ಕರ್ತವ್ಯಲೋಪವೆಸಗಿದ 10 ಮಂದಿ ಪೊಲೀಸರ ಅಮಾನತು
ಚಿಕ್ಕಮಗಳೂರು, ನ.29- ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಜಿಲ್ಲೆಯ ಒಬ್ಬರು ಪಿಎಸ್ಐ ಸೇರಿದಂತೆ 10 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅಕ್ಷಯ್ ಎಂ.ಹಾಕೆ ಅವರು ಅಮಾನತುಪಡಿಸಿದ್ದಾರೆ.
ನಗರದ ಬಸವನಹಳ್ಳಿ ಠಾಣೆ ಪಿಎಸ್ಐ ಸುದೀಶ್, ಕಾನ್ಸ್ಟೆಬಲ್ಗಳಾದ ಯುವರಾಜ್, ಲಕ್ಷ್ಮಣ್, ಪ್ರದೀಪ್, ಸಂಚಾರಿ ಠಾಣೆ ಕಾನ್ಸ್ಟೆಬಲ್ ಮಂಗಲ್ದಾಸ್, ಗ್ರಾಮಾಂತರ ಠಾಣೆಯ ರಾಜಾನಾಯಕ್, ಹಾಲ್ದೂರು ಠಾಣೆ ಕಾನ್ಸ್ಟೆಬಲ್ಗಳಾದ ಶಶಿಕುಮಾರಸ್ವಾಮಿ, ಅರುಣ್ಕುಮಾರ್, ನವೀನ್ ಮತ್ತು ಶೃಂಗೇರಿ ಠಾಣೆಯ ನಾಗಪ್ಪ ಅವರುಗಳನ್ನು ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ.
ಕರ್ತವ್ಯ ಲೋಪ, ಅಕಾರ ದುರುಪಯೋಗ ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಇವರುಗಳನ್ನು ಅಮಾನತುಪಡಿಸಲಾಗಿದೆ.ಗಾಂಜಾ ಪ್ರಕರಣದಲ್ಲಿ ಹೋಂ ಸ್ಟೇನಲ್ಲಿ ವಶಕ್ಕೆ ಪಡೆದಿದ್ದ ವ್ಯಕ್ತಿಯನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಲ್ದೂರು ಠಾಣೆಯ ನಾಲ್ವರು ಸಿಬ್ಬಂದಿಗಳನ್ನು ಮತ್ತು ವ್ಯಕ್ತಿಯೊಬ್ಬರನ್ನು ಠಾಣೆಗೆ ಕರೆದೊಯ್ದು ಸಂಜೆವರೆಗೂ ಕಾಯಿಸಿ ನಂತರ ಹೋಂ ಸ್ಟೇಯೊಂದಕ್ಕೆ ಕರೆದೊಯ್ದು ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಸವನಹಳ್ಳಿ ಠಾಣೆಯ ನಾಲ್ವರು ಪೆÇಲೀಸರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.