ರೌಡಿಗಳ ಮನೆ ಮೇಲಿನ ದಾಳಿ ಇಂದೂ ಮುಂದುವರೆಸಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.2- ಸಮಾಜಘಾತುಕ ಶಕ್ತಿಗಳ ವಿರುದ್ಧ ಸಮರವನ್ನು ಮುಂದುವರೆಸಿರುವ ಪೊಲೀಸರು ಇಂದು ಕೂಡ ಹಲವಾರು ರೌಡಿಗಳ ಮನೆ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿದರು. ಮಾಗಡಿ ರಸ್ತೆ ಮತ್ತು ಕೆ.ಪಿ.ಅಗ್ರ ಹಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗುರುತಿಸಲಾದ ರೌಡಿಗಳು ಮತ್ತು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಶಂಕಿತರ ಮನೆಗಳಿಗೆ ಇಂದು ನಸುಕಿನಲ್ಲೇ ದಾಳಿ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಪೊಲೀಸರು ರೌಡಿಗಳ ಮನೆಯ ಮೂಲೆ ಮೂಲೆಗಳಲ್ಲೂ ತಡಕಾಡಿದ್ದು , ಅಕ್ರಮವಾಗಿ ಸಂಗ್ರಹಿಸಲಾದ ವಸ್ತುಗಳನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಿದರು.ಹಲವಾರು ಬಾರಿ ಎಚ್ಚರಿಕೆ ನೀಡಿದಾಗ್ಯೂ ಕೂಡ ಕ್ರಿಮಿ ನಲ್ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದು , ಸಭ್ಯ ಜೀವನ ನಡೆಸುವಂತೆ ಸೂಚಿಸಿ ದ್ದಾರೆ.

ಪೊಲೀಸರ ದಾಳಿಯಿಂದ ಕೆಲವರು ಬೆಚ್ಚಿ ಬಿದ್ದಿದ್ದಾರೆ. ಮುಂದಿನ ದಿನಗಳಲ್ಲಿ ತಾವು ಯಾವುದೇ ಅಕ್ರಮ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಅವಲತ್ತುಕೊಂಡಿದ್ದಾರೆ. ಸುಮಾರು 15 ದಿನಗಳಿಂ ದಲೂ ಬೆಂಗಳೂರಿನಾದ್ಯಂತ ಈ ರೀತಿಯ ಕಾರ್ಯಾಚರಣೆಗಳು ನಡೆಯುತ್ತಿವೆ. ನಿನ್ನೆ ಕೂಡ ಚಾಮರಾಜಪೇಟೆ ಮತ್ತು ಬ್ಯಾಟರಾಯನಪುರ ಪೊಲೀಸರು 63 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದು , ಈ ಸಂದರ್ಭದಲ್ಲಿ ಮಾರಕಾಸ್ತ್ರಗಳನ್ನು ಹೊಂದಿದ್ದ 7 ಮಂದಿಯನ್ನು ಬಂಧಿಸಲಾಗಿತ್ತು.

Facebook Comments