಿ ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.

ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದ ಎಸ್‍ಐಟಿ ತಂಡದಲ್ಲಿರುವ ಅನುಚೇತ್ ಹಾಗೂ ಡಿವೈಎಸ್‍ಪಿ ಟಿ.ರಂಗಪ್ಪ, ಇನ್ಸ್‍ಪೆಕ್ಟರ್ ರಾಜು ಅವರಿಗೆ ಪದಕ ಲಭಿಸಿದೆ. ಅಲ್ಲದೆ, ಮಾನವ ಕಳ್ಳಸಾಗಣೆ ಪ್ರಕರಣ ಭೇದಿಸಿದ್ದ ಅಂದಿನ ಸಿಐಡಿಯ ಎಸ್ಪಿ ಜಾಹ್ನವಿ, ಡಿವೈಎಸ್‍ಪಿ ರವಿಶಂಕರ್ ಅವರು ಈ ಪದಕಕ್ಕೆ ಭಾಜನರಾಗಿದ್ದಾರೆ.

ಮಾಲೂರಿನಲ್ಲಿ ಬಾಲಕಿ ಮೇಲೆ ನಡೆದಿದ್ದ ಅತ್ಯಾಚಾರ-ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಸರ್ಕಲ್ ಇನ್ಸ್‍ಸ್ಪೆಕ್ಟರ್ ಸತೀಶ್ ಅವರೂ ಸಹ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ.

Facebook Comments