ದುನಿಯಾ ವಿಜಯ್ ಸೇರಿ 7 ಮಂದಿಗೆ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

Duniya-Vijay-01
ಬೆಂಗಳೂರು, ನ.3-ಶಾಂತಿ ಮತ್ತು ಸುವ್ಯವಸ್ಥೆ ಹದಗೆಡಿಸಿದ ಆರೋಪದ ಹಿನ್ನೆಲೆಯಲ್ಲಿ ನಟ ದುನಿಯಾ ವಿಜಯ್ ಸೇರಿ 7 ಮಂದಿಗೆ ಗಿರಿನಗರ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾ ಮಲೈ ಅವರ ಎದುರು ಹಾಜರಾಗುವಂತೆ ದುನಿಯಾ ವಿಜಯ್ ಸೇರಿ 7 ಮಂದಿಗೆ ನೋಟಿಸ್ ನೀಡಲಾಗಿದೆ.

ಶಾಂತಿ, ಕಾನೂನು ಸುವ್ಯವಸ್ಥೆ ಹದಗೆಡಿಸಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗಿರಿನಗರ ಪೊಲೀಸರು ನೋಟಿಸ್ ಜಾರಿ ಮಾಡಿ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಸೇರಿ 7 ಮಂದಿ ಸೋಮವಾರ ಡಿಸಿಪಿ ಅಣ್ಣಾಮಲೈ ಅವರ ಎದುರು ಹಾಜರಾಗುವ ಸಾಧ್ಯತೆ ಇದೆ.

ಪಾನಿಪುರಿ ಕಿಟ್ಟಿ ಪ್ರಕರಣ ಆದಾಗಿನಿಂದಲೂ ದುನಿಯಾ ವಿಜಯ್ ಕುಟುಂಬ ಗಲಾಟೆ ತಾರಕಕ್ಕೇರಿದ್ದು, ಅದು ನಿಯಂತ್ರಣಕ್ಕೆ ಬರುವ ಸುಳಿವೇ ಸಿಗುತ್ತಿಲ್ಲ. ಒಮ್ಮೆ ನಾಗರತ್ನ ದೂರು ನೀಡಿದರೆ ಮತ್ತೊಮ್ಮೆ ದುನಿಯಾ ವಿಜಯ್ ದೂರು ನೀಡುತ್ತಿದ್ದರು ಸತತವಾಗಿ ಒಬ್ಬರ ಮೇಲೋಬ್ಬರ ಆರೋಪಗಳನ್ನು ಮಾಡುತ್ತಲೇ ಬರುತ್ತಿದ್ದರು.

ಇದರಿಂದ ಬೇಸತ್ತಿದ್ದ ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ಶಾಂತಿಗೆ ಭಂಗ ತರುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಡಬೇಕೆಂದು ಅಣ್ಣಾಮಲೈ ತಿಳಿಸಿದ್ದರು ಆದರೆ ದುನಿಯಾ ವಿಜಯ್‌ ಮುಚ್ಚಳಿಕೆ ಬರೆದುಕೊಟ್ಟಿರಲಿಲ್ಲ ಹಾಗಾಗಿ ಈಗ ನೊಟೀಸ್ ನೀಡಿದ್ದಾರೆ. ದುನಿಯಾ ವಿಜಯ್ ಹಾಗೂ ಕುಟುಂಬ ಸದಸ್ಯರು ವಿಚಾರಣೆಗೆ ಹಾಜರಾಗಬೇಕಾಗಿದೆ.

Facebook Comments