Tuesday, April 16, 2024
Homeಬೆಂಗಳೂರುಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಆ್ಯಪ್

ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಆ್ಯಪ್

ಬೆಂಗಳೂರು,ಡಿ.9- ನಗರದಲ್ಲಿ ಆ್ಯಂಬುಲೆನ್ಸ್‍ಗಳ ಸುಗಮ ಸಂಚಾರಕ್ಕೆ ಹೊಸ ಆ್ಯಪ್‍ನ್ನು ಸಿದ್ದಪಡಿಸಲಾಗುತ್ತಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ. ಸಂಚಾರ ಸಂಪರ್ಕ ದಿವಸ್ ಸಭೆಯಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಗರದಲ್ಲಿ ಪ್ರತಿನಿತ್ಯ 3 ಸಾವಿರಕ್ಕೂ ಹೆಚ್ಚು ಆ್ಯಂಬುಲೆನ್ಸ್‍ಗಳು ಸಂಚಾರ ನಡೆಸುತ್ತವೆ.

ಅವುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಆ್ಯಪ್ ಸಿದ್ದಪಡಿಸುತ್ತಿದ್ದು, ಅದರಲ್ಲಿ ಆ್ಯಂಬುಲೆನ್ಸ್ ಯಾವ ಸ್ಥಳದಿಂದ ಯಾವ ಸ್ಥಳಕ್ಕೆ ಹೋಗಬೇಕು ಎಂಬ ಬಗ್ಗೆ ಮಾಹಿತಿ ಅಪ್‍ಲೋಡ್ ಮಾಡಿದರೆ ಅದನ್ನು ಸಂಚಾರಿ ನಿರ್ವಹಣಾ ಕೇಂದ್ರದ ಸಿಬ್ಬಂದಿ ಪರಿಶೀಲಿಸುತ್ತಿರುತ್ತಾರೆ.

ಆ್ಯಂಬುಲೆನ್ಸ್ ಒಂದೇ ಸಿಗ್ನಲ್‍ನಲ್ಲಿ 60 ಸೆಕೆಂಡ್‍ಗೆ ಹೆಚ್ಚು ಕಾಲ ನಿಂತರೆ ಹಾಗೂ ಆ್ಯಂಬುಲೆನ್ಸ್ ಸಂಚರಿಸುವ ಮುಂದಿನ ಸಿಗ್ನಲ್‍ಗಳಿಗೆ ಮೊದಲೇ ಮಾಹಿತಿ ನೀಡಿ ಸಂಚಾರ ದಟ್ಟಣೆಯನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.

900 ಜಂಕ್ಷನ್‍ಗಳಲ್ಲಿ ಟ್ರಾಫಿಕ್ ಪೊಲೀಸರಿದ್ದು, 400 ಜಂಕ್ಷನ್‍ಗಳಲ್ಲಿ ಟ್ರಾಫಿಕ್ ಲೈಟ್ ಮೂಲಕ ಆ್ಯಂಬುಲೆನ್ಸ್‍ಗಳ ಸುಗಮ ಸಂಚಾರಕ್ಕೆ ಟ್ರಾಫಿಕ್ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಒಂದು ಸಿಗ್ನಲ್‍ನಿಂದ ಮತ್ತೊಂದು ಸಿಗ್ನಲ್‍ಗೆ ವೈರ್‍ಲೆಸ್ ಮುಖಾಂತರ ಮಾಹಿತಿ ನೀಡಲಾಗುತ್ತಿದೆ ಎಂದರು.

31 ಸಾವಿರ ರೈತರ 167 ಕೋಟಿ ಸಾಲಮನ್ನಾಗೆ ಪ್ರಸ್ತಾವನೆ ; ಕೆ.ಎನ್.ರಾಜಣ್ಣ

ಸಂಚಾರ ಸಂಪರ್ಕ ದಿವಸ್ ಸಭೆಗೆ ಆಗಮಿಸಿದ್ದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ತಿಳಿಸಿದರು. ಶಾಂತಿನಗರ, ಲಾಲ್‍ಬಾಗ್ ರಸ್ತೆಗಳಲ್ಲಿ ಹೊಸೂರು ಕಡೆ ಸಂಚರಿಸುವ ತಮಿಳುನಾಡು ಬಸ್‍ಗಳು ರಸ್ತೆಯಲ್ಲಿ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಸಭೆಯಲ್ಲಿ ಹೇಳಿದರು.

ವಾಹನ ಸವಾರರು ಮುಖ್ಯ ರಸ್ತೆಗಳನ್ನು ಬಿಟ್ಟು ಚಿಕ್ಕಚಿಕ್ಕ ರಸ್ತೆಗಳಲ್ಲಿ ಸಂಚರಿಸುವುದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತದೆ, ಇದನ್ನು ಸೂಕ್ತ ರೀತಿಯಲ್ಲಿ ಪೊಲೀಸರು ನಿರ್ವಹಣೆ ಮಾಡಬೇಕು ಎಂದು ಸಾರ್ವಜನಿಕರು ಆಯುಕ್ತರಲ್ಲಿ ಮನವಿ ಮಾಡಿದರು.

RELATED ARTICLES

Latest News