16 ಡಿವೈಎಸ್‍ಪಿಗಳಿಗೆ ಎಸ್‍ಪಿ ಹುದ್ದೆಗೆ ಬಡ್ತಿ, 8 ಮಂದಿ ನಾನ್ ಐಪಿಎಸ್ ಅಕಾರಿಗಳ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.8- ಸಿವಿಲ್ ಡಿವೈಎಸ್‍ಪಿಗಳಾಗಿದ್ದ 16 ಮಂದಿಗೆ ಎಸ್‍ಪಿ ಹುದ್ದೆಗಳಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ, ಜೊತೆಯಲ್ಲೇ 8 ಮಂದಿ ನಾನ್ ಐಪಿಎಸ್ ಅಕಾರಿಗಳನ್ನು ವರ್ಗಾವಣೆಗೊಳಿಸಿದೆ.

ನಗರದ ಉತ್ತರ ಸಂಚಾರ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರನ್ನು ಸಿಐಡಿ ಎಸ್ಪಿಯಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅೀಕ್ಷಕ ಸಜೀತ್ ಅವರನ್ನು ಬೆಂಗಳೂರು ಉತ್ತರ ಸಂಚಾರ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಮಂಗಳೂರಿನ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆಗಿದ್ದ ಲಕ್ಷ್ಮೀ ಗಣೇಶ್ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅೀಕ್ಷಕರಾಗಿ ವರ್ಗಾಯಿಸಲಾಗಿದೆ.

ಯಶೋಧಾ ವಂಟಗೋಡಿ ಅವರನ್ನು ಕರ್ನಾಟಕ ಲೋಕಾಯುಕ್ತ ಎಸ್ಪಿಯನ್ನಾಗಿ, ಜಯಪ್ರಕಾಶ್ ಅವರನ್ನು ಎಸಿಬಿ ಎಸ್ಪಿಆಗಿ, ಶ್ರೀಕಾಂತ ಕಟ್ಟೀಮನಿ ಅವರನ್ನು ಕಲ್ಬುರ್ಗಿ ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯನ್ನಾಗಿ, ಪಿ.ವಿ.ಸ್ನೇಹ ಅವರನ್ನು ಕರ್ನಾಟಕ ಲೋಕಾಯುಕ್ತ ಎಸ್ಪಿ ಹಾಗೂ ಮಹೇಶ್ ಮೇಘಣ್ಣನವರ್‍ರನ್ನು ಕಲಬುರ್ಗಿಯ ಎಸಿಬಿಯ ಎಸ್‍ಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಪೆÇಲೀಸ್ ಇಲಾಖೆಯಲ್ಲಿ ಡಿವೈಎಸ್‍ಪಿ (ಸಿವಿಲï) ವೃಂದದಲ್ಲಿ ಸೇವೆ ಸಲ್ಲಿಸುತ್ತಿರುವ ಅಕಾರಿಗಳಿಗೆ ಎಸ್.ಪಿ. (ಸಿವಿಲ್, ನಾನ್ ಐಪಿಎಸ್) ವೃಂದಕ್ಕೆ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.

ಎಸ್.ಟಿ.ಸಿದ್ದಲಿಂಗಪ್ಪ ಅವರನ್ನು ರಾಜ್ಯ ಗುಪ್ತವಾರ್ತೆ ಪೊಲೀಸ್ ಅೀಕ್ಷಕರಾಗಿ, ಮೊಹಮ್ಮದ್ ಹುಸೇನ್‍ರನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅೀಕ್ಷಕರಾಗಿ, ಬಸಪ್ಪ ಎಸ್.ಅಂಗಡಿ ಅವರನ್ನು ಬೆಂಗಳೂರು ನಗರ ಅಪರಾಧ-2ರ ಉಪ ಪೊಲೀಸ್ ಆಯುಕ್ತರಾಗಿ ವರ್ಗಾಯಿಸಲಾಗಿದೆ.

ಬಿ.ಎಲ್.ವೇಣುಗೋಪಾ ಲ್ ಅವರನ್ನು ಲೋಕಾಯುಕ್ತ ಪೊಲೀಸ್ ಅೀಕ್ಷಕರಾಗಿ, ಗುರುನಾಥ್ ಬಿ.ಮತ್ತೂರು ಅವರನ್ನು ಬಳ್ಳಾರಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧೀಕ್ಷಕರಾಗಿ, ಬೋೀಪಯ್ಯ ಅವರನ್ನು ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧೀಕ್ಷಕರಾಗಿ, ಎಂ.ಮಂಜುನಾಥ್ ಅವರನ್ನು ಲೋಕಾಯುಕ್ತ ಪೊಲೀಸ್ ಅೀಕ್ಷಕರಾಗಿ ವರ್ಗಾಯಿಸಲಾಗಿದೆ.

ಆರ್.ಆರ್.ಕಲ್ಯಾಣಶೆಟ್ಟಿ ಅವರನ್ನು ಬೆಳಗಾವಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕರಾಗಿ, ಸಿ.ಡಬ್ಲ್ಯು.ಪೂವಯ್ಯರನ್ನು ರಾಜ್ಯ ಗುಪ್ತ ವಾರ್ತೆ ಪೊಲೀಸ್ ಅೀಕ್ಷಕ, ಜನಾರ್ದನ್‍ರನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕ, ಚಂದ್ರಶೇಖರ್ ಆರ್.ನೀಲಗಾರ್‍ರನ್ನು ಬೆಳಗಾವಿನಗರ ಅಪರಾಧ ಮತ್ತು ಸಂಚಾರ ಉಪ ಪೊಲೀಸ್ ಆಯುಕ್ತರಾಗಿ, ವಿನಯ್ ಅನಂತ್ ಗಾಂವಕರ್‍ರನ್ನು ಮಂಗಳೂರು ನಗರ ಅಪರಾಧ ಮತ್ತು ಸಂಚಾರ ಉಪ ಪೊಲೀಸ್ ಆಯುಕ್ತರನ್ನಾಗಿ

ವಿನಯï ಕುಮಾರ್ ಆರ್.ಬಿಸ್ನಳ್ಳಿರನ್ನು ಧಾರವಾಡ ಲೋಕಾಯುಕ್ತ ಪೊಲೀಸ್ ಅೀಕ್ಷಕರನ್ನಾಗಿ, ಟಿ.ವೆಂಕಟೇಶ್‍ರನ್ನು ಬೆಂಗಳೂರು ಸಿಐಡಿ ಪೊಲೀಸ್ ಅೀಕ್ಷಕರನ್ನಾಗಿ, ವಿ.ಧನಂಜಯ್ಯರನ್ನು ಗುಪ್ತವಾರ್ತೆ ಪೊಲೀಸ್ ಅೀಕ್ಷಕ, ಎಸ್.ಬದ್ರಿನಾಥ್‍ರನ್ನು ಕಾರವಾರ ಜಿಲ್ಲೆ ಹೆಚ್ಚುವರಿ ಪೊಲೀಸ್ ಅೀಕ್ಷಕರಾಗಿ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.

Facebook Comments

Sri Raghav

Admin