ಕಾನ್‍ಸ್ಟೆಬಲ್‍ಗೆ ಸೋಂಕು, ನಿಂತು ಹೋದ ಮದುವೆ

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ, ಜೂ.30- ಮಧುಮಗನಿಗೆ ಕೊರೊನಾ ಸೋಂಕು ತಗುಲಿದ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಿದರೆ, ಸಂಬಂಧಿಕರನ್ನು ಕ್ವಾರಂಟೈನ್‍ಗೆ ಕಳುಹಿಸಬೇಕಾದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.ವಿವಾಹವಾಗಲು ಹೊರಟಿದ್ದ ಪೊಲೀಸ್ ಕಾನ್‍ಸ್ಟೆಬಲ್‍ಗೆ ಸೋಂಕು ತಗುಲಿದ ಪರಿಣಾಮ ಹಸೆಮಣೆ ಏರಬೇಕಿದ್ದ ಮಧುಮಗ ಈಗ ಕೋವಿಡ್-19 ಆಸ್ಪತ್ರೆ ಸೇರಿದ್ದಾರೆ.

ಇಂದು ನಡೆಯಬೇಕಿದ್ದ ವಿವಾಹ ರದ್ದುಮಾಡಲಾಗಿದೆ ಮತ್ತು ಇವರ ಸಂಬಂಧಿಕರನ್ನೆಲ್ಲ ಕ್ವಾರಂಟೈನ್‍ಗೆ ಕಳುಹಿಸಲಾಗಿದೆ.  ಮದುವೆ ನಿಶ್ಚಯವಾಗಿದ್ದ ಹಿನ್ನೆಲೆಯಲ್ಲಿ ರಜೆ ಪಡೆದು ಬಿಜಾಪುರಕ್ಕೆ ತೆರಳಿದ್ದರು. ಆಗ ಆರೋಗ್ಯ ಇಲಾಖೆ ಸಿಬ್ಬಂದಿ ಇವರ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ತಪಾಸಣೆ ಸಂದರ್ಭದಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿ ಇವರ ಮನವೊಲಿಸಿ ಮದುವೆ ಮುಂದೂಡಿದ್ದಾರೆ.
ಇವರ ಸಂಪರ್ಕಕ್ಕೆ ಬಂದ 30 ಜನರ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

Facebook Comments