ಸಿಖ್ ವೃದ್ಧನ ಮೇಲೆ ಹಲ್ಲೆ, ದರೋಡೆ ಯತ್ನ ಆರೋಪದಲ್ಲಿ ಪೊಲೀಸ್ ಮುಖ್ಯಸ್ಥನ ಮಗ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Indian-origine
ನ್ಯೂಯಾರ್ಕ್, ಆ.9-ಭಾರತೀಯ ಮೂಲದ 71 ವರ್ಷದ ಸಿಖ್ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ದರೋಡೆ ನಡೆಸಲು ಯತ್ನಿಸಿದ್ದ ಆರೋಪದ ಮೇಲೆ ಕ್ಯಾಲಿಫೋರ್ನಿಯಾ  ಪೊಲೀಸ್ ಮುಖ್ಯಸ್ಥರ ಮಗ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.  ಇದು ಜನಾಂಗೀಯ ದ್ವೇಷದ ಮೇಲೆ ನಡೆದ ಹಲ್ಲೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.   ಮ್ಯಾನ್‍ಟೆಕಾದಲ್ಲಿ ಆ.6ರಂದು ಮುಂಜಾನೆ ಸಾಹೀಬ್ ಸಿಂಗ್ ನಾಟ್ ಎಂಬ ವಯೋವೃದ್ಧರನ್ನು ನಿಂದಿಸಿ, ಮಾರಕಾಸ್ತ್ರದೀಂದ ಹಲ್ಲೆ ನಡೆಸಿ, ದರೋಡೆಗೆ ಯತ್ನಿಸಲಾಗಿತ್ತು. ಈ ಸಂಬಂಧ ಯೂನಿಯನ್ ಸಿಟಿ ಪೊಲೀಸ್ ಮುಖ್ಯಸ್ಥ ಡೆರ್ರಿಲ್ ಮ್ಯಾಕ್‍ಅಲಿಸ್ಟರ್ ಅವರ ಪುತ್ರ ಟೈರೋನ್ ಮ್ಯಾಕ್‍ಅಲಿಸ್ಟರ್(18) ಹಾಗೂ 16 ವರ್ಷದ ಮತ್ತೊಬ್ಬ ಬಾಲಾಪರಾಧಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Facebook Comments

Sri Raghav

Admin