8 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಜನ ಮೆಚ್ಚಿದ ಜಾಕಿ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Police-Dog

ಚನ್ನಪಟ್ಟಣ, ಸೆ.27- ಸುಮಾರು 8 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಗುರುತರವಾದ ಸೇವೆ ಸಲ್ಲಿಸಿದ ಜನ ಮೆಚ್ಚಿದ ಜಾಕಿ ತನ್ನ ಸೇವೆಯನ್ನು ಸ್ಥಗಿತ ಗೊಳಿಸಿ, ವೃತ್ತಿ ಜೀವನಕ್ಕೆ ವಿದಾಯ ಹೇಳಿ ಬಾರದ ಲೋಕಕ್ಕೆ ಪಾದಾರ್ಪಣೆ ಮಾಡಿದೆ. ಗಾಬರಿಯಾಗಬೇಡಿ, ನಗರದ ಜಿಲ್ಲಾ ಶಸಸ್ತ್ರ ಮೀಸಲು ಪಡೆಯಲ್ಲಿ ನಿರಂತರವಾಗಿ ತನ್ನ ಖಡಕ್ ಸೇವೆಯಿಂದ ಪ್ರಸಿದ್ದಿ ಪಡೆದಿದ್ದ ಶ್ವಾನ ಅಂದರೆ ಜಾಕಿ ಕಳೆದ ಒಂದು ತಿಂಗಳುಗಳಿಂದ ಮಾರಣಾಂತಿಕ ರೋಗದಿಂದ ಹೈರಾಣಾಗಿ ಸಾವು ಬದುಕಿನ ಜೊತೆ ಹೋರಾಟ ನಡೆಸುತಿತ್ತು.

ಜಾಕಿ ಉಳಿಸಿಕೊಳ್ಳಲು ಹರ ಸಾಹಸ ಮಾಡಿದ ವೈದ್ಯರು ಕೆಲ ದಿನಗಳಿಂದ ಚಿಕಿತ್ಸೆ ನೀಡುತ್ತಿದ್ದರು, ಚಿಕಿತ್ಸೆಗೆ ಜಾಕಿಯ ದೇಹ ಸ್ಪಂದಿಸದೆ ದೇಹ ಸ್ಥಿತಿ ಗಂಭೀರತೆ ಪಡೆದುಕೊಂಡ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಕೈ ಚೆಲ್ಲಿದ ಪರಿಣಾಮ ತೀವ್ರ ಅಸ್ವಸ್ಥಗೊಂಡ ಜಾಕಿ ನಗರದ ಪಶು ವ್ಯದ್ಯ ಆಸ್ಪತ್ರೆಯಲ್ಲಿ ಕೊನೆ ಉಸಿರು ನಿಲ್ಲಿಸಿದೆ.ಬೆಂಗಳೂರಿನಲ್ಲಿ ಲ್ಯಾಬರೆಡರ್ ರಿಟ್ರಿವರ್ ತಳಿಯ 7 ತಿಂಗಳ ಮರಿಯನ್ನು ಪಡೆದ ಪೊಲೀಸ್ ಇಲಾಖೆ ಬೆಂಗಳೂರಿನ ಸಿ.ಆರ್.ದಕ್ಷಿಣದಲ್ಲಿ 10 ತಿಂಗಳು ತರಬೇತಿ ಮುಗಿಸಿದ ಶ್ವಾನ ಮರಿಯನ್ನು 2011ರಲ್ಲಿ ಇಲಾಖೆಗೆ ನೇಮಿಸಿಕೊಂಡು ಜಾಕಿ ಎಂದು ಹೆಸರಿಡಲಾಗಿತ್ತು.

ಬಾಂಬ್ ಪತ್ತೆ ಮಾಡುವುದರಲ್ಲಿ ನಿಸ್ಸಿಮನಾಗಿದ್ದ ಜಾಕಿ ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್‍ಕಲಾಂ, ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಮಾಜಿ ಮಹಾನ್ ಗಣ್ಯರು ಇಂದಿನ ಭಾರತದ ಪ್ರಧಾನಿ ನರೇಂದ್ರಮೋದಿರವರೆಗೂ ಅವರು ಭಾಗವಹಿಸುವ ಎಲ್ಲಾ ಬಹಿರಂಗ ಸಭೆಗಳಲ್ಲಿ ಗ್ರಿನ್ ಸಿಗ್ನಲ್ ನೀಡುವುದರ ಮುಖೇನ ಸಭೆಯ ಯಶಸ್ವಿಗೆ ಸಂಪೂರ್ಣ ಕ್ರೆಡಿಟ್ ಜಾಕಿಗೆ ಸೇರುತಿತ್ತು.

ಜಾಕಿಯ ಉಸ್ತುವಾರಿ ಹೊತ್ತ ಸಿಬ್ಬಂದಿಗಳಾದ ಶಿವಕುಮಾರ್, ರವಿ ರವರ ಕರ್ತವ್ಯ ಪ್ರಜ್ಞೆ ನಿಜಕ್ಕೂ ಪ್ರಶಂಸನೀಯವಾಗಿದ್ದು. ಸುಮಾರು 8 ವರ್ಷಗಳ ಕಾಲ ಕುಟುಂಬದ ಸದಸ್ಯನಂತೆ ಪ್ರೀತಿ ವಿಶ್ವಾಸದಿಂದ ನೋಡಿಕೊಂಡು ಇಂದು ಇಹ ಲೋಕ ತ್ಯೆಜಿಸಿದ ಸಂದರ್ಭದಲ್ಲಿ ಪೆದೆಗಳ ಮೂಖವೇದನೆ ಭಗವಂತನಿಗೆ ಪ್ರಿಯವಾಗಿತ್ತು.

ಸಕಲ ಗೌರವಗಳೊಂದಿಗೆ ಜಾಕಿಯ ಕಳೆ ಬರಹವನ್ನು ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು, ಈ ಸಂದರ್ಭದಲ್ಲಿ ಪೊಲೀಸ್ ಉಪವಿಭಾಗಾಧಿಕಾರಿ ಮಲ್ಲೇಶ್, ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಡಿವೈಎಸ್‍ಪಿ ಮಹೇಶ್ ಹಾಗೂ ಹಲವಾರು ಮಂದಿ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin