ಮತ್ತೊಮ್ಮೆ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲೆತ್ನಿಸಿದ ಆರೋಪಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಮಾ.26. ಪೊಲೀಸರ ಮೇಲೆ ಹಲ್ಲೆ ನಡೆಸಿ ಆರೋಪಿ ಮತ್ತೆ ಅದೇ ಚಾಳಿ ಮುಂದುವರಿಸಿದ ಹಿನ್ನೆಲೆಯಲ್ಲಿ ಇಂದು ಎಚ್ಚೆತ್ತ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಆತನ ಸೆರೆ ಹಿಡಿದಿರುವ ಘಟನೆ ನಡೆದಿದೆ.

ನಿನ್ನೆ ಮಧ್ಯಾಹ್ನ ಹನ್ನೆರಡು ಮೂವತ್ತರ ಸಂದರ್ಭದಲ್ಲಿ ಭೂಪಸಂದ್ರ ಬಳಿ ಚೆಕ್ ಪೋಸ್ಟ್ ಬಳಿ ಕರ್ತವ್ಯದಲ್ಲಿದ್ದಾಗ ತ್ರಿಬಲ್ ರೈಡ್ನಲ್ಲಿ ಬಂದ ಮೂವರು ಯುವಕರು ಪೊಲೀಸ್ ಪೇದೆಗಳಾದ ಬಸವರಾಜ್ ಮತ್ತು ಮಂಜುನಾಥ್ ಅವರ ಮೇಲೆ ಹಲ್ಲೆ ನಡೆಸಿದ್ದರು .

ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಳೆದ ರಾತ್ರಿಯೇ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ತಾಜುದ್ದೀನ್ ಎಂಬುವನು ಸೇರಿದಂತೆ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದರು.  ಇಂದು ಬೆಳಿಗ್ಗೆ ಸಂಜಯನಗರ ಠಾಣೆಯ ಇನ್ಸ್ಪೆಕ್ಟರ್ ಬಾಲಾಜಿ ಸಬ್ ಇನ್ಸ್ಪೆಕ್ಟರ್ ರೂಪಾ ಮತ್ತು ಹೆಡ್ ಕಾನ್ ಸ್ಟೇಬಲ್ ಮಂಜಣ್ಣ ಅವರು ಸ್ಥಳ ಮಹಜರಿಗೆ ತೆರಳಿದ್ದರು.

ಈ ವೇಳೆ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗುವ ಸಂದರ್ಭದಲ್ಲಿ ಮತ್ತೆ ಹಲ್ಲೆಗೆ ಮುಂದಾಗಿದ್ದ .ಇದರಿಂದ ಎಚ್ಚೆತ್ತ ಇನ್ಸ್ಪೆಕ್ಟರ್ ಬಾಲಾಜಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಆತ ಶರಣಾಗುವಂತೆ ಸೂಚಿಸಿದರು ಪರಾರಿಯಾಗಲು ಯತ್ನಿಸಿದ.

ಇದೇ ವೇಳೆ ಅಡ್ಡ ಬಂದ ಸಬ್ ಇನ್ಸ್ಪೆಕ್ಟರ್ ಮತ್ತು ಮುಖ್ಯ ಪೇದೆಯನ್ನು ತಳ್ಳಿ ಅವರಿಗೆ ಕಲ್ಲಿನಿಂದ ಹೊಡೆದು ಪರಾರಿಯಾಗುವಾಗ ಬಾಲಾಜಿ ಅವರು ಆತನ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ .ಕುಸಿದು ಬಿದ್ದ ಸಜಾ ಬುದ್ಧಿ ನನ್ನ ಈಗ ಬ್ಯಾಕ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ವಿಕ್ಟೋರಿಯಾಗೆ ದಾಖಲು ಪಡಿಸಲಾಗಿದೆ ಗಾಯಗೊಂಡಿರುವ ಎಸ್ಐ ಮತ್ತು ಮುಖ್ಯ ಪೇದೆ ಕೂಡ ಚಿಕಿತ್ಸೆ ನೀಡಲಾಗಿದೆ

Facebook Comments

Sri Raghav

Admin