ನಿವೃತ್ತಿ ಹೊಂದಿದ ಚಿತ್ರ ಮತ್ತು ಡೈನಾಗೆ ಸನ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಮಾ.5- ಒಂದು ದಶಕಗಳಿಂದ ಇಲ್ಲಿನ ಪೊಲೀಸ್ ಒಡನಾಡಿಯಾಗಿ ಅಪರಾಧ ಪ್ರಕರಣಗಳನ್ನು ಬೇಸಿ ಸಾಕ್ಷ್ಯ ಸಂಗ್ರಹಿಸಿಕೊಟ್ಟು ಕರ್ತವ್ಯ ನಿಷ್ಠೆ ಮೆರೆದಿದ್ದ ಶ್ವಾನಗಳು ನಿವೃತ್ತಿ ಹೊಂದಿದ್ದರಿಂದ ಅವುಗಳನ್ನು ಸನ್ಮಾನಿಸಲಾಯಿತು. ಇದು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಕಾರಿಗಳ ಕಚೇರಿಯ ಆವರಣದಲ್ಲಿ ನಡೆದ ಶ್ವಾನದಳದ ಚಿತ್ರ, ಡೈನಾ ಅವರು ಯಶಸ್ವಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿನ್ನಲೆಯಲ್ಲಿ ಪೊಲೀಸ್ ವರಿಷ್ಠಾಕಾರಿಗಳಿಂದ ಸನ್ಮಾನ ನೆರವೇರಿತು.

ಇದು ಅಪರೂಪದಲ್ಲಿ ಅಪರೂಪ ಸನ್ನಿವೇಶ. ಕಳೆದ ಒಂದು ದಶಕದಿಂದ ರಾಜ್ಯ ಸೇರಿದಂತೆ ಪ್ರಮುಖವಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕೊಲೆ, ಸುಲಿಗೆ, ದರೊಡೆ ಸೋಟಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಪರಾಗಳ ಪತ್ತೆ ಕಾರ್ಯದಲ್ಲಿ ಪೊಲೀಸರಿಗೆ ನೆರವಾಗಿದ್ದ ಶ್ವಾನಗಳಾದ ಚಿತ್ರ ಹಾಗೂ ಡೈನಾರನ್ನು ಪೊಲೀಸ್ ಇಲಾಖೆಯಿಂದ ಗೌರವಿಸಿ ಆತ್ಮೀಯ ಬೀಳ್ಕೊಡಿಗೆ ಮಾಡಲಾಯಿತು.

ಚಿಕ್ಕಬಳ್ಳಾಪುರ ನಗರ ಹೊರ ಹೊಲಯದ ಅಣಕನೂರು ಸಮೀ ಪದ ಎಸ್ಪಿ ಕಚೇರಿ ಆವರಣದಲ್ಲಿ ನಡೆದ ಬೀಳ್ಕೊಡಿಗೆ ಸಮಾರಂಭದಲ್ಲಿ ಸ್ಪೋಟಕ ಪತ್ತೆ ಕಾರ್ಯದಲ್ಲಿ ಪೊಲೀಸ್ ಇಲಾಖೆಯ ತನಿಖೆಗೆ ಸಹಕಾರಿಯಾಗಿ ಸಾಕ್ಷ್ಯ ಸಂಗ್ರಹಕ್ಕೆ ಮುಂಚೂಣಿಯಲ್ಲಿದ್ದ ಈ ಎರಡೂ ಶ್ವಾನಗಳು ಕಳೆದ ಒಂದು ದಶಕದಿಂದ ಶ್ರಮಿಸಿದ್ದವು.

2021 ಮಾರ್ಚ್ 10ರಂದು ನಿವೃತ್ತಗೊಳ್ಳಲಿರುವ ಶ್ವಾನದಳದ ಚಿತ್ರ ಮತ್ತು ಡೈನಾ ಶ್ವಾನಗಳನ್ನು ಪೊಲೀಸ್ ವರಿಷ್ಠಾಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ರೇಷ್ಮೆಶಾಲು ಹೊದಿಸಿ ಹಾರ ಹಾಕಿ ಗೌರವಿಸಿದರು.ಈ ಸಂದರ್ಭದಲ್ಲಿ ಸಶಸ್ತ್ರ ಮೀಸಲು ಡಿವೈಎಸ್ಪಿ ಮಂಜುನಾಥ್, ಇನ್ಸ್ಪೆಕ್ಟರ್ ಕೃಷ್ಣಾರೆಡ್ಡಿ ಮತ್ತಿತರ ಪೊಲೀಸ್ ಅಕಾರಿಗಳು ಹಾಜರಿದ್ದರು.

Facebook Comments

Sri Raghav

Admin