ಬ್ರೇಕಿಂಗ್ : ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ಗಣರಾಜ್ಯೋತ್ಸವ ಪ್ರಶಂಸನೀಯ ಸೇವಾ ಪದಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.25- ಗಣರಾಜ್ಯೋತ್ಸವ ಸಂದರ್ಭದಲ್ಲಿ ಪೊಲೀಸರಿಗೆ ನೀಡುವ ಪ್ರಶಂಸನೀಯ ಸೇವಾ ಪದಕಕ್ಕೆ ರಾಜ್ಯದ 19 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಜನರಾಗಿದ್ದಾರೆ. ನಾಳೆ ಗಣರಾಜ್ಯೋತ್ಸವದ ಅಂಗವಾಗಿ ಇಂದು ಕೇಂದ್ರ ಗೃಹ ಇಲಾಖೆ ಪ್ರಶಸ್ತಿ ಪುರಸ್ಕøತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಷ್ಟ್ರಪತಿಯವರ ಶೌರ್ಯ ಪದಕಕ್ಕೆ ನಾಲ್ಕು ಮಂದಿ, ಪೊಲೀಸ್ ಶೌರ್ಯ ಪದಕಕ್ಕೆ 286 ಮಂದಿ, ವಿಶೇಷ ಸೇವೆಗಾಗಿ ನೀಡುವ ರಾಷ್ಟ್ರಪತಿ ಪದಕಕ್ಕೆ 93 ಮಂದಿ ಪಾತ್ರರಾಗಿದ್ದಾರೆ.

ಪ್ರಧಾನಮಂತ್ರಿಯವರ ಪ್ರಶಂಸನೀಯ ಸೇವಾ ಪದಕಕ್ಕೆ ದೇಶಾದ್ಯಂತ 657 ಮಂದಿ ಆಯ್ಕೆಯಾಗಿದ್ದು, ಅದರಲ್ಲಿ ಕರ್ನಾಟಕದ 19 ಮಂದಿ ಸೇರಿದ್ದಾರೆ. ಬೆಂಗಳೂರಿನ ಬಿಎಂಟಿಎಫ್ ಎಸ್ಪಿ ಓಬಳೇಶ್, ನಂಜಪ್ಪ ಬೀಕಲ, ಕೊಪ್ಪಳದ ಮುನಿರಾಬಾದ್‍ನ ಐಆರ್‍ಬಿ ಕಮಾಂಡೆಂಡ್ ಮಹದೇವ ಪ್ರಸಾದ ಕಬ್ಬಳ್ಳಿ ಮಾದಪ್ಪ, ಬೆಂಗಳೂರಿನ ಮಾರತ್‍ಹಳ್ಳಿ ಉಪ ವಿಭಾಗದ ಎಸಿಪಿ ಪಂಪಾಪತಿ ಮುದಲಾಪುರ ಗೌಡರ್, ವಿಜಯನಗರ ಉಪ ವಿಭಾಗದ ಎಸಿಪಿ ಎಚ್.ಎನ್.ಧರ್ಮೆಂದ್ರ, ಸಿಐಡಿಯ ಡಿವೈಎಸ್‍ಪಿ ಎಸ್.ಟಿ.ಚಂದ್ರಶೇಖರ,

ಲೋಕಾಯುಕ್ತದ ಧಾರವಾಡ ಡಿವೈಎಸ್‍ಪಿ ಶಂಕರ ಮಲ್ಲಿಕಾರ್ಜುನಪ್ಪ ರಾಗಿ, ಲೋಕಾಯುಕ್ತದ ವಿಶೇಷ ತನಿಖಾ ದಳದ ಡಿವೈಎಸ್‍ಪಿಗಳಾದ ಸಿ.ಸಿದ್ದರಾಜು, ಕರಿಯಪ್ಪ ಅಮಂಡ ಗಣಪತಿ, ಕಲಬುರ್ಗಿ ಗ್ರಾಮಾಂತರ ಉಪ ವಿಭಾಗದ ಡಿವೈಎಸ್‍ಪಿ ಸಂಗಪ್ಪ ಹುಲ್ಲೂರು ಸಿದ್ದಪ್ಪ, ಮಾಗಡಿ ಉಪ ವಿಭಾಗದ ಡಿವೈಎಸ್‍ಪಿ ಎ.ವಿ.ಲಕ್ಷ್ಮೀನಾರಾಯಣ ಅವರಿಗೆ ಪ್ರಶಸ್ತಿಗಳು ಲಭಿಸಿವೆ.

ಪೊಲೀಸ್ ಇನ್ಸ್‍ಪೆಕ್ಟರ್‍ಗಳ ಪೈಕಿ ಶಂಕರಪ್ಪ ಗೋವಿಂದಯ್ಯ ಬೆಂಕಿಕೆರೆ, ಉಡುಪಿಯ ಎಸಿಬಿಯ ಇನ್ಸ್‍ಪೆಕ್ಟರ್ ಸತೀಶ್ ಸುಬ್ಬಣ್ಣ ಬಿಲಗಲಿ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯದ ಬೆರಳಚ್ಚು ಘಟಕದಲ್ಲಿ ಕೆಲಸ ಮಾಡುತ್ತಿರುವ ಪಿಎಸ್‍ಐ ಬಾಬುಸಿಂಗ್ ಹನುಮಂತ ಸಿಂಗ್ ಕಿತ್ತೂರ್, ಬೆಂಗಳೂರಿನ ಬಸವನಗುಡಿ ಸಂಚಾರಿ ಪೊಲೀಸ್ ಠಾಣೆ ಎಎಸ್‍ಐ ವೆಂಕಟೇಶ್‍ಕೃಷ್ಣಪ್ಪ,

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್‍ಐ ಶಿವಯ್ಯ ಸುಕುಮಾರ್, ಮೈಸೂರಿನ ಡಿಎಆರ್‍ನ ಎಆರ್‍ಎಸ್‍ಐ ರಾಜ್‍ಕುಮಾರ್, ಹೆಡ್‍ಕಾನ್‍ಸ್ಟೇಬಲ್‍ಗಳಾದ ಗುಪ್ತಚರ ವಿಭಾಗದ ಪಿ.ಎಸ್.ಶಿವಕುಮಾರ್, ನಂಜುಂಡಯ್ಯ ಚಂದ್ರಯ್ಯ ಗೊಬ್ಬಡಿ, ಎಸ್‍ಸಿಆರ್‍ಬಿಯ ಸಿವಿಲ್ ಹೆಡ್‍ಕಾನ್‍ಸ್ಟೇಬಲ್ ರಂಗಶಾಮಯ್ಯ ಅವರುಗಳು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Facebook Comments